ETV Bharat / state

ಪೊಲೀಸ್​ ಅಧಿಕಾರಿ ವಿರುದ್ಧ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಆರೋಪ : ಎಎಸ್​ಐ ವಿರುದ್ದ ದಾಖಲಾಯ್ತು ಪ್ರಕರಣ - ಈಟಿವಿ ಭಾರತ ಕನ್ನಡ

ಬೆಂಗಳೂರಿನದ ಸಹಾಯಕ ಸಬ್ ಇನ್ಸ್‌ಪೆಕ್ಟರೊಬ್ಬರು ಇಬ್ಬರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸ್​ ಅಧಿಕಾರಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಆರೋಪ

author img

By ETV Bharat Karnataka Team

Published : Oct 28, 2023, 1:01 PM IST

Updated : Oct 28, 2023, 2:16 PM IST

ಘಟನೆಯ ದೃಶ್ಯಗಳು ಸೆರೆ

ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 25ರಂದು ರಾತ್ರಿ ವಿಜಯನಗರದ ಆರ್.ಪಿ.ಸಿ ಲೇಔಟ್ 6ನೇ ಮುಖ್ಯರಸ್ತೆಯಲ್ಲಿ ದಯಾನಂದ್ ಹಾಗೂ ಶಶಿಧರ್ ಎಂಬುವವರ ಮೇಲೆ ಮಾಗಡಿ ರಸ್ತೆ ಠಾಣೆಯ ಎಎಸ್ಐ ಶ್ರೀನಿವಾಸ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪವೇನು? ದೂರಿನಲ್ಲಿ ಇರುವುದೇನು?: ಅಕ್ಟೋಬರ್ 25ರಂದು ರಾತ್ರಿ 10:30ರ ಸುಮಾರಿಗೆ ಆರ್.ಪಿ.ಸಿ ಲೇಔಟಿನ ತೇಜಸ್ವಿನಿ ಬಾರ್​ನಲ್ಲಿ ಮದ್ಯಪಾನ ಮಾಡುತ್ತಿದ್ದ ದಯಾನಂದ್, ಶಶಿಧರ್ ಎಂಬುವವರನ್ನ ಉದ್ದೇಶಿಸಿ ಆನಂದ್ ಎಂಬಾತ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದ. ಇದಕ್ಕೆ ಪ್ರತಿಯಾಗಿ 'ಯಾರು ನೀನು, ನಮ್ಮನ್ನ ಯಾಕೆ ಬೈತಿದ್ದೀಯಾ? ಯಾವ ಏರಿಯಾ ನಿಂದು?' ಎಂದು ಆನಂದನನ್ನ ದಯಾನಂದ್ ಪ್ರಶ್ನಿಸಿದ್ದ. 'ನಂದು ಇದೇ ಏರಿಯಾ' ಎಂದು ಆನಂದ್ ಉತ್ತರಿಸಿದಾಗ, 'ನಿನ್ನನ್ನ ಈ ಏರಿಯಾದಲ್ಲಿ ನೋಡಿಲ್ವಲ್ಲ?' ಎಂದು ದಯಾನಂದ್ ಪ್ರಶ್ನಿಸಿದಾಗ 'ಬೇಕಾದ್ರೆ ಬಾ ಮನೆ ತೋರಿಸ್ತಿನಿ' ಎಂದಿದ್ದ ಆನಂದ್, ತನ್ನದೇ ಆಟೋದಲ್ಲಿ ಬಲವಂತವಾಗಿ ದಯಾನಂದ್ ಹಾಗೂ ಶಶಿಧರ್ ನನ್ನ ಕೂರಿಸಿಕೊಂಡು ತನ್ನ ಚಿಕ್ಕಪ್ಪ ಎಎಸ್ಐ ಶ್ರೀನಿವಾಸ್ ಮನೆ ಬಳಿ ಕರೆತಂದಿದ್ದ. ನಂತರ ಆಟೋದಿಂದ ಇಳಿದವನೇ 'ಇವ್ರಿಬ್ರು ಕಳ್ಳರು‌, ಚಿಕ್ಕಪ್ಪ ಬೇಗ ಬನ್ನಿ' ಎಂದು ಕೂಗಾಡಲಾರಂಭಿಸಿದ್ದ. ತಕ್ಷಣ ಒಂದು ಕೈಯಲ್ಲಿ ಮಾರಕಾಸ್ತ್ರ, ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು ಓಡಿ ಬಂದಿದ್ದ ಶ್ರೀನಿವಾಸ್, ಏನು ಎತ್ತ ಎಂದು ಪ್ರಶ್ನಿಸಿದೇ ನಡು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಲಾರಂಭಿಸಿದ್ದಾರೆ. ಇದಕ್ಕೆ ಮಗ ಮತ್ತು ಮಗಳು ಸಹ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿವೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಠಾಣೆಯ ಹೊಯ್ಸಳ ಸಿಬ್ಬಂದಿ, ಶ್ರೀನಿವಾಸರ ಹಲ್ಲೆಯಿಂದ ಗಾಯಗೊಂಡಿದ್ದ ದಯಾನಂದ್ ಹಾಗೂ ಶಶಿಧರ್​ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಗಾಯಾಳುಗಳಿಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಶ್ರೀನಿವಾಸ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಶ್ರೀನಿವಾಸ್ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರೆದಿದೆ.

ಇದನ್ನೂ ಓದಿ: ಕೋಲಾರ: ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡೇಟು

Last Updated : Oct 28, 2023, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.