ETV Bharat / state

ವಿನಾಶಕಾರಿ ನೀತಿಗಳಿಂದ ಅವಸಾನದತ್ತ ಸಾಗಿದ ಕೃಷಿ: ಹೆಚ್ ಡಿ ಕುಮಾರಸ್ವಾಮಿ

ಡಬಲ್ ಎಂಜಿನ್ ಸರ್ಕಾರದ ಕಾಲದಲ್ಲಿ ಮತ್ತೆ ರೈತರ ಆತ್ಮಹತ್ಯೆಗಳು ಆರಂಭವಾಗಿರುವುದು ಕಳವಳಕಾರಿ ಎಂದು ಹೆಚ್​ ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

Former CM H D Kumaraswami
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
author img

By

Published : Dec 23, 2022, 1:01 PM IST

ಬೆಂಗಳೂರು: ಸಮಸ್ತ ರೈತ ಬಂಧುಗಳಿಗೆ ರಾಷ್ಟ್ರೀಯ ರೈತ ದಿನದ ಶುಭಾಶಯ ಕೋರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಂದು ಮಾಜಿ ಪ್ರಧಾನಮಂತ್ರಿ ಚೌಧರಿ ಚರಣಸಿಂಗ್ ಅವರ ಜಯಂತಿಗೆ ಆ ಮಹಾನ್ ನೇತಾರರಿಗೆ ನನ್ನ ಭಾವಪೂರ್ಣ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.

ನಾನು ಸಾಲ ಮನ್ನಾ ಮಾಡಿದ ನಂತರ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದ ಅನ್ನದಾತರ ಪರಿಸ್ಥಿತಿ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರಗಳ ಆಡಳಿತದಲ್ಲಿ ಮತ್ತೆ ಚಿಂತಾಜನಕ ಆಗಿದೆ. ವಿನಾಶಕಾರಿ ನೀತಿಗಳಿಂದ ಕೃಷಿ ಅವಸಾನದತ್ತ ಸಾಗಿದೆ. ಡಬಲ್ ಎಂಜಿನ್ ಸರ್ಕಾರದ ಕಾಲದಲ್ಲಿ ಮತ್ತೆ ರೈತರ ಆತ್ಮಹತ್ಯೆಗಳು ಆರಂಭವಾಗಿರುವುದು ಕಳವಳಕಾರಿ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಅನ್ನದಾತ ಸದಾ ಆತಂಕದಲ್ಲೇ ಇದ್ದು, ಅದಕ್ಕೆ ಕಾರಣವಾದ ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನಡೆ ಅತ್ಯಂತ ಅಕ್ಷಮ್ಯ ಎಂದಿದ್ದಾರೆ.

  • ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ//

    ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹ ಪರ ಸಾಧನವು//

    ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿ ನಿಯಮದೊಳಗವನೆ ಭೋಗಿ//

    ಸಮಸ್ತ ರೈತ ಬಂಧುಗಳಿಗೆ ರಾಷ್ಟ್ರೀಯ ರೈತ ದಿನದ ಶುಭಾಶಯಗಳು.1/5#ರಾಷ್ಟ್ರೀಯ_ರೈತದಿನ pic.twitter.com/PmaMCeW0jX

    — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 23, 2022 " class="align-text-top noRightClick twitterSection" data=" ">

ನನ್ನ ಪಂಚರತ್ನ ಯೋಜನೆಗಳಲ್ಲಿ ರೈತರಿಗಾಗಿ 'ರೈತ ಚೈತನ್ಯ' ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದ್ದೇನೆ. ತೆಲಂಗಾಣ ಮಾದರಿಯ ರೈತಬಂಧು ಕಾರ್ಯಕ್ರಮ ಜಾರಿ ಮಾಡಲಾಗುವುದು. ದಿನದ 24 ಗಂಟೆ ಉಚಿತ ವಿದ್ಯುತ್ ಕೊಡುವುದರ ಜತೆಗೆ, ರಾಜ್ಯದಲ್ಲಿ ಲಭ್ಯ ಇರುವ ಪ್ರತಿ ಹನಿ ನೀರನ್ನೂ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆ ಮಗನನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು : ಚನ್ನಪಟ್ಟಣದಲ್ಲಿ ಹೆಚ್​ಡಿಕೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.