ETV Bharat / state

ಕೋರ್ಟ್ ತಡೆಯಾಜ್ಞೆಗೂ ಸಿಬಿಐ ಅಧಿಕಾರಿಗಳು ಬಗ್ಗುತ್ತಿಲ್ಲ: ವಕೀಲ ಪೊನ್ನಣ್ಣ - Advocate Ponnanna

ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಸಿಬಿಐ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು ವಕೀಲ ಪೊನ್ನಣ್ಣ ಹೇಳಿದ್ದಾರೆ.

Ponnanna
ವಕೀಲ ಪೊನ್ನಣ್ಣ
author img

By

Published : Oct 5, 2020, 3:18 PM IST

ಬೆಂಗಳೂರು: ಡಿ.ಕೆ ಶಿವಕುಮಾರ್​ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಪ್ರಕರಣ ಸಂಬಂಧ ಮುಂಜಾನೆಯಿಂದ ಡಿಕೆಶಿ ನಿವಾಸದಲ್ಲೇ ಹಿರಿಯ ವಕೀಲ ಪೊನ್ನಣ್ಣ ಮೊಕ್ಕಾಂ ಹೂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತಡೆಯಾಜ್ಞೆ ನೀಡಿದ್ದ ಆದೇಶದ ಪ್ರತಿಯನ್ನು ಸಿಬಿಐ ಅಧಿಕಾರಿಗಳಿಗೆ ನೀಡೋಕೆ ಬಂದಿದ್ದೇವೆ, ಆದರೆ ಸಿಬಿಐ ಅಧಿಕಾರಿಗಳು ನಮ್ಮನ್ನು ಭೇಟಿಯಾಗಿಲ್ಲ, ಡಿಕೆಶಿ ಕುಟುಂಬದವರ ಮೂಲಕ ಆದೇಶದ ಪ್ರತಿ ತಲುಪಿಸಿದ್ದೇವೆ ಆದರೆ ಆದೇಶ ಪ್ರತಿ ಪಡೆಯುವುದಕ್ಕೂ ಅಧಿಕಾರಿಗಳು ಸಿದ್ಧರಿಲ್ಲ ಎಂದರು.

ಕೋರ್ಟ್ ಆದೇಶ ಇದ್ದರೂ ಒತ್ತಡದಲ್ಲಿ ಈ ಕೆಲಸ‌ ಮಾಡ್ತಿದ್ದಾರೆ. ಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಬಗ್ಗುತ್ತಿಲ್ಲ, ಈ ದಾಳಿ ದುರುದ್ದೇಶಪೂರ್ವಕ ಹಾಗೂ ರಾಜಕೀಯ ಪ್ರೇರಿತ ಎಂದರು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇವೆ. ಸಿಬಿಐ ಕಚೇರಿಗೆ ಹೋಗಿ ಹೈಕೋರ್ಟ್ ಆದೇಶದ ಪ್ರತಿಯನ್ನ ತಲುಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.