ETV Bharat / state

Capital expenditure: ಮೂಲಸೌಕರ್ಯಕ್ಕೆ ಬಂಡವಾಳ ವೆಚ್ಚ ಅತ್ಯಲ್ಪ! ಇದು ಪಂಚ ಗ್ಯಾರಂಟಿ ಪರಿಣಾಮವೇ? - etv bharat karnataka

Capital expenditure: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳ ಪ್ರಭಾವ ಬಂಡವಾಳ ವೆಚ್ಚದ ಮೇಲಾಗುತ್ತಿದೆ. ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವೆಚ್ಚ ಕಡಿತಗೊಳಿಸಲಾಗುತ್ತಿದೆ ಎಂಬುದು ಹಣಕಾಸು ಇಲಾಖೆಯ ಅಂಕಿಅಂಶಗಳಿಂದ ತಿಳಿಯುತ್ತದೆ.

analysis-of-capital-expenditure-spent-by-the-state-government
ಪಂಚ ಗ್ಯಾರಂಟಿ ಎಫೆಕ್ಟ್?: ಮೊದಲ ತ್ರೈಮಾಸಿಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಾಡಿದ ಬಂಡವಾಳ ವೆಚ್ಚ ಅತ್ಯಲ್ಪ!
author img

By

Published : Aug 13, 2023, 9:55 PM IST

ಬೆಂಗಳೂರು: ಮೂಲಸೌಕರ್ಯ ಅಭಿವೃದ್ಧಿಪಡಿಸುವ ಬಂಡವಾಳ ವೆಚ್ಚಕ್ಕೆ ಮೀಸಲಿರಿಸುವ ಮೊತ್ತದ ಆಧಾರದಲ್ಲಿ ಬಜೆಟ್ ಅಭಿವೃದ್ದಿ ಪೂರಕವೋ ಅಲ್ಲವೋ ಎಂಬುದನ್ನು ವ್ಯಾಖ್ಯಾನಿಸಲಾಗುತ್ತದೆ. ಆದರೆ, ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ಸರ್ಕಾರ ವ್ಯಯಿಸಿರುವ ಬಂಡವಾಳ ವೆಚ್ಚ ನಿರಾಶಾದಾಯಕವಾಗಿದೆ ಎನ್ನುವುದು ಅಂಕಿಅಂಶಗಳಿಂದ ಗೊತ್ತಾಗುತ್ತಿದೆ. ಬಂಡವಾಳ ವೆಚ್ಚ ಎಂದರೆ ರಾಜ್ಯದ ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿ, ಆಸ್ತಿ ಸೃಜನೆಗಾಗಿ ಮಾಡುವ ಮಹತ್ವದ ವೆಚ್ಚವಾಗಿದೆ.

ಬಂಡವಾಳ ವೆಚ್ಚಕ್ಕೆ ಬಜೆಟ್​ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟರೆ, ಅದು ಅಭಿವೃದ್ಧಿಪರ ಬಜೆಟ್ ಎಂದು ಅಂದಾಜಿಸಲಾಗುತ್ತದೆ.‌ ಸರ್ಕಾರ ಬಂಡವಾಳ ವೆಚ್ಚದ ಮೇಲೆ ಯಾವ ರೀತಿ ವ್ಯಯಿಸುತ್ತಿದೆ ಎಂಬುದರ ಆಧಾರದಲ್ಲಿಯೇ ರಾಜ್ಯದ ಅಭಿವೃದ್ಧಿಯ ಗತಿ ನಿರ್ಧಾರವಾಗುತ್ತದೆ.‌ ಪಂಚ ಗ್ಯಾರಂಟಿಗಳ ಪ್ರಭಾವ ಈ ಬಾರಿ ಬಂಡವಾಳ ವೆಚ್ಚದ ಮೇಲಾಗುತ್ತಿರುವುದನ್ನು ಕಾಣಬಹುದು. ಇದರಿಂದ ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.

ಶೇ 11.2ರಷ್ಟು ಬಂಡವಾಳ ವೆಚ್ಚಕ್ಕೆ ಕತ್ತರಿ: ಆರ್ಥಿಕ ವರ್ಷದ ಮೂರು ತಿಂಗಳು ಕಳೆದರೂ ಸರ್ಕಾರ ವ್ಯಯಿಸಿರುವ ಬಂಡವಾಳ ವೆಚ್ಚ ಕುಂಠಿತವಾಗಿದೆ.‌ ಸಿಎಂ ಸಿದ್ದರಾಮಯ್ಯ ಸರ್ಕಾರ ತಮ್ಮ ಬಜೆಟ್‌ನಲ್ಲಿ ಮೀಸಲಿಟ್ಟ ಬಂಡವಾಳ ವೆಚ್ಚದ‌ ಮೊತ್ತ 54,374 ಕೋಟಿ ರೂ.‌ ಆಗಿದೆ. ಕಳೆದ ಬೊಮ್ಮಾಯಿ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್​ನಲ್ಲಿ 61,234 ಕೋಟಿ ರೂ. ಮೀಸಲಿಟ್ಟಿತ್ತು. ಅಂದರೆ ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ 11.2%ರಷ್ಟು ಬಂಡವಾಳ ವೆಚ್ಚಕ್ಕೆ ಕತ್ತರಿ ಬಿದ್ದಿದೆ.

ಪಂಚ ಗ್ಯಾರಂಟಿ ಎಫೆಕ್ಟ್?: ಪಂಚ ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಹುತೇಕ ಸಂಪನ್ಮೂಲವನ್ನು ಸರ್ಕಾರ ಈ ಗ್ಯಾರಂಟಿಗಳ ಜಾರಿಗಾಗಿ ಬಳಸುತ್ತಿದೆ. ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣದತ್ತ ಹೆಚ್ಚಿನ ಕಸರತ್ತು ನಡೆಸುತ್ತಿದೆ. ಅದರ ಎಫೆಕ್ಟ್ ಬಂಡವಾಳ ವೆಚ್ಚದ ಮೇಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಇದಕ್ಕೆ ಆರ್ಥಿಕ ಇಲಾಖೆಯ ತ್ರೈಮಾಸಿಕ ಅಂಕಿಅಂಶ ಇಂಬು ನೀಡುತ್ತಿದೆ.

ಬಂಡವಾಳ ವೆಚ್ಚ ಆರ್ಥಿಕತೆಯ ಭವಿಷ್ಯದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯ ದರ ಹೆಚ್ಚಿಸುತ್ತದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಶಾಸಕರುಗಳಿಗೆ ಗ್ಯಾರಂಟಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಈ ವರ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ. ಇತ್ತ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಅಳೆದೂ ತೂಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸೀಮಿತ ಎಂಬ ಸಂದೇಶವನ್ನು ಸಿಎಂ, ಡಿಸಿಎಂ ಅವರು ತಮ್ಮ ಶಾಸಕರುಗಳ ಗಮನಕ್ಕೆ ಈಗಾಗಲೇ ತಂದಿದ್ದಾರೆ.

ಹಣಕಾಸು ಇಲಾಖೆ ನೀಡಿರುವ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ವ್ಯಯಿಸಿರುವ ಬಂಡವಾಳ ವೆಚ್ಚದ ಅಂಕಿಅಂಶ ನೋಡಿದರೆ, ಸರ್ಕಾರ ಬೊಕ್ಕಸದಿಂದ ಅಳೆದೂ ತೂಗಿ ಹಣ ಬಿಡುಗಡೆ ಮಾಡುತ್ತಿದೆ ಅನ್ನೋದು ತಿಳಿಯುತ್ತದೆ. ರಾಜ್ಯದ ಉತ್ಪಾದಕತೆ, ಆಸ್ತಿ ಸೃಜಿಸುವ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಬಂಡವಾಳ ವೆಚ್ಚದತ್ತ ಹೊಸ ಸರ್ಕಾರ ಹೆಚ್ಚಿನ ಕಾಳಜಿ ಹರಿಸಿಲ್ಲ ಎಂಬುದು ಗೊತ್ತಾಗುತ್ತದೆ.

ಬಂಡವಾಳ ವೆಚ್ಚದ ಸ್ಥಿತಿಗತಿ: 2023-24 ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಮಾಡಿದ ಬಂಡವಾಳ ವೆಚ್ಚ ಕೇವಲ 1,964.42 ಕೋಟಿ ರೂ. ಮಾತ್ರ. ಸಿಎಂ ಸಿದ್ದರಾಮಯ್ಯ ಮಂಡಿಸಿದ ಹೊಸ ಬಜೆಟ್​ನಲ್ಲಿ ಬಂಡವಾಳ ವೆಚ್ಚಕ್ಕೆ 54,374 ಕೋಟಿ ರೂ. ಹಣ ಮೀಸಲಿರಿಸಲಾಗಿತ್ತು. ಅದಕ್ಕೂ ಮುನ್ನ ಬೊಮ್ಮಾಯಿ ಸರ್ಕಾರ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆ 61,234 ಕೋಟಿ ರೂ. ನೀಡಿತ್ತು. ಹೊಸ ಸರ್ಕಾರ ಮಂಡಿಸಿದ ಬಜೆಟ್ ಅಂದಾಜು ಬಂಡವಾಳ ವೆಚ್ಚದ ಎದುರು ಈವರೆಗೆ ಮಾಡಲಾದ ಬಂಡವಾಳ ವೆಚ್ಚ ಕೇವಲ 3.61% ಮಾತ್ರ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

2022-23ನೇ ಸಾಲಿನಲ್ಲಿ ಬಂಡವಾಳ ವೆಚ್ಚವಾಗಿ 46,954.53 ಕೋಟಿ ರೂ. ಅಂದಾಜಿಸಲಾಗಿತ್ತು.‌ ಮೊದಲ ತ್ರೈಮಾಸಿಕದಲ್ಲಿ ಆ ಪೈಕಿ 4,560.35 ಕೋಟಿ ರೂ. ಬಂಡವಾಳ ವೆಚ್ಚ ಮಾಡಿತ್ತು.‌ ಅಂದರೆ ಮೊದಲ ತ್ರೈಮಾಸಿಕದಲ್ಲಿ 9.71% ಬಂಡವಾಳ ವೆಚ್ಚವನ್ನು ಮಾಡಲಾಗಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ. ಆರ್ಥಿಕ ವರ್ಷದ ಮೊದಲ ಒಂದೂವರೆ ತಿಂಗಳು ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಇದ್ದ ಕಾರಣ ಬಂಡವಾಳ ವೆಚ್ಚ ಹೆಚ್ಚಿಗೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬಳಿಕದ ಒಂದೂವರೆ ತಿಂಗಳಲ್ಲೂ ಹೆಚ್ಚಿನ ಬಂಡವಾಳ ವೆಚ್ಚ ಮಾಡಲು ಹೊಸ ಸರ್ಕಾರ ಮುಂದಾಗಿಲ್ಲ.

ಜೂನ್‌ನಲ್ಲಿ ಕೇವಲ ₹50.42 ಕೋಟಿ ಬಂಡವಾಳ ವೆಚ್ಚ!: ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್​ನಲ್ಲಿ ಒಟ್ಟು 141.42 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿತ್ತು. ಮೇ ತಿಂಗಳಲ್ಲಿ ಮಾಡಲಾದ ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆಯಾಯಿತು. ಮೇ ತಿಂಗಳಲ್ಲಿ ಒಟ್ಟು 1,772.85 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಮತ್ತೆ ಮಾಡಲಾದ ಬಂಡವಾಳ ವೆಚ್ಚ ತೀವ್ರ ಕುಸಿತ ಕಂಡಿದೆ. ಜೂನ್ ತಿಂಗಳಲ್ಲಿ ಕೇವಲ 50.42 ಕೋಟಿ ರೂ. ಮಾತ್ರ ಬಂಡವಾಳ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ಆರ್ಥಿಕ ಇಲಾಖೆ ನೀಡಿದೆ. ಹೀಗಾಗಿ ಪಂಚ ಗ್ಯಾರಂಟಿಗಳಿಗಾಗಿ ಹೊಸ ಸರ್ಕಾರ ಬಂಡವಾಳ ವೆಚ್ಚದ ಮೇಲೆ ಹೆಚ್ಚಿನ ಆದ್ಯತೆ ನೀಡಿಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಕೊರತೆ: ಬರ ಘೋಷಣೆಗಾಗಿ ಕಠಿಣ ಮಾನದಂಡ ಸಡಿಲಿಸಲು ಕೋರಿ ಕೇಂದ್ರಕ್ಕೆ ಸಿಎಂ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.