ETV Bharat / state

ಪಿಎಸ್ಐ ಅಕ್ರಮ : ಎಡಿಜಿಪಿ ಅಮೃತ್ ಪಾಲ್ ನೇತೃತ್ವದಲ್ಲಿ ನಡೆದಿತ್ತಾ WE ARE SAFE ಮೀಟಿಂಗ್? - ADGP Amrit Pal

ಕರ್ನಾಟಕದಲ್ಲಿ ಪಿಎಸ್ಐ ಅಕ್ರಮ ಸಂಬಂಧ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ನಡೆಸಿದ್ದ ಗುಪ್ತ ಸಭೆ ಬಗ್ಗೆ ಉಲ್ಲೇಖ ಮಾಡಲಾಗಿದೆ ಎನ್ನಲಾಗ್ತಿದೆ.

ಎಡಿಜಿಪಿ ಅಮೃತ್ ಪಾಲ್
ಎಡಿಜಿಪಿ ಅಮೃತ್ ಪಾಲ್
author img

By

Published : Sep 1, 2022, 3:28 PM IST

ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಮಹಿಳಾ ವಿಭಾಗದಲ್ಲಿ ಟಾಪರ್ ಆಗಿರುವ ರಚನಾ ಅವರನ್ನು ಸಿಐಡಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.‌ ಮತ್ತೊಂದೆಡೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ನಡೆಸಿದ್ದ ಗುಪ್ತ ಸಭೆ ಬಗ್ಗೆ ಉಲ್ಲೇಖವಾಗಿದೆ ಎಂದು ಹೇಳಲಾಗ್ತಿದೆ.

ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ನೇತೃತ್ವದಲ್ಲಿ ಸಹೋದ್ಯೋಗಿಗಳ ಜೊತೆ ನಡೆದ ಸಭೆಯಲ್ಲಿ ವಿ ಆರ್ ​​ಸೇಫ್ ಎಂದೇ ಭಾವಿಸಿದ್ದರಂತೆ. ಕಲಬುರಗಿಯಲ್ಲಿ ಪಿಎಸ್ಐ ಪರೀಕ್ಷಾ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆತಂಕದಿಂದಲೇ ಬೆಂಗಳೂರಿನಲ್ಲಿ ಎಡಿಜಿಪಿ ಅಮೃತ್ ಪಾಲ್ ನೇತೃತ್ವದಲ್ಲಿ ನೇಮಕಾತಿ ವಿಭಾಗದಲ್ಲೇ ಕೆಲಸ ಮಾಡುತ್ತಿದ್ದ ಡಿಎಸ್ಪಿ ಶಾಂತಕುಮಾರ್ ಸಿಬ್ಬಂದಿಯಾದ ಶ್ರೀಧರ್, ಶ್ರೀನಿವಾಸ್ ಮತ್ತು ಹರ್ಷ ಸಭೆ‌ ನಡೆಸಿದ್ದರು ಎನ್ನಲಾಗ್ತಿದೆ. ಪರೀಕ್ಷಾ ಅಕ್ರಮ ಕಲಬುರಗಿಯಲ್ಲಿ ನಡೆದಿದ್ದು, ಇದಕ್ಕೂ ಬೆಂಗಳೂರಿಗೂ ಏನು ಸಂಬಂಧವಿಲ್ಲ. ಹೀಗಾಗಿ ನಾವೆಲ್ಲಾ ಸೇಫ್ ಅಗಿದ್ದೇವೆ. ಅಲ್ಲದೇ ಮುಂದೆಯೂ ಸೇಫ್ ಆಗಿಯೇ ಇರುತ್ತೇವೆ ಎಂದು ಭಾವಿಸಿದ್ದರಂತೆ.

ಅಕ್ರಮ ಹೊರಬಂದ ನಂತರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಾರ್ತನ್ ರೇಂಜ್ ಐಜಿ ಹಾಗು ಕಲಬುರಗಿ ಎಸ್​​ಪಿ ವಿರುದ್ಧ ಅಮೃತ್​ ಪಾಲ್ ಗರಂ ಆಗಿದ್ದರು. ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು ಐಜಿ ಹಾಗು ಎಸ್ಪಿ ಕೆಲಸ. ನಾನು ಬೆಂಗಳೂರಿನಿಂದ ಅದೆಲ್ಲವನ್ನು ಮಾಡಲು ಸಾಧ್ಯವಿಲ್ಲ. ಪರೀಕ್ಷಾ ಅಕ್ರಮದಲ್ಲಿ ಬ್ಲೂಟೂತ್ ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದರು ಎನ್ನಲಾಗ್ತಿದೆ. ಇದರಂತೆ ಸಿಐಡಿ ಸಂಪೂರ್ಣ 545 ಪಿಎಸ್ಐ ಆಭ್ಯರ್ಥಿಗಳ ಒಎಂಆರ್ ಶೀಟ್ ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ: ಸರ್ಕಾರದ ಸವಲತ್ತು ಆಸೆಗಾಗಿ ಮದುವೆಯಾದ ಭೂಪ; ಕಿರುಕುಳದಿಂದ ನೇಣು ಬಿಗಿದುಕೊಂಡ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.