ETV Bharat / state

ಮಗನ ಮದುವೆಯಲ್ಲಿ ಅಪ್ಪನಿಗೆ ಪ್ರೇಮಾಂಕುರ, ನಂತರ ಪ್ರೇಮಿಗೆ ವಂಚನೆ ಆರೋಪ ; ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ!

ಮಗನ ಮದುವೆ ಸಂದರ್ಭದಲ್ಲಿ ಅಪ್ಪನಿಗೆ ಲವ್​ ಆಗಿದ್ದು, ಈಗ ಆತ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ವೃದ್ಧೆ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಪ್ರಸಂಗ ಬೆಳಕಿಗೆ ಬಂದಿದೆ.

author img

By

Published : Aug 21, 2023, 11:43 AM IST

Updated : Aug 21, 2023, 11:58 AM IST

old man cheated an old woman  An old man cheated to old woman  man cheated to old woman o  ಮಗನ ಮದುವೆಯಲ್ಲಿ ಅಪ್ಪನಿಗೆ ಪ್ರೇಮಾಂಕುರ  ನಂತರ ಪ್ರೇಮಿಗೆ ವಂಚನೆ  ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ  ಮಗನ ಮದುವೆ ಸಂದರ್ಭದಲ್ಲಿ ಅಪ್ಪನಿಗೆ ಲವ್​ ಆತ ಮೋಸ ಮಾಡಿದ್ದಾನೆ ಎಂದು ವೃದ್ಧೆ  ವೃದ್ಧೆ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಪ್ರಸಂಗ  ತನ್ನನ್ನ ಮದುವೆಯಾಗುವುದಾಗಿ ನಂಬಿಸಿ  ಮದುವೆಯಾಗುವಂತೆ ದೂರುದಾರೆ 70 ವರ್ಷದ ವೃದ್ಧನಿಗೆ  ಬನಶಂಕರಿ 2ನೇ ಹಂತದ ಪದ್ಮನಾಭನಗರ
ಮಗನ ಮದುವೆಯಲ್ಲಿ ಅಪ್ಪನಿಗೆ ಪ್ರೇಮಾಂಕುರ, ನಂತರ ಪ್ರೇಮಿಗೆ ವಂಚನೆ

ಬೆಂಗಳೂರು : 70 ವರ್ಷದ ವೃದ್ದನೊಬ್ಬ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ನಂತರ ಮದುವೆಗೆ ನಿರಾಕರಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ 63 ವರ್ಷದ ವೃದ್ದೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ನೊಂದ ವೃದ್ದೆ ನೀಡಿರುವ ದೂರಿನನ್ವಯ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರೆಯ ಪತಿ ಹಾಗೂ ಆರೋಪಿತನ ಪತ್ನಿ ಸಾವನ್ನಪ್ಪಿದ್ದು, ಐದು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಆರೋಪಿ ತನ್ನ ಮಗನ ಮದುವೆಗೆ ವಧು ಹುಡುಕುತ್ತಿದ್ದಾಗ ವೃದ್ಧೆಯ ಪರಿಚಯವಾಗಿತ್ತು. ಮದುವೆಯನ್ನ ಇಬ್ಬರೂ ಸಹ ಜೊತೆ ನಿಂತು ಮಾಡಿದ್ದರು. ನಂತರ ಇಬ್ಬರ ನಡುವೆ ಸಲುಗೆ ಕೂಡಾ ಬೆಳೆದಿತ್ತು ಎಂದು ತಿಳಿದುಬಂದಿದೆ.

ಇವರಿಬ್ಬರೂ ಸಹ ಮೈಸೂರು, ದಾವಣೆಗೆರೆ, ಬೆಳಗಾವಿ ಅಂತಾ ಪ್ರವಾಸಕ್ಕೂ ಹೋಗಿದ್ದರು. ಅದೇ ಸಂದರ್ಭದಲ್ಲಿ ತನ್ನನ್ನ ಮದುವೆಯಾಗುವಂತೆ ದೂರುದಾರೆ 70 ವರ್ಷದ ವೃದ್ಧನಿಗೆ ಕೇಳಿದ್ದರು. ಆರಂಭದಲ್ಲಿ ಸಮ್ಮತಿಸಿದ್ದ ಆರೋಪಿ, ನಂತರ ಆಕೆಯನ್ನ ನಿರ್ಲಕ್ಷ್ಯಿಸಲಾರಂಭಿಸಿದ್ದಾರೆ. ಅಲ್ಲದೇ ತಾನು ಕರೆದಾಗ ಮಾತ್ರ ಬರಬೇಕು, ಇಲ್ಲವಾದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ವೃದ್ದ ಮಹಿಳೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: Server Hack: ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್, ಕೋಟ್ಯಂತರ ಹಣ ವಂಚನೆ; ಓರ್ವನ ಬಂಧನ

ವೃದ್ಧೆಗೆ 3.5 ಕೋಟಿ ರೂಪಾಯಿ ವಂಚನೆ : ವೃದ್ಧೆಯನ್ನು ಯಾಮಾರಿಸಿ ಮೂರೂವರೆ ಕೋಟಿ ರೂಪಾಯಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದ ಆರೋಪಿಗಳನ್ನು ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. 63 ವರ್ಷದ ಶಾಂತಾ ಎಂಬವರಿಗೆ ವಂಚಿಸಿದ್ದ ಅಪೂರ್ವ ಯಾದವ್, ಈಕೆಯ ತಾಯಿ ವಿಶಾಲ, ಸ್ನೇಹಿತೆ ಅರುಂಧತಿ ಹಾಗೂ ಪತಿ ರಾಕೇಶ್ ಬಂಧಿತರು.

ಪ್ರಕರಣದ ವಿವರ: ಬನಶಂಕರಿ 2ನೇ ಹಂತದ ಪದ್ಮನಾಭನಗರದಲ್ಲಿ ವಾಸವಿದ್ದ ವೃದ್ಧೆ ಶಾಂತಾ ಅವರ ಪತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದರು. ಶಾಂತಾ ಮತ್ತು ಅವರ ಪುತ್ರಿ ಮಾತ್ರ ಮನೆಯಲ್ಲಿ ವಾಸವಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅರುಂಧತಿ ಮತ್ತು ರಾಕೇಶ್ ದಂಪತಿ ಇನ್ಶುರೆನ್ಸ್ ಪಾಲಿಸಿ ಮಾಡಿಸುವ ನೆಪದಲ್ಲಿ ಶಾಂತಾರನ್ನು ಪರಿಚಯಿಸಿಕೊಂಡಿದ್ದಾರೆ. ಬಳಿಕ 'ನಿಮ್ಮ ಮನೆಯಲ್ಲಿ ದೋಷ ಇದೆ, ಮಾರಾಟ ಮಾಡಿ ಬಿಡಿ‌' ಎಂದು ನಂಬಿಸಿ, ತಾವೇ ಬ್ರೋಕರ್ ಮತ್ತು ಖರೀದಿದಾರರನ್ನು ಕರೆಸಿಕೊಂಡು ಮಾರಾಟ ಮಾಡಿಸಿದ್ದರು. ಮನೆ ಮಾರಾಟದಿಂದ ಮೂರುವರೆ ಕೋಟಿ ರೂ ಹಣ ಶಾಂತಾರ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ವೃದ್ಧೆಯನ್ನು ಯಾಮಾರಿಸಿ ಈ ಹಣವನ್ನು ಲಪಟಾಯಿಸಿದ್ದರು. ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

Last Updated : Aug 21, 2023, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.