ಬೆಂಗಳೂರು: ಮುಂಬೈ ಮೂಲದ ಯುವತಿ ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಅದೇ ಬಾರ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಘಟನೆ ಹಿನ್ನೆಲೆ:
ನಗರದ ಬಾರ್ ಅಂಡ್ ರೆಸ್ಟೋರೆಂಟ್ವೊಂದರಲ್ಲಿ ಡಾನ್ಸರ್ ಆಗಿ ಯುವತಿ ಕಾರ್ಯನಿರ್ವಹಿಸುತ್ತಿದ್ದಳು. ಈ ವೇಳೆ ಅಲ್ಲೆ ಕೆಲಸ ನಿರ್ವಹಿಸುತ್ತಿದ್ದ ಫೈನಾನ್ಸಿಯರ್ ಸುರೇಶ್ ಜೈನ್ ಎಂಬಾತನ ಪರಿಚಯವಾಗಿದೆ. ಪರಿಚಯದ ವೇಳೆ ಆತ ಯುವತಿ ನಂಬರ್ ಪಡೆದಿದ್ದ ಎನ್ನಲಾಗಿದೆ. ಸ್ವಲ್ಪ ದಿನಗಳ ಬಳಿಕ ಇಬ್ರು ಸ್ನೇಹಿತರಾಗಿದ್ದಾರೆ. ನಂತರ ಯುವತಿ ಕೆಲಸ ಬಿಟ್ಟು ಮುಂಬೈಗೆ ತೆರಳಿದ್ದಾಳೆ. ಈ ವೇಳೆ ಸುರೇಶ್ ಜೈನ್ ಕೆಲಸ ಕೋಡಿಸ್ತೀನಿ ಎಂದು ಮುಂಬೈನಿಂದ ಮತ್ತೆ ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ ಎಂದು ಯುವತಿ ಹೇಳಿದ್ದಾಳೆ. ಆ ನಂತರ ಒಂದು ದಿನ ಬೆಂಗಳೂರಿನ ಹೊಗಸಂದ್ರದ ತನ್ನ ಮನೆಗೆ ಕರೆಸಿಕೊಂಡು ಮನೆಯಲ್ಲಿ ಇಬ್ಬರು ಪಾರ್ಟಿ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ಬಾರ್ ಗರ್ಲ್ ಮೇಲೆ ಸುರೇಶ್ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಕುಡಿದ ಅಮಲು ಇಳಿದ ಬಳಿಕ ಈ ವಿಚಾರ ಯಾರಿಗೂ ಹೇಳಬೇಡ. ನಾ ನಿನ್ನ ಮದುವೆಯಾಗುವುದಾಗಿ ಭರವಸೆ ಕೊಟ್ಟು ಬಳಿಕ ಎರಡು ವರ್ಷಗಳಿಂದ ಯುವತಿಗೆ ಪ್ರತಿನಿತ್ಯ ಲೈಂಗಿಕ ದೌರ್ಜನ್ಯ ಮಾಡಿ ಮೊಸ ಮಾಡಿದ್ದಾನೆ ಎಂದು ದೂರಲಾಗಿದೆ.
ಇನ್ನು ತಾನು ಮೋಸ ಹೋಗ್ತಿರುವ ವಿಚಾರ ತಿಳಿದು ಯುವತಿ ಮೊದ್ಲು ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನಂತರ ಪೊಲೀಸರು ಕೃತ್ಯ ನಡೆದ ಸ್ಥಳ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಾದ ಕಾರಣ ಪ್ರಕರಣ ವರ್ಗಾವಣೆ ಮಾಡಿದ್ದು, ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.