ಬೆಂಗಳೂರು: ಚಿಕಿತ್ಸೆಗಾಗಿ ಕ್ಲಿನಿಕ್ಗೆ ಬರುವ ಮಹಿಳಾ ರೋಗಿಗಳಿಗೆ ಚಿಕಿತ್ಸೆ ಕೊಡುವ ಸೋಗಿನಲ್ಲಿ ಬಟ್ಟೆ ತೆಗೆಸಿ ಅಂಗಾಂಗ ಮುಟ್ಟಿ, ರಹಸ್ಯವಾಗಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ ವೈದ್ಯನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕಳೆದ 10 ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿ, ನಂತರ ಮೆಜೆಸ್ಟಿಕ್ ಬಳಿಯ ಆಯುರ್ವೇದ ಕಾಲೇಜಿನಲ್ಲಿ ಪರಿಚಿತ ವ್ಯಕ್ತಿಯೊಬ್ಬರ ನೆರವಿನಿಂದ ಜಯನಗರದ ಆ್ಯಕೂಪೈ ಇನ್ಸ್ಟಿಟ್ಯೂಟ್ನಲ್ಲಿ ಎರಡು ವರ್ಷಗಳ ಕಾಲ ಆಕ್ಯೂಪಂಕ್ಚರ್ ಚಿಕಿತ್ಸೆ ತರಬೇತಿ ಪಡೆದಿದ್ದ. ಕಳೆದ ನಾಲ್ಕು ವರ್ಷಗಳಿಂದ ಕ್ಲಿನಿಕ್ ಓಪನ್ ಮಾಡಿದ್ದ ಎನ್ನಲಾಗ್ತಿದೆ.
ಕ್ಲಿನಿಕ್ಗೆ ಬರುವ ಮಹಿಳಾ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ಸೋಗಿನಲ್ಲಿ ಬಟ್ಟೆ ಬಿಚ್ಚಿಸಿ ರಹಸ್ಯವಾಗಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಹಿಳಾ ರೋಗಿಯ ಪತಿಗೆ ಕರೆ ಮಾಡಿ ವಿಡಿಯೋ ಕಳುಹಿಸಿದ್ದಾಗ ವೈದ್ಯನ ಕರಾಳಮುಖ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ವೈದ್ಯ ಬಂಧನ
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ವೈದ್ಯನನ್ನು ಸಿಸಿಬಿ ಮಹಿಳಾ ಸಂರಕ್ಷದಳದ ಅಧಿಕಾರಿಗಳು ಆಂಧ್ರದಲ್ಲಿ ಸೆರೆ ಹಿಡಿದಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದ್ದಾರೆ.