ETV Bharat / state

ಸೋಂಕಿತರ ಸಂಖ್ಯೆ ಲಕ್ಷ ಮುಟ್ಟುವ ಮೊದಲೇ 50 ಸಾವಿರ ದಾಟಿದ ಸಕ್ರಿಯ ಪ್ರಕರಣ - Bangalore covid Hospital

ರಾಜ್ಯದಲ್ಲಿ ಕೊರೊನಾ ಆರ್ಭಟ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇನ್ನೂ ಸೋಂಕಿತರ ಸಂಖ್ಯೆ 1 ಲಕ್ಷ ದಾಟುವ ಮೊದಲೆ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ದಾಟಿದ್ದು, ಸರ್ಕಾರಕ್ಕೆ ಇನ್ನಷ್ಟು ಸವಾಲಾಗಿದೆ.

An active case that crossed 50 thousand before the number of infected people reached 1lakhs
ಸೋಂಕಿತರ ಸಂಖ್ಯೆ ಲಕ್ಷ ಮುಟ್ಟುವ ಮೊದಲೇ 50 ಸಾವಿರ ದಾಟಿದ ಸಕ್ರಿಯ ಪ್ರಕರಣ
author img

By

Published : Jul 25, 2020, 3:06 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ಇತರ ರಾಜ್ಯಗಳಿಗಿಂತ ಕರ್ನಾಟಕದ ಕೊರೊನಾ ಪ್ರಕರಣ ವಿಭಿನ್ನವಾಗಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣ 1 ಲಕ್ಷ ದಾಟುವ ಮುನ್ನವೇ ಸಕ್ರಿಯ ಪ್ರಕರಣಗಳು 50 ಸಾವಿರದ ಗಡಿ ದಾಟಿದೆ.

ಪಕ್ಕದ ಮಹಾರಾಷ್ಟ್ರ, ತಮಿಳುನಾಡು ಬಳಿಕ ಕರ್ನಾಟಕ 50 ಸಾವಿರ ಸಕ್ರಿಯ ಕೇಸ್​ಗಳನ್ನು ಹೊಂದಿದೆ. ಆದರೆ, ಮಹಾರಾಷ್ಟ್ರ, ತಮಿಳುನಾಡಿಗಿಂತ ರಾಜ್ಯದ ಚಿತ್ರಣ ಭಿನ್ನವಾಗಿದೆ.

ಮಹಾರಾಷ್ಟ್ರ ಹಾಗೂ ತಮಿಳುನಾಡಲ್ಲಿ 50 ಸಾವಿರ ಸಕ್ರಿಯ ಪ್ರಕರಣ ತಲುಪುವಾಗ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿ ಹೋಗಿತ್ತು. ಆದರೆ, ಕರ್ನಾಟಕದಲ್ಲಿ 85,870 ಕೇಸ್​​ಗಳು ಇರುವಾಗಲೇ 52,791 ಸಕ್ರಿಯ ಪ್ರಕರಣ ಹೊಂದಿದೆ.

ಲಕ್ಷ ಸೋಂಕಿತರ ಸಂಖ್ಯೆ ದಾಟುವ ಮುನ್ನವೇ 50 ಸಾವಿರ ಸಕ್ರಿಯ ಕೇಸ್ ಹೊಂದಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಮಹಾರಾಷ್ಟ್ರ 50 ಸಾವಿರ ಸಕ್ರಿಯ ಕೇಸ್ ಹೊಂದಿದ್ದಾಗ ಒಟ್ಟು ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟಿತ್ತು. ತಮಿಳುನಾಡು ಕೂಡ 50 ಸಾವಿರ ಸಕ್ರಿಯ ಕೇಸ್ ಹೊಂದಿದ್ದಾಗ ಒಂದು ಲಕ್ಷಕ್ಕೂ ಹೆಚ್ಚು ಕೇಸ್ ಆಗಿತ್ತು.

ಜುಲೈ ಆರಂಭದಲ್ಲಿ ಉಂಟಾದ ಕೊರೊನಾ ಸ್ಫೋಟವೇ ಇದಕ್ಕೆಲ್ಲಾ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರೀಕ್ಷೆಗೂ ಮೀರಿ ಕೊರೊನಾ ಸಂಖ್ಯೆ ಹೆಚ್ಚಳವಾಗಿದೆ. ಅಂತರ್ ಜಿಲ್ಲೆಗಳ ಓಡಾಟವೇ ಸೋಂಕು ಹೆಚ್ಚು ಹರಡಲು ಕಾರಣವಾಗಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.