ETV Bharat / state

ಪೂಜೆ ನೆಪದಲ್ಲಿ ಪಂಗನಾಮ ಆರೋಪ.. ಚಿನ್ನಾಭರಣ, ಹಣದೊಂದಿಗೆ ನಕಲಿ ಜ್ಯೋತಿಷಿ ಕುಟುಂಬ ಎಸ್ಕೇಪ್​ - ನಕಲಿ ಜ್ಯೋತಿಷಿಯ ಮಾತು ನಂಬಿದ

ಮನೆಯವರ ನಂಬಿಕೆ ಸಂಪಾದಿಸಿ ವಂಚನೆ - ಮಗುವಿಗೆ ಅನಾರೋಗ್ಯ ಎಂದು ಹಣ ದೋಚಿದ ನಕಲಿ ಜ್ಯೋತಿಷಿ - ಪೂಜೆ ನೆಪದಲ್ಲಿ ಹಣ ಚಿನ್ನಾಭರಣದೊಂದಿಗೆ ಪರಾರಿ ಆರೋಪ

ಪೂಜೆ ನೆಪದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಣದೊಂದಿಗೆ ಪರಾರಿಯಾದ ನಕಲಿ ಜ್ಯೋತಿಷಿ ಕುಟುಂಬ
a-fake-astrologers-family-absconded-with-gold-worth-millions-on-the-pretext-of-worship
author img

By

Published : Jan 3, 2023, 4:56 PM IST

ಬೆಂಗಳೂರು: ಮೂರು ತಿಂಗಳ ಹಿಂದೆ ಪರಿಚಯವಾದ ನಕಲಿ ಜ್ಯೋತಿಷಿ ಮಾತು ನಂಬಿದ ಮಹಿಳೆಯೊಬ್ಬರು ಚಿನ್ನಾಭರಣ, ಹಣ ಕಳೆದುಕೊಂಡ ಘಟನೆ ಜೆ.ಸಿ‌.ನಗರ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ನಡೆದಿದೆ. ಸಹನಾ ಎಂಬಾಕೆ ವಂಚನೆಗೊಳಗಾಗಿದ್ದು, 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1 ಲಕ್ಷ ರೂ ನಗದು ಎಗರಿಸಿದ ನಕಲಿ ಜ್ಯೋತಿಷಿ ಕುಟುಂಬ ನಾಪತ್ತೆಯಾಗಿದೆ.

ಘಟನೆಯ ಹಿನ್ನೆಲೆ: ಕೆ.ಆರ್.ಪುರಂ ಮೂಲದ ಸಹನಾ ಬಾಣಂತನಕ್ಕೆ ಎಂದು ಜೆ.ಸಿ‌ ನಗರದ ತಮ್ಮ ತಾಯಿಯ ಮನೆಗೆ ಬಂದಿದ್ದರು. ಮೂರು ತಿಂಗಳ ಹಿಂದೆ ಎದುರು‌ ಮನೆಗೆ ವಿಜಯ್ ಶ್ರೀನಿವಾಸ, ಮದನ್ ಶ್ರೀನಿವಾಸ್, ಗೋವಿಂದ ರಾಜನ್ ಹಾಗೂ ರೇವತಿ ಲಕ್ಷ್ಮಿ ಎಂಬುವವರ ಕುಟುಂಬ ಬಂದು ನೆಲೆಸಿತ್ತು. ತಾನೊಬ್ಬ ಜ್ಯೋತಿಷಿ ಎಂದು ಪರಿಚಯಿಸಿಕೊಂಡ ವಿಜಯ್ ಶ್ರೀನಿವಾಸ್ ಕುಟುಂಬ ಮೂರೇ ತಿಂಗಳಿನಲ್ಲಿ ಸಹನಾಳ ತವರು ಮನೆಯವರೊಂದಿಗೆ ಆತ್ಮೀಯತೆ ಸಂಪಾದಿಸಿದ.

ನಂತರ ವಿಜಯ್ ಶ್ರೀನಿವಾಸ್ ಸಹಾನಾಳ ಬಳಿ 'ನಿಮ್ಮ ಗ್ರಹಗತಿಗಳು ಕೆಟ್ಟದಾಗಿದ್ದು, ಮುಂದೆ ನಿಮ್ಮ ಹಾಗೂ ನಿಮ್ಮ ಮ‌ಗುವಿನ ಭವಿಷ್ಯದಲ್ಲಿ ಕೆಡುಕು ಉಂಟಾಗಲಿದೆ. ನಿಮ್ಮ ತಂದೆ ಮೂರೇ ದಿನದಲ್ಲಿ ಮರಣ ಹೊಂದಬಹುದು' ಎಂದಿದ್ದಾನೆ‌. ಇದಕ್ಕಾಗಿ ಪೂಜೆ ಮಾಡಬೇಕು ಎಂದು 1 ಲಕ್ಷ ನಗದು ಹಾಗೂ ಪೂಜೆಯ ಸಂದರ್ಭದಲ್ಲಿ ಇಡಲು ಚಿನ್ನಾಭರಣಗಳು ಬೇಕು ಎಂದಿದ್ದಾನೆ‌.

ನಕಲಿ‌ ಜ್ಯೋತಿಷಿಯ ಮಾತು ನಂಬಿದ ಸಹನಾ 1 ಲಕ್ಷ ನಗದು ಹಾಗೂ 578 ಗ್ರಾಂ ಚಿನ್ನಾಭರಣಗಳನ್ನ ಡಿಸೆಂಬರ್ 28ರಂದು ವಿಜಯ್ ಕೈಗೆ ನೀಡಿದ್ದಾರೆ. ಮರುದಿನ ಪೂಜೆಯ ಬಳಿಕ ಮನೆಗೆ ಬಂದಿದ್ದ ಸಹನಾ ಎರಡು ದಿನಗಳ ಬಳಿಕ ಗಮನಿಸಿದಾಗ ಇಡೀ ಕುಟುಂಬ ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಿದೆ. ಸದ್ಯ ಚಿನ್ನಾಭರಣ ಕಳೆದುಕೊಂಡು ಸಹನಾ ಜೆ.ಸಿ‌.ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಡಿಕೇರಿ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಚಾಕು ಇರಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.