ನಾಗಮಂಗಲ (ಬೆಂಗಳೂರು): ಕದ್ದ ಚಿನ್ನ ಮಾರಾಟ ಮಾಡಲು ಯತ್ನಿಸಿದ ಕಳ್ಳನನ್ನ ಗೋಲ್ಡ್ ಕಂಪೆನಿ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದು ಚಿನ್ನ ಸಮೇತ ಬಸವೇಶ್ವರ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಾಗಮಂಗಲದ ಪ್ರದೀಪ್ ಎಂಬಾತ ಚಿನ್ನ ಕದ್ದ ಆರೋಪಿ. ಬಸವೇಶ್ವರ ನಗರದ ಅಕ್ಷಯ ಗೋಲ್ಡ್ ಬ್ರಾಂಚ್ಗೆ ಹೋಗಿ 20ಗ್ರಾಂ ನಷ್ಟು ಓಲೆ, ತಾಳಿ, ಉಂಗುರ ಮಾರಾಟ ಮಾಡಿದ್ದಾನೆ. ಚಿನ್ನಾಭರಣ ನೋಡಿ ಅನುಮಾನಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲಿಸರು ಕೂಡಲೇ ಆತನನ್ನ ಸೆರೆ ಹಿಡಿದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದೆ.
ಈ ಮೊದಲು ಈತ ದಾಸರಹಳ್ಳಿ ಬ್ರಾಂಚ್ ಅಕ್ಷಯ ಗೋಲ್ಡ್ ಕಂಪೆನಿಗೆ ಸುಮಾರು 60 ಗ್ರಾಂ. ಚಿನ್ನ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ನಾಗಮಂಗಲ ಪೊಲೀಸರು ಕದ್ದ ಚಿನ್ನ ರಿಕವರಿ ಮಾಡಿದ್ದಾರೆ. ಸದ್ಯ ಪ್ರದೀಪ್ ಬಸವೇಶ್ವರ ನಗರ ಪೊಲೀಸ್ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ.