ETV Bharat / state

ಅಲ್ಪಾವಧಿ, ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆಯಲ್ಲಿ ಸರ್ಕಾರದ ಸಾಧನೆ ಏನು? - ರೈತರಿಗೆ ಕೃಷಿ ಸಾಲ

ಅಲ್ಪಾವಧಿ ಸಾಲ ನೀಡಿಕೆ ವಿಭಾಗದಲ್ಲಿ ಸರ್ಕಾರ 30,25,788 ರೈತರಿಗೆ 19,370 ಕೋಟಿ ರೂ. ಸಾಲ ನೀಡಿಕೆ ಗುರಿ ಹೊಂದಿದೆ. ಈಗಾಗಲೇ 12,25,027 ರೈತರಿಗೆ 8,742.10 ಕೋಟಿ ರೂ. ಸಾಲವನ್ನು ವಿತರಿಸಿ ಶೇ. 45.55 ರಷ್ಟು ಸಾಧನೆ ಮಾಡಿದೆ.

agricultural  loans Distribution news
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
author img

By

Published : Oct 25, 2021, 4:54 PM IST

ಬೆಂಗಳೂರು: ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಎಲ್ಲ ರೈತರಿಗೂ ಸಾಲ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕೃಷಿ ಸಾಲ ನೀಡುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿಯೇ ಅಲ್ಪಾವಧಿ, ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಅಲ್ಪಾವಧಿ ಸಾಲ ನೀಡಿಕೆ ವಿಭಾಗದಲ್ಲಿ 30,25,788 ರೈತರಿಗೆ 19,370 ಕೋಟಿ ರೂ. ಸಾಲ ನೀಡಿಕೆ ಗುರಿಯನ್ನು ಹೊಂದಿದೆ. ಈಗಾಗಲೇ 12,25,027 ರೈತರಿಗೆ 8,742.10 ಕೋಟಿ ರೂ. ಸಾಲ ವಿತರಿಸಿ ಶೇ. 45.55 ಸಾಧನೆ ಮಾಡಿದೆ. ಅಲ್ಲದೇ, ಮಧ್ಯಮಾವಧಿ/ದೀರ್ಘಾವಧಿ ಸಾಲ ನೀಡಿಕೆ ವಿಭಾಗದಲ್ಲಿ 59,856 ರೈತರಿಗೆ 1,440 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಇದರಲ್ಲಿ 10009 ರೈತರಿಗೆ 394.79 ಕೋಟಿ ರೂಪಾಯಿಯನ್ನು ಸಾಲವಾಗಿ ವಿತರಿಸಲಾಗಿದೆ. ಈ ಮೂಲಕ ಶೇ. 27.41ರಷ್ಟು ಸಾಧನೆ ತೋರಲಾಗಿದೆ. ಅಂದರೆ, ಈ ಮೂರೂ ವಿಭಾಗದಲ್ಲಿ ಒಟ್ಟಾರೆಯಾಗಿ 30,85,644 ರೈತರಿಗೆ 20810 ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯಲ್ಲಿ ಈಗಾಗಲೇ ಅಕ್ಟೋಬರ್ 23ರವರೆಗೆ 12,35,033 ರೈತರಿಗೆ 9,136.89 ಕೋಟಿ ರೂಪಾಯಿ ಸಾಲವನ್ನು ನೀಡುವ ಮುಖಾಂತರ ಶೇ. 72.96 ಸಾಧನೆಯನ್ನು ರಾಜ್ಯ ಸರ್ಕಾರ ಮಾಡಿದೆ.

25.12 ಲಕ್ಷ ರೈತರಿಗೆ 15,802 ಕೋಟಿ ರೂ ಸಾಲ ನೀಡೋ ಗುರಿ

ಕಳೆದ ಸಾಲಿನಲ್ಲಿ 25.12 ಲಕ್ಷ ರೈತರಿಗೆ 15,802 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ನಾನು ಇಲಾಖೆಯಲ್ಲಿ ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಿದ್ದಲ್ಲದೆ, ಡಿಸಿಸಿ ಬ್ಯಾಂಕ್‌ಗಳಿಗೆ ಖುದ್ದು ಭೇಟಿ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬ್ಯಾಂಕ್‌ಗಳ ಕುಂದು ಕೊರತೆಗಳನ್ನೂ ನಿವಾರಿಸುವಲ್ಲಿ ಸಹಕಾರ ಸಚಿವರು ಶ್ರಮವಹಿಸಿದ್ದರು.

ಈ ನಿಟ್ಟಿನಲ್ಲಿ ನಮ್ಮ 21 ಡಿಸಿಸಿ ಬ್ಯಾಂಕ್‌ಗಳು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದವು. ಇದರ ಪರಿಣಾಮವಾಗಿ 26,19,015 ರೈತರಿಗೆ 17,901.21 ಕೋಟಿ ರೂ. ಸಾಲ ವಿತರಣೆ ಮಾಡಿ ಒಟ್ಟು ಶೇ. 115 ರಷ್ಟು ಸಾಧನೆಯನ್ನು ನಾವು ತೋರಿದ್ದೇವೆ.

ಈ ಬಾರಿ ನೂರಕ್ಕೆ ನೂರು ಗುರಿ ಮುಟ್ಟುವುದಲ್ಲದೇ, ಕಳೆದ ಬಾರಿಯ ಸಾಧನೆಗಿಂತಲೂ ಹೆಚ್ಚಿನ ಸಾಧನೆ ಮಾಡುವಲ್ಲಿ ನಮ್ಮೆಲ್ಲರ ಪ್ರಯತ್ನಗಳು ಸಾಗಿವೆ. ಹಾಗಾಗಿ ಪ್ರಸಕ್ತ ಬಾರಿ ಶೇ. 125ರಷ್ಟು ಸಾಲ ನೀಡಿಕೆ ಕಡೆ ಸಹಕಾರ ಇಲಾಖೆ ಹೆಚ್ಚು ಗಮನಹರಿಸಿದೆ.

ಇನ್ನು ಎಲ್ಲ ರೈತರಿಗೂ ಸಾಲ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ 30,85,644 ರೈತರಿಗೆ 20810 ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಈಗಾಗಲೇ 12,35,033 ರೈತರಿಗೆ 9,136 ಕೋಟಿ 89 ಲಕ್ಷ ರೂ. ಸಾಲ ನೀಡಲಾಗಿದೆ. ಕಳೆದ ಬಾರಿ ಸಾಲ ನೀಡಿಕೆಯಲ್ಲಿ ಮಾಡಲಾಗಿದ್ದ ಶೇ. 115ರಷ್ಟು ಸಾಧನೆಯನ್ನು ಹಿಂದಿಕ್ಕಿ ಈ ಬಾರಿ ಶೇ. 125ರಷ್ಟು ಸಾಧನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸಾಲ ವಿತರಣೆಗೆ ಸೂಚನೆ:

ರೈತರ ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸಹ 21 ಡಿಸಿಸಿ ಬ್ಯಾಂಕ್‌ಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅರ್ಹ ಫಲಾನುಭವಿಗಳಿಗೆ ಸಾಲ ಕೊಡುವಂತೆ ಸೂಚಿಸಿರುವುದಾಗಿ ಎಂದು ಸಹಕಾರ ಸಚಿವರು ಹೇಳಿದ್ದಾರೆ.

ಶೀಘ್ರದಲ್ಲೇ ಡಿಸಿಸಿ ಬ್ಯಾಂಕ್‌ಗಳ ಸಭೆ :

ಡಿಸಿಸಿ ಬ್ಯಾಂಕ್‌ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಕರೆದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿರುವ ಸಚಿವರು, ಈ ಮೂಲಕ ಬ್ಯಾಂಕ್‌ಗಳು ತೋರಿರುವ ಸಾಧನೆ, ಎದುರಿಸುತ್ತಿರುವ ಸಣ್ಣಪುಟ್ಟ ತೊಡಕುಗಳು, ಸಮಸ್ಯೆಗಳ ಬಗ್ಗೆಯೂ ಚರ್ಚಿಸಿ, ಪರಿಹಾರಗಳನ್ನು ಸೂಚಿಸಲು ನಿರ್ಧರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.