ETV Bharat / state

ಫುಟ್​ಪಾತ್​ ಮೇಲೆ ಶವವಿರಿಸಿ ಹೋಗಿದ್ದ ಆ್ಯಂಬುಲೆನ್ಸ್ ಚಾಲಕ ಬಂಧನ - ಬೆಂಗಳೂರು ಇತ್ತೀಚಿನ ಸುದ್ದಿ

ಹೆಬ್ಬಾಳ ಚಿತಾಗಾರ ಉಸ್ತುವಾರಿ ಸತೀಶ್ ಎಂಬುವರು ನೀಡಿದ ದೂರಿನ ಮೇರೆಗೆ ತುಮಕೂರು ಮೂಲದ‌ ಆ್ಯಂಬುಲೆನ್ಸ್ ಚಾಲಕ ಶರತ್ ಗೌಡ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ‌ ನಾಗೇಶ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಚಾಲಕ ಬಂಧನ
ಚಾಲಕ ಬಂಧನ
author img

By

Published : May 28, 2021, 7:02 PM IST

ಬೆಂಗಳೂರು : ಕೋವಿಡ್​ನಿಂದ ಮೃತಪಟ್ಟಿದ್ದ ವ್ಯಕ್ತಿಯ ಶವ ಸಾಗಿಸಲು 18 ಸಾವಿರ ರೂ. ಹಣ ಕೊಟ್ಟಿಲ್ಲ ಎಂದು ಶವವನ್ನು ಪಾದಚಾರಿ ಮಾರ್ಗದಲ್ಲಿ ಇಳಿಸಿ ಅಮಾನವೀಯತೆ ಮೆರೆದಿದ್ದ ಆ್ಯಂಬುಲೆನ್ಸ್ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ ಚಿತಾಗಾರ ಉಸ್ತುವಾರಿ ಸತೀಶ್ ಎಂಬುವರು ನೀಡಿದ ದೂರಿನ ಮೇರೆಗೆ ತುಮಕೂರು ಮೂಲದ‌ ಆ್ಯಂಬುಲೆನ್ಸ್ ಚಾಲಕ ಶರತ್ ಗೌಡ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ‌ ನಾಗೇಶ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ Fungus ಇಂಜೆಕ್ಷನ್ ಕೊರತೆ: ಕೇಂದ್ರದಿಂದ ಈವರೆಗೆ ಪೂರೈಸಿದ ವಯಲ್ಸ್ ಖಾಲಿ..!

ಕಳೆದ‌ ಮೇ 24 ರಂದು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನುಜ್ ಸಿಂಗ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಹೆಬ್ಬಾಳದ ಚಿತಾಗಾರಕ್ಕೆ ಶವ ಸಾಗಿಸಲು ಕುಟುಂಬಸ್ಥರ ಬಳಿ ಹಣ ಇರಲಿಲ್ಲ. ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ನಾಗೇಶ್, ಆಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲು ಹಣಕ್ಕೆ‌ ಡಿಮ್ಯಾಂಡ್ ಮಾಡಿದ್ದಾನೆ‌. ಆ್ಯಂಬುಲೆನ್ಸ್​​ನಲ್ಲಿ ಚಿತಾಗಾರಕ್ಕೆ ಶವ ಸಾಗಿಸಲು ಚಾಲಕ 18 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ.
ಈ ವೇಳೆ 3 ಸಾವಿರ ರೂ.ಹಣ ಹೊಂದಿಸಿ ಉಳಿದ ಹಣ ಕೊಡುವುದಾಗಿ ಮೃತನ ಪತ್ನಿ ಹೇಳಿದ್ದಳು. ಚಿತಾಗಾರದ ಬಳಿ ಬಂದು ಉಳಿದ ಹಣ ಕೊಡುವಂತೆ ಆ್ಯಂಬುಲೆನ್ಸ್ ಚಾಲಕ ಗಲಾಟೆ ಮಾಡಿದ್ದಾನೆ. ಹಣ ನೀಡದಿದ್ದರಿಂದ ಕೊನೆಗೆ ಶವವನ್ನು ಪುಟ್ ಪಾತ್ ಮೇಲೆ ಇಳಿಸಿ ಆ್ಯಂಬುಲೆನ್ಸ್ ಚಾಲಕ ಎಸ್ಕೇಪ್ ಆಗಿದ್ದ.‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.