ETV Bharat / state

ವಿಶ್ವದ ಅತೀ ಉದ್ದದ ವಿಮಾನ ಮಾರ್ಗದಲ್ಲಿ ಪ್ರಯಾಣ: ಏರ್ ಇಂಡಿಯಾ ಮಹಿಳಾ ಪೈಲಟ್ ತಂಡದಿಂದ ಹೊಸ ಇತಿಹಾಸ

author img

By

Published : Jan 9, 2021, 12:52 PM IST

Updated : Jan 9, 2021, 1:49 PM IST

ಸಂಪೂರ್ಣ ಏರ್​ ಇಂಡಿಯಾ ಮಹಿಳಾ ತಂಡದಿಂದ, ವಿಶ್ವದ ಅತಿ ಉದ್ದದ ವಿಮಾನ ಮಾರ್ಗ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವೆ 14 ಸಾವಿರ ಕಿ.ಮೀ ಮಾರ್ಗದ 16 ತಾಸುಗಳ ತಡೆರಹಿತ ವಿಮಾನ ಪ್ರಯಾಣ ನಡೆಯುತ್ತಿದ್ದು, ಮಹಿಳಾ ಪೈಲಟ್​ಗಳಿಂದ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

Air  India women pilots set to script history
ಹೊಸ ಇತಿಹಾಸ ಸೃಷ್ಟಿಸಲಿರುವ ಮಹಿಳಾ ಪೈಲಟ್​ ತಂಡ

ದೇವನಹಳ್ಳಿ: ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡ ಜನವರಿ 9 ರಂದು ಹೊಸ ಇತಿಹಾಸ ಬರೆಯಲಿದೆ. ವಿಶ್ವದ ಅತಿ ಉದ್ದದ ವಿಮಾನ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲಿದ್ದು, ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊದಿಂದ ಹೊರಟಿರುವ ವಿಮಾನ, ಜನವರಿ 9 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

Air  India women pilots set to script history
ವಿಶ್ವದ ಅತೀ ಉದ್ದದ ವಿಮಾನ ಮಾರ್ಗದಲ್ಲಿ ಪ್ರಯಾಣ
ಅಧಿಕೃತವಾಗಿ ಜನವರಿ 11 ರಿಂದ ಅಮೆರಿಕಾದ ಸಿಲಿಕಾನ್ ಸಿಟಿ ಮತ್ತು ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ನಡುವೆ ತಡೆರಹಿತ ವಿಮಾನಯಾನ ಪ್ರಾರಂಭವಾಗಲಿದ್ದು, ಅದರ ಉದ್ಘಾಟನೆಯ ವಿಮಾನವಾಗಿ ಸಂಪೂರ್ಣ ಮಹಿಳಾ ಪೈಲಟ್​ಗಳ ತಂಡವನ್ನೊಳಗೊಂಡ ವಿಮಾನ, ಸ್ಯಾನ್ ಫ್ರಾನ್ಸಿಸ್ಕೊದಿಂದ ಇಂದು ಬೆಂಗಳೂರು ತಲುಪಲಿದೆ.

ಉತ್ತರ ಧ್ರುವದಿಂದ ದಕ್ಷಿಣ ಭಾರತಕ್ಕೆ ಸಂಪರ್ಕಿಸುವ ಅತಿ ಉದ್ದದ ವಿಮಾನ ಮಾರ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಏರ್ ಇಂಡಿಯಾ ಜನವರಿ 11 ರಿಂದ ವಿಮಾನ ಸೇವೆ ಆರಂಭಿಸಲಿದೆ. ಕ್ಯಾಪ್ಟನ್ ಜೋಯಾ ಅಗರ್ವಾಲ್ ವಿಮಾನದ ಕಮಾಂಡ್ ಮಾಡಲಿದ್ದಾರೆ. ಅವರೊಂದಿಗೆ ಕ್ಯಾಪ್ಟನ್​ಗಳಾದ ತನ್ಮೈ ಪಾಪಗರಿ, ಆಕಾಶಾ ಸೋನವಾನೆ ಮತ್ತು ಶಿವಾನಿ ಮನ್ಹಾಸ್ ಅವರ ಅನುಭವಿ ಮಹಿಳಾ ತಂಡ ಇರಲಿದೆ. ಕಾಕ್‌ಪಿಟ್ ಸಿಬ್ಬಂದಿಯಿಂದ ಹಿಡಿದು ಕ್ಯಾಬಿನ್ ಸಿಬ್ಬಂದಿ, ಚೆಕ್-ಇನ್ ಸಿಬ್ಬಂದಿ, ಗ್ರಾಹಕ ಆರೈಕೆ ಸಿಬ್ಬಂದಿ, ವಾಯು ಸಂಚಾರ ನಿಯಂತ್ರಣ ಮತ್ತು ನೆಲದ ನಿರ್ವಹಣೆ ಮುಂತಾದ ಸಂಪೂರ್ಣ ವಿಮಾನ ಕಾರ್ಯಾಚರಣೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಬೆಂಗಳೂರು ನಡುವೆ ಸುಮಾರು 13,993 ಕಿ.ಮೀಗಳ ಅಂತರವಿದ್ದು, 16 ಗಂಟೆಗಳ ದೀರ್ಘ ಪ್ರಯಾಣವಾಗಿರುತ್ತದೆ. ಫ್ಲೈಟ್ ಎಐ 176 ಸ್ಯಾನ್ ಫ್ರಾನ್ಸಿಸ್ಕೋದಿಂದ ಹೊರಡಲಿದ್ದು ಬೆಂಗಳೂರಿನಲ್ಲಿ ಲ್ಯಾಂಡ್​ ಆಗಲಿದೆ.

ಬೋಯಿಂಗ್ 777-200 ಎಲ್​ಆರ್​ವಿಟಿಎಲ್​ಆರ್​ಜಿ ವಿಮಾನ ಇದಾಗಿದ್ದು, ಈ ವಿಮಾನದಲ್ಲಿ 8 ಪ್ರಥಮ ದರ್ಜೆ, 35 ಬಿಸಿನೆಸ್ ಕ್ಲಾಸ್, 195 ಎಕಾನಮಿ ಕ್ಲಾಸ್ ಕಾನ್ಫಿಗರೇಶನ್ ಜೊತೆಗೆ 4 ಕಾಕ್‌ಪಿಟ್ ಮತ್ತು 12 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 238 ಆಸನಗಳ ಆಸನ ಸಾಮರ್ಥ್ಯ ಹೊಂದಿದೆ.

ದೆಹಲಿಯಿಂದ ಸ್ಯಾನ್​ ಫ್ರಾನ್ಸಿಸ್ಕೋ ಮತ್ತು ಬೆಂಗಳೂರಿನಿಂದ ಸ್ಯಾನ್​​ ಫ್ರಾನ್ಸಿಸ್ಕೋಗೆ ಏರ್​ ಇಂಡಿಯಾ ತನ್ನ ವಿಮಾನಯಾನ ಸೇವೆ ಆರಂಭಿಸಲಿದೆ. ಬೆಂಗಳೂರಿನಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ತೆರಳುವ ವಿಮಾನ ಅಟ್ಲಾಂಟಿಕ್​ ಸಾಗರ ಮಾರ್ಗವಾಗಿ ತೆರಳಿದ್ರೆ, ದೆಹಲಿಯಿಂದ ಸ್ಯಾನ್​​ ಫ್ರಾನ್ಸಿಸ್ಕೋಗೆ ಪೆಸಿಫಿಕ್​ ಸಾಗರ ಮಾರ್ಗವಾಗಿ ತೆರಳಲಿದೆ. ಏರ್​ ಇಂಡಿಯಾ ವಿಮಾನಗಳು ವಾರದಲ್ಲಿ 2 ದಿನ ತಡೆರಹಿತವಾಗಿ ಸ್ಯಾನ್​ ಫ್ರಾನ್ಸಿಸ್ಕೋಗೆ ಹಾರಾಟ ನಡೆಸಲಿವೆ. ಸದ್ಯ ಏರ್​ ಇಂಡಿಯಾ ಈ ಸೇವೆ ನೀಡಲಿದ್ದು, ಯುನೈಟೆಡ್​ ಏರ್​​ಲೈನ್ಸ್ ಮೇ 6, 2021 ರಿಂದ ಸ್ಯಾನ್ಸ್​ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ತನ್ನ ವಿಮಾನಯಾನ ಸೇವೆ ಆರಂಭಿಸಲಿದೆ.

ಇದನ್ನೂ ಓದಿ:'ಮೇಡ್ ಇನ್ ಇಂಡಿಯಾ' ಕೊರೊನಾ ಲಸಿಕೆಗಳೊಂದಿಗೆ ಜೀವಗಳನ್ನು ಉಳಿಸಲು ಭಾರತ ಸಿದ್ಧ: ಪಿಎಂ ಮೋದಿ

Last Updated : Jan 9, 2021, 1:49 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.