ಬೆಂಗಳೂರು : ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನ ಸಮರ್ಥವಾಗಿ ನಿಭಾಯಿಸಲು ಅಗತ್ಯ ಇರುವ ಏರಿಯಲ್ ಲ್ಯಾಡರ್ ವಾಹನ ಕೊನೆಗೂ ನಗರದ ಅಗ್ನಿಶಾಮಕ ದಳದ ಕೈಸೇರಿದೆ.
![aerial ladder vehicle](https://etvbharatimages.akamaized.net/etvbharat/prod-images/kn-bng-01-aerial-lader-vehicle-kac10035_19102022155602_1910f_1666175162_570.jpg)
90 ಮೀಟರ್‌ಗಳಷ್ಟು ಎತ್ತರದ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅದನ್ನು ಎದುರಿಸಲು ಸಹಾಯಕಾರಿಯಾಗಬಲ್ಲ ಲ್ಯಾಡರ್ ವಾಹನವನ್ನು ಫಿನ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಬೇಗೂರಿನ ಬಳಿ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಸೂಕ್ತ ಸಮಯಕ್ಕೆ ಅಗ್ನಿಶಾಮಕ ದಳ ತಲುಪುವ ವ್ಯವಸ್ಥೆ ಇರದ ಮಹಿಳೆಯೊಬ್ಬರು ಸಜೀವ ದಹನವಾಗಿದ್ದರು. ಇಂಥ ಘಟನೆಗಳಿಂದ ಎಚ್ಚೆತ್ತ ರಾಜ್ಯ ಅಗ್ನಿಶಾಮಕ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಪ್ರಸ್ತಾವನೆ ಇಟ್ಟಿತ್ತು.
![aerial ladder vehicle](https://etvbharatimages.akamaized.net/etvbharat/prod-images/kn-bng-01-aerial-lader-vehicle-kac10035_19102022155602_1910f_1666175162_897.jpg)
ಸುಮಾರು 25 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಗೃಹ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಸಿದ್ದು, ಮುಂಬೈ ಮೂಲಕ ಬೆಂಗಳೂರು ತಲುಪಿದೆ. ದೇಶದಲ್ಲೇ ಮುಂಬೈ ಬಳಿಕ ಏರಿಯಲ್ ಲ್ಯಾಡರ್ ಸೌಲಭ್ಯ ಪಡೆದ ಎರಡನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.
![aerial ladder vehicle](https://etvbharatimages.akamaized.net/etvbharat/prod-images/kn-bng-01-aerial-lader-vehicle-kac10035_19102022155602_1910f_1666175162_778.jpg)
![aerial ladder vehicle](https://etvbharatimages.akamaized.net/etvbharat/prod-images/kn-bng-01-aerial-lader-vehicle-kac10035_19102022155602_1910f_1666175162_23.jpg)
![aerial ladder vehicle](https://etvbharatimages.akamaized.net/etvbharat/prod-images/kn-bng-01-aerial-lader-vehicle-kac10035_19102022155602_1910f_1666175162_447.jpg)
ಇದನ್ನೂ ಓದಿ: ಬಿಎಚ್‌ಇಎಲ್‌ನಲ್ಲಿ ಅಗ್ನಿ ಅವಘಡ: 18 ವಿದ್ಯತ್ ಫಲಕಗಳು ಬೆಂಕಿಗಾಹುತಿ