ETV Bharat / state

ಉಮೇಶ್ ಕತ್ತಿ ಪಾರ್ಥಿವ ಶರೀರ ಏರ್ ಲಿಫ್ಟ್.. ಬೆಳಗಾವಿಯತ್ತ ವಿಶೇಷ ವಿಮಾನ - ಈಟಿವಿ ಭಾರತ್​ ಕರ್ನಾಟಕ

ಏರ್ ಲಿಫ್ಟ್ ಮಾಡಲು ಆಂಬ್ಯುಲೆನ್ಸ್ ವ್ಯವಸ್ಥೆ ಇರುವ ವಿಮಾನ ಚೆನ್ನೈನಿಂದ ಬರುವುದಕ್ಕೆ ಮಳೆ ಅಡ್ಡಿಯಾಯಿತು. ಹಾಗಾಗಿ ಹೈದರಾಬಾದ್​ನಿಂದ ವಿಶೇಷ ವಿಮಾನವನ್ನು ತರಿಸಿಕೊಳ್ಳಲಾಗಿದೆ.

air-lift-of-umesh-katthi-body-to-belagavi
ಉಮೇಶ್ ಕತ್ತಿ ಪಾರ್ಥೀವ ಶರೀರದ ಏರ್ ಲಿಫ್ಟ್
author img

By

Published : Sep 7, 2022, 1:05 PM IST

ಬೆಂಗಳೂರು: ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾದ ಸಚಿವ ಉಮೇಶ್ ಕತ್ತಿ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ರವಾನಿಸುವ ಕಾರ್ಯದಲ್ಲಿ ವಿಳಂಬವಾಗಿದೆ. ವಿಶೇಷ ವಿಮಾನ ವ್ಯವಸ್ಥೆ ವಿಳಂಬವಾದ ಹಿನ್ನೆಲೆಯಲ್ಲಿ ತವರಿನಲ್ಲಿ ಅಂತಿಮ ದರ್ಶನದ ವ್ಯವಸ್ಥೆಯಲ್ಲೂ ವ್ಯತ್ಯಯವಾಗುವಂತಾಗಿದೆ.

ಬೆಳಗ್ಗೆ 7 ಗಂಟೆಗೆ ಏರ್ ಆಂಬ್ಯುಲೆನ್ಸ್ ಮೂಲಕ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಕೊಂಡೊಯ್ಯುವ ನಿರ್ಧಾರ ಮಾಡಲಾಗಿತ್ತು. ಆದರೆ ಏರ್ ಲಿಫ್ಟ್ ಮಾಡಲು ಆಂಬ್ಯುಲೆನ್ಸ್ ವ್ಯವಸ್ಥೆ ಇರುವ ವಿಮಾನ ಚೆನ್ನೈನಿಂದ ಬರುವುದಕ್ಕೆ ಮಳೆ ಅಡ್ಡಿಯಾಯಿತು. ಹಾಗಾಗಿ ಹೈದರಾಬಾದ್​ನಿಂದ ವಿಶೇಷ ವಿಮಾನವನ್ನು ತರಿಸಿಕೊಳ್ಳಲಾಯಿತು.

ಮಧ್ಯಾಹ್ನ 12.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಬೆಳಗಾವಿಯತ್ತ ಪಾರ್ಥಿವ ಶರೀರವನ್ನು ರವಾನಿಸಲಾಯಿತು. ಕತ್ತಿ ಅವರ ಕುಟುಂಬ ಸದಸ್ಯರು ಈ ವಿಶೇಷ ವಿಮಾನದಲ್ಲಿ ತೆರಳಿದರು‌. ಮಧ್ಯಾಹ್ನ 1.30 ರ ವೇಳೆಗೆ ಬೆಳಗಾವಿಗೆ ವಿಮಾನ ತಲುಪಲಿದೆ.

ಪಾರ್ಥಿವ ಶರೀರವನ್ನು ರವಾನಿಸುವ ಮುನ್ನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ ವಿಳಂಬವಾದ ಹಿನ್ನೆಲೆಯಲ್ಲಿ ಅಂತಿಮ ದರ್ಶನ, ಮೆರವಣಿಗೆ ಕಾರ್ಯದ ಸಮಯವೂ ಬದಲಾಗಲಿದ್ದು, ಅಂತಿಮ ಸಂಸ್ಕಾರವೂ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಅಂತ್ಯ ಸಂಸ್ಕಾರದಲ್ಲಿ ಸಿಎಂ ಭಾಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳಲಿದ್ದಾರೆ. ಸಿಎಂ ಜೊತೆ ಸಂಪುಟ ಸಹೋದ್ಯೋಗಿಗಳು ತೆರಳಲಿದ್ದಾರೆ. ಉಮೇಶ್ ಕತ್ತಿ ಅವರ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಲಿರುವ ಸಿಎಂ, ರಾತ್ರಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಇದನ್ನೂ ಓದಿ : ಸಚಿವ ಉಮೇಶ್ ಕತ್ತಿ ನಿಧನಕ್ಕೆ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಸಂತಾಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.