ETV Bharat / state

ರಾಜಧಾನಿಯಲ್ಲಿ ಮತ್ತೆ ಬೆಳಕಿಗೆ ಬಂದ ವೈಫ್ ಸ್ವಾಪಿಂಗ್ ಪ್ರಕರಣ: ಪತಿ ವಿರುದ್ಧ ಪತ್ನಿ ಆರೋಪ

author img

By ETV Bharat Karnataka Team

Published : Dec 12, 2023, 9:52 PM IST

Updated : Dec 13, 2023, 7:19 PM IST

Wife Swapping Case : ಬೆಂಗಳೂರಿನಲ್ಲಿ ಪತಿಯೊಬ್ಬ ವೈಫ್​ ಸ್ವಾಪಿಂಗ್​ಗೆ ಒತ್ತಾಯಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪತ್ನಿಯು ಬಸವನಗುಡಿ ಮಹಿಳಾ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಸವನಗುಡಿ ಮಹಿಳಾ‌ ಪೊಲೀಸ್ ಠಾಣೆ
ಬಸವನಗುಡಿ ಮಹಿಳಾ‌ ಪೊಲೀಸ್ ಠಾಣೆ

ಬೆಂಗಳೂರು : ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ವೈಫ್ ಸ್ವಾಪಿಂಗ್ (ಹೆಂಡತಿಯನ್ನು ಅದಲು ಬದಲು ಮಾಡುವುದು) ಮಾಡಿದ್ದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು‌.‌ ಬಳಿಕ ಈ ಕರಿನೆರಳಿನ ಸಂಸ್ಕೃತಿ ಛಾಯೆ ಬೆಂಗಳೂರಿಗೂ ಹಿಂದೆ ತಟ್ಟಿತ್ತು‌‌. ಇದೀಗ ಮತ್ತೆ ವೈಫ್​ ಸ್ವಾಪಿಂಗ್ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಬಸವನಗುಡಿ ಮಹಿಳಾ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಫ್ ಸ್ವಾಪಿಂಗ್​ಗೆ ಬಲವಂತ ಪಡಿಸಿರುವುದಲ್ಲದೇ, ವರದಕ್ಷಿಣೆ ಕಿರುಕುಳ, ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಗಂಡ ಹಾಗೂ ಆತನ ಮನೆಯವರು ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವರದಕ್ಷಿಣೆ ತಡೆ ಕಾಯ್ದೆ, ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಐಪಿಸಿ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

23 ವರ್ಷದ ಸಂತ್ರಸ್ತೆ ಕಳೆದ ವರ್ಷ ಡಿಸೆಂಬರ್​ನಲ್ಲಿ‌‌ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಜೊತೆ ಮದುವೆಯಾಗಿತ್ತು. ಹಿಂದೂ ಸಂಪ್ರದಾಯದಂತೆ ಗುರು - ಹಿರಿಯರ ಸಮ್ಮುಖದಲ್ಲಿ ಯುವತಿಯ ಪೋಷಕರು ಮದುವೆ ಮಾಡಿ ಕೊಟ್ಟಿದ್ದರು. ಮಾತುಕತೆಯಂತೆ 2 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನ ವರದಕ್ಷಿಣೆ ರೂಪವಾಗಿ ಕೊಟ್ಟಿದ್ದರು. ಮದುವೆ ಬಳಿಕ ಆರಂಭ ಎಲ್ಲವೂ ಸರಿಯಾಗಿತ್ತು. ಕಾಲ ಕ್ರಮೇಣ ನೀಡಲಾಗಿದ್ದ ಚಿನ್ನಾಭರಣದ ಗುಣಮಟ್ಟ ಸರಿಯಿಲ್ಲ ಎಂದು ಪತಿ ಮನೆಯವರು ಕ್ಯಾತೆ ತೆಗೆದು ಕಿರುಕುಳ ನೀಡಿದ್ದರು.

ವಿವಾಹಕ್ಕೂ ಪತಿ 10 ಲಕ್ಷ ಸಾಲ ಮಾಡಿದ್ದು, ಇದನ್ನು ತೀರಿಸಲು ಹಣ ತರುವಂತೆ ಹೆಂಡತಿಗೆ ಪೀಡಿಸಿದ್ದರು. ಹೀಗಾಗಿ 2 ಲಕ್ಷ ನೀಡಿದ್ದರೂ ಸಂತೃಪನಾಗದೇ ಕಿರುಕುಳ ನೀಡುವುದು ಮುಂದುವರೆಸಿದ್ದರು. ಈ ವೇಳೆ ಸಂಬಂಧಿಯೊಬ್ಬ ನನ್ನ ಕೈ- ಕಾಲನ್ನು ಅಸಹ್ಯವಾಗಿ ಮುಟ್ಟಿದ್ದ. ಅಲ್ಲದೇ ಪತಿ ವಿಡಿಯೋ ತೋರಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.

ಕೆಲಸ ಮಾಡುವ ಕಂಪನಿಯಲ್ಲಿ ವೈಫ್​ ಸ್ವಾಪಿಂಗ್ ಸಂಸ್ಕೃತಿ ಇದ್ದು, ತನ್ನ ಸ್ಮೇಹಿತರೊಂದಿಗೆ ಮಲಗುವಂತೆ ಪೀಡಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಬೆಲ್ಟ್​​ನಿಂದ ಹೊಡೆದಿದ್ದಾನೆ. ಕಳೆದ ನ.31 ರಂದು ರಾತ್ರಿ ಮದ್ಯ ಸೇವನೆ ಮಾಡಿ ಬಂದು ಕೊಲೆ ಮಾಡುವ ಉದ್ದೇಶದಿಂದ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದನಲ್ಲದೇ ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಿರುವ ಸಂತ್ರಸ್ತೆ, ಗಂಡನ ಮನೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಇನ್ಶೂರೆನ್ಸ್ ಪಾಲಿಸಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ದಂಪತಿ ಬಂಧನ

Last Updated : Dec 13, 2023, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.