ETV Bharat / state

ವಿಮಾನದಲ್ಲಿ ಧೂಮಪಾನ ಆರೋಪ: ಪ್ರಯಾಣಿಕನ ವಿರುದ್ಧ ಕೇಸ್ ದಾಖಲು - ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕ

ವಿಮಾನದಲ್ಲಿ ಧೂಮಪಾನ ಆರೋಪದ ಹಿನ್ನಲೆ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

Alleged smoking in flight
ವಿಮಾನದಲ್ಲಿ ಧೂಮಪಾನ ಆರೋಪ: ಪ್ರಯಾಣಿಕನ ವಿರುದ್ಧ ಕೇಸ್ ದಾಖಲು
author img

By

Published : May 16, 2023, 11:04 PM IST

ಬೆಂಗಳೂರು: ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿ ಧೂಮಪಾನ ಮಾಡಿದ ಆರೋಪದ ಮೇಲೆ ಪ್ರವೀಣ್ ಕುಮಾರ್ ಎಂಬ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವೀಣ್ ಕುಮಾರ್ ವಿರುದ್ಧ ಪ್ರಕರಣ ದಾಖಲು: ಪ್ರವೀಣ್‌ಕುಮಾರ್, ಆಕಾಶ ಏರ್‌ಲೈನ್ಸ್ ಸಂಸ್ಥೆಯ ಕ್ಯೂಪಿ-1326 ವಿಮಾನದಲ್ಲಿ ಮಂಗಳವಾರ ಮಧ್ಯಾಹ್ನ 1.10ಕ್ಕೆ ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದರು. ಅವರು ಮಾರ್ಗ ಮಧ್ಯೆ ವಿಮಾನದಲ್ಲಿ ಧೂಮಪಾನ ಮಾಡಿ ಏರ್‌ಕ್ರಟಾ ನಿಯಮ-25, ಸಹ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆ ನಿಯಮ ಉಲ್ಲಂಘಿಸಿದ್ದಾರೆ. ಈ ಸಂಬಂಧ ಕೆಐಎಎಲ್ ಎಸ್‌ಎನ್‌ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಡ್ಯೂಟಿ ಮ್ಯಾನೇಜರ್ ನೀಡಿದ ದೂರು ಆಧರಿಸಿ ಪ್ರವೀಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಕೇಸ್​.. ಆರೋಪ ಪಟ್ಟಿ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿಮಾನದಲ್ಲಿ ಮಹಿಳಾ ಪ್ರಯಾಣಿಕರಿಗೆ ಕಚ್ಚಿದ ಚೇಳು: ನಾಗ್ಪುರದಿಂದ ಮುಂಬೈಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಚೇಳು ಕಚ್ಚಿರುವ ಘಟನೆಯು ಎಪ್ರಿಲ್​ನಲ್ಲಿ ಜರುಗಿತ್ತು. ಈ ಕುರಿತು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಯ ಇತ್ತೀಚೆಗಿನ ಮಾಹಿತಿ ನೀಡಿತ್ತು. ನಂತರ ಮಹಿಳಾ ಪ್ರಯಾಣಿಕರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ದೇಶದ ವಿರುದ್ಧ ಬೇಹುಗಾರಿಕೆ ಆರೋಪ: ಫ್ರೀಲಾನ್ಸ್​ ಪತ್ರಕರ್ತನ ವಿರುದ್ಧ ಸಿಬಿಐ ಕೇಸ್​

ಎ.23ರಂದು ನಾಗ್ಪುರದಿಂದ ಮುಂಬೈಗೆ ಏರ್​ ಇಂಡಿಯಾ ಎಐ-630 ವಿಮಾನದಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ವಿಮಾನದಲ್ಲಿ ಮಹಿಳಾ ಪ್ರಯಾಣಿಕರಿಗೆ ಚೇಳು ಕಚ್ಚಿದೆ ಎಂದು ಏರ್​ ಇಂಡಿಯಾ ತಿಳಿಸಿದೆೆ. ನಂತರ ಮಹಿಳಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯರು ಚಿಕಿತ್ಸೆ ನೀಡಿದರು. ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಿ ಮಹಿಳಾ ಪ್ರಯಾಣಿಕರನ್ನು ಡಿಸ್ಚಾರ್ಜ್​ ಮಾಡಿದರು. ಈ ಘಟನೆ ನಂತರ ಏರ್​ ಇಂಡಿಯಾ ವಿಮಾನದ ಇಂಜಿನಿಯರಿಂಗ್​ ತಂಡವು ವಿಮಾನವನ್ನು ಪರಿಶೀಲನೆ ನಡೆಸಿದಾಗ ಚೇಳು ಪತ್ತೆಯಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ಆಟೋರಿಕ್ಷಾ - ಟ್ಯಾಂಕರ್ ನಡುವೆ ಡಿಕ್ಕಿ: 9 ಜನ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.