ETV Bharat / state

ಸೆಂಟ್ರಲ್ ಜೈಲಿನಲ್ಲಿ ಗಾಂಜಾ ಮಾರಾಟ ಆರೋಪ: ಅಧಿಕಾರಿಗಳ ವಿರುದ್ಧ ಗೃಹ ಇಲಾಖೆ ಗರಂ - ಸೆಂಟ್ರಲ್ ಜೈಲ್ ಅಧಿಕಾರಿಗಳ ವಿರುದ್ಧ ಗೃಹ ಇಲಾಖೆ ಗರಂ

ಜೈಲಿನಲ್ಲಿ ಗಾಂಜಾ ಮಾರಾಟ, ಪೂರೈಕೆ ಆಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿದ್ದು, ಜೈಲಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಅಲ್ಲಿನ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಅನ್ನೋ ಆರೋಪನೂ ಇದೆ.

charged-with-selling-marijuana-in-central-jail
ಸೆಂಟ್ರಲ್ ಜೈಲಿನಲ್ಲಿ ಗಾಂಜಾ ಮಾರಾಟ ಆರೋಪ
author img

By

Published : Nov 8, 2020, 11:37 AM IST

ಬೆಂಗಳೂರು: ಪರಪ್ಪನ ಅಗ್ರಹಾರ ಒಂದು ಕಾಲದಲ್ಲಿ ತಮಿಳುನಾಡಿನ ಶಶಿಕಲಾ ಹಾಗೂ ಇನ್ನಿತರೆ ಕೈದಿಗಳಿಗೆ ವಿಶೇಷ ಸೌಲಭ್ಯ ಕೊಟ್ಟ ಆರೋಪ ಕೇಳಿಬಂದಿತ್ತು. ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಸದ್ಯ ನಡಿಯುತ್ತಿರುವ ಅವ್ಯವಹಾರದ ಬಗ್ಗೆ ಗೃಹ ಇಲಾಖೆ ಗರಂ ಆಗಿದ್ದು, ಅಧಿಕಾರಿಗಳ ವಿರುದ್ಧ ಛಾಟಿ ಬೀಸಿದೆ ಎನ್ನಲಾಗ್ತಿದೆ.

ಜೈಲಿನಲ್ಲಿ ಗಾಂಜಾ ಮಾರಾಟ, ಪೂರೈಕೆ ಆಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿದ್ದು, ಜೈಲಿನಲ್ಲಿ ಗಾಂಜಾ ಮಾರಾಟ ಮಾಡಲು ಅಲ್ಲಿನ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಅನ್ನೋ ದೂರುಗಳು ಇವೆ. ಸದ್ಯ ಇದರ ಬಗ್ಗೆ ಮತ್ತೆ ಧ್ವನಿ ಎತ್ತಿರುವ ಗೃಹ ಇಲಾಖೆ ಜೈಲಲ್ಲಿ ಈ ರೀತಿ ಅಕ್ರಮವಾಗಿ ಮಾದಕ ವಸ್ತು ಮಾರಾಟದ ಜೊತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

ಕೇವಲ ಮಾದಕ ವಸ್ತು ಅಷ್ಟೇ ಅಲ್ಲದೆ, ಮೊಬೈಲ್ ಫೋನ್​ಗಳು ಮತ್ತು ಸಿಮ್ ಕಾರ್ಡ್ ಗಳನ್ನ ಬಳಸೋಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪವು ಕೂಡಾ ಇದೆ. ಇದರ ವರದಿ ಕೂಡ ಗೃಹ ಇಲಾಖೆಗೆ ತಲುಪಿದ್ದು ಅಲ್ಲಿನ ಕೈದಿಗಳಿಗೆ ನಾಲ್ಕು ಸಿಮ್ ಜೊತೆಗೆ ಮೊಬೈಲ್ ಫೋನ್ ಗಳನ್ನ ಕೂಡ ಕೊಡುತ್ತಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಸಿಸಿಬಿ ಜೈಲಿಗೆ ದಾಳಿ‌ ಮಾಡಿದಾಗ ಬಹಳಷ್ಟು ಮೊಬೈಲ್ ಕೂಡ ಜಪ್ತಿಯಾಗಿದ್ದವು ಎನ್ನಲಾಗ್ತಿದೆ.

ಕೇವಲ ಪರಪ್ಪನ ಅಗ್ರಹಾರ ಅಷ್ಟೇ ಅಲ್ಲದೆ, ಮೈಸೂರು, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಕಾರಾಗೃಹದ ಮುಖ್ಯಸ್ಥರಿಗೆ ಈ ರೀತಿ ವ್ಯವಹಾರದ ವಿರುದ್ಧ ಎಚ್ಚರಿಕೆ ಗೃಹ ಇಲಾಖೆ ಕೊಟ್ಟಿದ್ದು, ಜೈಲಿನೊಳಗೆ ಯಾರು ಬರ್ತಾರೆ, ಯಾರು ಹೋಗುತ್ತಾರೆ, ಬರುವವರು ಏನು ತರುತ್ತಾರೆ ಹಾಗೂ ಜೈಲಿನಲ್ಲಿ ಮಾದಕ ವ್ಯಸನಿಗಳು ಎಷ್ಟು ಜನ ಇದ್ದಾರೆ ಅನ್ನೋದ್ರ ಬಗ್ಗೆಯೂ ಅಲ್ಲಿನ ಮುಖ್ಯಸ್ಥರು ಗಮನ ಹರಿಸಬೇಕು. ಈ ಹಿಂದೆ ಜೈಲಲ್ಲಿ ಜಾಮರ್ ಅಳವಡಿಸಲು 28.8 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆದರೆ ಇದುವರೆಗೂ ಅದರ ಬಗ್ಗೆ ಯಾವ ಕಾರಾಗೃಹವೂ ವರದಿ ನೀಡಿಲ್ಲ. ಕೂಡಲೇ ವರದಿ ನೀಡುವಂತೆಯೂ ಗೃಹ ಸಚಿವರು ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.