ETV Bharat / state

ಕೆರೂರಿನ ನೊಂದ ಮಹಿಳೆ ಕ್ಷಮೆ ಕೇಳುವ ಅಗತ್ಯವಿರಲಿಲ್ಲ: ಸಿದ್ದರಾಮಯ್ಯ

author img

By

Published : Jul 17, 2022, 7:58 PM IST

ತಮ್ಮ ಕುಟುಂಬದ ಮೇಲಿನ ಹಲ್ಲೆಯಿಂದ ನೊಂದ ಅವರ ಭಾವುಕ ಪ್ರತಿಕ್ರಿಯೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಎಲ್ಲರೂ ಒಂದಾಗಿ ಬಾಳಬೇಕೆಂದು ಮನವಿ ಮಾಡಿ ನನಗೆ ಶುಭ ಹಾರೈಸಿದ ಸೋದರಿಗೆ ಧನ್ಯವಾದಗಳು. ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Former CM Siddaramaiah visited Bagalkot
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು: ತಮ್ಮ ವಾಹನದ ಮೇಲೆ ಹಣ ಎಸೆದ ಮಹಿಳೆ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಶುಕ್ರವಾರ ಕೆರೂರಿನಲ್ಲಿ ಹಣ ಎಸೆದಿದ್ದಾರೆಂದು ಹೇಳಲಾದ ಸೋದರಿಗೆ ತನ್ನ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳುವ ಅಗತ್ಯ ಇರಲಿಲ್ಲ. ತಮ್ಮ ಕುಟುಂಬದ ಮೇಲಿನ ಹಲ್ಲೆಯಿಂದ ನೊಂದ ಅವರ ಭಾವುಕ ಪ್ರತಿಕ್ರಿಯೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಎಲ್ಲರೂ ಒಂದಾಗಿ ಬಾಳಬೇಕೆಂದು ಮನವಿ ಮಾಡಿ ನನಗೆ ಶುಭ ಹಾರೈಸಿದ ಸೋದರಿಗೆ ಧನ್ಯವಾದಗಳು ಎಂದಿದ್ದಾರೆ.

Former CM Siddaramaiah visited Bagalkot
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​

ಬಾಗಲಕೋಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ 2 ಲಕ್ಷ ರೂಪಾಯಿಯನ್ನು ಮಹಿಳೆಯೊಬ್ಬರು ಎಸೆದ ಘಟನೆ ಶುಕ್ರವಾರ ನಡೆದಿತ್ತು. ಬಾದಾಮಿ ಕ್ಷೇತ್ರದ ಕೆರೂರ ಗುಂಪು ಘರ್ಷಣೆ ಗಾಯಾಳುಗಳ ಭೇಟಿಗೆ ಬಾಗಲಕೋಟೆಗೆ ಆಗಮಿಸಿದ ವೇಳೆ ಈ ಘಟನೆ ನಡೆದಿತ್ತು. ಗಾಯಾಳುಗಳ ಸಂಬಂಧಿಗಳು ಆಕ್ರೋಶ ಹೊರ ಹಾಕಿದ್ದರು. ವಾಹನದಲ್ಲಿ ಸಿದ್ದರಾಮಯ್ಯ ಅವರು ಮರಳುತ್ತಲೇ ಹಣ ಹಿಡಿದು ವಾಹನದ ಹಿಂದೆ ಹೋದ ಮಹಿಳೆ ಹಣದ ಕಟ್ಟನ್ನು ಪೊಲೀಸ್ ಬೆಂಗಾವಲು ವಾಹನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನೆ ಬಳಿಕ ವಿಷಾದ ವ್ಯಕ್ತಪಡಿಸಿದ್ದ ಮಹಿಳೆ, ಕೆಲವರು ಸೃಷ್ಟಿ ಮಾಡಿದ ಅಶಾಂತಿಯ ವಾತಾವರಣದಿಂದ ಕೆರೂರಿನಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಅಮಾಯಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ನಮ್ಮ ಮನಸ್ಸಿಗೆ ಭಾರಿ ನೋವಾಗಿತ್ತು. ಈ ನೋವಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಅನುಚಿತವಾಗಿ ನಡೆದುಕೊಳ್ಳಬೇಕಾಯಿತು. ಇದಕ್ಕಾಗಿ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ. ಇದೀಗ ಸಿದ್ದರಾಮಯ್ಯ ಸಹ ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಪೂರ್ಣ ವಿರಾಮ ನೀಡುವ ಕಾರ್ಯ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಾಹನದತ್ತ ಹಣ ಎಸೆದಿಲ್ಲ, ಕೈ ಜಾರಿ ಬಿದ್ದಿದೆ: ಕ್ಷಮೆಯಾಚಿಸಿದ ಮಹಿಳೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.