ETV Bharat / state

ಬೆಂಗಳೂರು ಗಲಭೆ: ತನಿಖೆ ಟೀಂ ವಿಂಗಡಣೆ... ಮತ್ತೆ 8 ಜನ ಗಲಭೆಕೋರರು ಅಂದರ್! - ಡಿಜೆ ಹಳ್ಳಿ ಪ್ರಕರಣ,

ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣಗಳನ್ನು ಕಮಿಷನರ್​ ವಿಂಗಡಣೆ ಮಾಡಿ ಆದೇಶ ಹೊರಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನಾಳೆಯಿಂದ ಮೂರು ಪ್ರಕರಣಗಳನ್ನು ಸಿಸಿಬಿಗೆ ಅಧಿಕೃತವಾಗಿ ವಹಿಸಲಾಗುತ್ತಿದೆ.

8 accused arrest, 8 accused arrest in DJ Halli violence, 8 accused arrest in DJ Halli violence case, DJ Halli violence case, DJ Halli violence case update, 8 ಜನ ಬಂಧನ, ಡಿಜೆ ಹಳ್ಳಿ ಪ್ರಕರಣದಲ್ಲಿ 8 ಜನ ಬಂಧನ, ಡಿಜೆ ಹಳ್ಳಿ ಪ್ರಕರಣ, ಡಿಜೆ ಹಳ್ಳಿ ಪ್ರಕರಣ ಸುದ್ದಿ,
ನಾಳೆಯಿಂದ ಅಧಿಕೃತವಾಗಿ 3 ಕೇಸ್ ಸಿಸಿಬಿ ತನಿಖೆ
author img

By

Published : Aug 25, 2020, 12:10 PM IST

ಬೆಂಗಳೂರ: ಡಿ ಜೆ ‌ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಒಂದೆಡೆ ಬಿರುಸಿನಿಂದ ಸಾಗುತ್ತಿದ್ರೆ, ಮತ್ತೊಂದೆಡೆ ಬಂಧಿತರ ಸಂಖ್ಯೆ ‌ಹಾಗೂ ಎಫ್​ಐಆರ್​ಗಳ ಸಂಖ್ಯೆ ಕೂಡ ಏರುತ್ತಿದೆ. ಹೀಗಾಗಿ ಸದ್ಯ ಪ್ರಕರಣದ ತನಿಖೆಯನ್ನ ವಿಂಗಡಿಸಿ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದಾರೆ.

ಪ್ರಕರಣದ ತನಿಖೆಯನ್ನ ಸಿಸಿಬಿ ಹಾಗೂ ಎಸಿಬಿ ನಡೆಸುತ್ತಿದ್ದು, ಸದ್ಯ ಪ್ರಕರಣದಲ್ಲಿ ಮೂರು ಪ್ರಮುಖ ಪ್ರಕರಣಗಳನ್ನ ಸಿಸಿಬಿಗೆ ನೀಡಲಾಗಿದೆ. ಉಳಿದ 70ಕ್ಕೂ ಹೆಚ್ಚು ಪ್ರಕರಣಗಳು ಪೂರ್ವ ವಿಭಾಗದ ಪೊಲೀಸರಿಗೆ ಹಂಚಿಕೆಯಾಗಿವೆ.

ನಾಳೆಯಿಂದ ಅಧಿಕೃತವಾಗಿ 3 ಕೇಸ್ ತನಿಖೆ...

ಸಿಸಿಬಿ ಅಧಿಕಾರಿಗಳು ಸದ್ಯ ಪ್ರಕರಣವನ್ನು ಬಹಳ ಗಂಭೀರತೆಯಿಂದ ತನಿಖೆ ನಡೆಸುತ್ತಿದ್ದಾರೆ‌. ಪ್ರಕರಣದಲ್ಲಿ ಟೆರರ್ ಲಿಂಕ್ ಇರುವ ಕಾರಣ ಸಿಸಿಬಿಯ ಉಗ್ರ ನಿಗ್ರಹ ಪಡೆ‌ ಕೂಡ ಬಂಧಿತ ಆರೋಪಿಗಳ ವಿಚಾರಣೆಯನ್ನ ನಡೆಸುತ್ತಿದೆ. ಹೀಗಾಗಿ ಡಿ ಜೆ ಹಳ್ಳಿ ಇನ್ಸ್​ಪೆಕ್ಟರ್​ ಕೇಶವಮೂರ್ತಿ, ಕೆ ಜಿ ಹಳ್ಳಿ ಠಾಣೆ ಇನ್ಸ್​ಪೆಕ್ಟರ್ ಅಜಯ್ ಸಾರಥಿ ಮತ್ತು ಅಖಂಡ ಶ್ರೀನಿವಾಸ್ ಕೊಟ್ಟ ದೂರುಗಳನ್ನು ಸಿಸಿಬಿ ಅಧಿಕಾರಿಗಳು ನಡೆಸಲಿದ್ದಾರೆ. ಹಾಗೆ ಇನ್ನುಳಿದ‌ ಎಫ್​ಐಆರ್​ಗಳನ್ನ ‌ಪೂರ್ವ ವಿಭಾಗದ ಪೊಲೀಸರಿಗೆ ನೀಡಲಾಗಿದೆ.

ಎಫ್ಐಆರ್​ಗಳನ್ನ ಪ್ರತ್ಯೇಕವಾಗಿ ಇನ್ಸ್​ಪೆಕ್ಟರ್​ಗಳು ತನಿಖೆ ನಡೆಸಬೇಕಾಗುತ್ತದೆ. ಸಬ್ ಇನ್ಸ್​ಪೆಕ್ಟರ್ ತನಿಖೆಯ‌ ಮಾನಿಟರ್ ಮಾಡಿದ್ರೆ, ಇನ್ಸ್​ಪೆಕ್ಟರ್ ಐಓಗಳಾಗಿರುತ್ತಾರೆ. ತಡರಾತ್ರಿ ಗಲಭೆ ಸೃಷ್ಟಿಸಿದ 8 ಜನರನ್ನ ಡಿ.ಜೆ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅರೋಪಿಗಳು ಕೋಲಾರ ಜಿಲ್ಲೆಯ ಬಳಿ ತಲೆಮರೆಸಿಕೊಂಡಿದ್ದರು.‌ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನ ಮೆಡಿಕಲ್ ಟೆಸ್ಟ್​ಗೆ ಒಳಪಡಿಸಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.