ETV Bharat / state

ಫೆಬ್ರವರಿ 13 ರಿಂದ ಯಲಹಂಕದ ವಾಯುನೆಲೆಯಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ - Air show Bangalore 2023

ಎರಡು ವರ್ಷಗಳಿಗೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನ ಕಳೆದ ಬಾರಿ ಕೋವಿಡ್ ಸೋಂಕು ಇದ್ದ ಕಾರಣ ಹೈಬ್ರಿಡ್ ಮಾದರಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ನಡೆದಿತ್ತು. ಆದರೆ ಬಾರಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವನ್ನು ಅದ್ಧೂರಿಯಾಗಿ ಪ್ರದರ್ಶಿಸಲು ಯಲಹಂಕದ ವಾಯುನೆಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವೈಮಾನಿಕ ಪ್ರದರ್ಶನ
ವೈಮಾನಿಕ ಪ್ರದರ್ಶನ
author img

By

Published : Nov 28, 2022, 3:06 PM IST

Updated : Nov 28, 2022, 3:11 PM IST

ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2023 ರ ಫೆಬ್ರವರಿ 13 ರಿಂದ 17ರ ವರೆಗೆ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ರಕ್ಷಣಾ ಸಚಿವಾಲಯ ಈ ಬಗ್ಗೆ ಅಧಿಕೃತವಾಗಿ ದಿನಾಂಕ ಪ್ರಕಟಿಸಿರುವುದರಿಂದ ಉತ್ತರ ಪ್ರದೇಶ, ಗೋವಾಗೆ ವೈಮಾನಿಕ ಪ್ರದರ್ಶನ ಸ್ಥಳಾಂತರಗೊಳ್ಳಲಿದೆ ಎನ್ನುವ ಎಲ್ಲಾ ಅನುಮಾನಗಳಿಗೆ ತೆರೆಬಿದ್ದಿದೆ. ದೇಶ ವಿದೇಶಗಳ ನೂರಾರು ರಕ್ಷಣಾ ಉಪಕರಣ ತಯಾರಿಕ ಕಂಪನಿಗಳು ತಮ್ಮ ಉತ್ಪನ್ನ ಪ್ರದರ್ಶಿಸಲಿವೆ. ಅಲ್ಲಿ ಜಗತ್ತಿನ ದೇಶಗಳ ಎದುರು ತಮ್ಮ ದೇಶದಲ್ಲಿರುವ ರಕ್ಷಣಾ ಸಾಮರ್ಥ್ಯವನ್ನು ಅನಾವರಣ ಮಾಡಲು ಸೂಕ್ತ ವೇದಿಕೆ ಇದಾಗಿದೆ.

ವೈಮಾನಿಕ ಪ್ರದರ್ಶನ ದಿನಾಂಕ ಪ್ರಕಟ
ವೈಮಾನಿಕ ಪ್ರದರ್ಶನ ದಿನಾಂಕ ಪ್ರಕಟ

ಎರಡು ವರ್ಷಗಳಿಗೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನ ಕಳೆದ ಬಾರಿ ಕೋವಿಡ್ ಸೋಂಕು ಇದ್ದ ಕಾರಣ ಹೈಬ್ರಿಡ್ ಮಾದರಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ನಡೆದಿತ್ತು. ಆದರೆ ಬಾರಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವನ್ನು ಅದ್ಧೂರಿಯಾಗಿ ಪ್ರದರ್ಶಿಸಲು ಯಲಹಂಕದ ವಾಯುನೆಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಓದಿ: ಫೆ. 13 ರಿಂದ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ

Last Updated : Nov 28, 2022, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.