ಬೆಂಗಳೂರು: ಲಾಕ್ ಡೌನ್ನಿಂದಾಗಿ ಇದೀಗ ಎಲ್ಲರೂ ಮನೆಯಲ್ಲಿಯೇ ಲಾಕ್ ಆಗಿದ್ದು, ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ. ಈ ಸಮಯವನ್ನು ಇನ್ನೂ ವಿಶೇಷವಾಗಿ ಕಳೆಯಲಿಚ್ಛಿಸಿರುವ ನಿರೂಪಕ ಅಕುಲ್ ಬಾಲಾಜಿ ತಮ್ಮ ಪತ್ನಿಗಾಗಿ ಸ್ಷೆಷಲ್ ಅಡುಗೆ ಮಾಡಿ ಕೊಟ್ಟಿದ್ದಾರೆ.
ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ ನಿನ್ನೆ ನಟಿ ರಾಗಿಣಿ ದ್ವಿವೇದಿ ತಮ್ಮ ತಾಯಿಗಾಗಿ ಮಾಡಿದ ಪಲಾವ್ ವಿಡಿಯೋ ನೋಡಿ ಇಂದು ತಾವೂ ಕೂಡ ಅಡುಗೆ ಮಾಡಿ ಕುಟುಂಬದೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಪ್ರತಿದಿನ ನಮಗಾಗಿ ಅಡುಗೆ ಮಾಡಿಕೊಡುವ ಮಹಿಳೆಯರಿಗೆ ನಮ್ಮಿಂದ ಒಂದು ಸಣ್ಣ ಬಿಡುವು ಕೊಟ್ರೆ ಅವರಿಗೂ ಖುಷಿ ಆಗುತ್ತೆ. ಆದ್ದರಿಂದ ಮನೆಯಲ್ಲಿ ಇದ್ದಾಗ ಕುಟುಂಬದವರಿಗೆ ಸಹಾಯ ಮಾಡಿ ಸಮಯವನ್ನ ಉತ್ತಮವಾಗಿ ಕಳೆಯುವುದು ಮಾತ್ರವಲ್ಲದೇ, ನಮ್ಮ ದೇಹವನ್ನು ನಿಯಂತ್ರಣದಲ್ಲಿಡಬಹುದು ಎಂದು ಅಕುಲ್ ಹೇಳಿದ್ದಾರೆ.