ETV Bharat / state

ನಗರದ ಹೊರವಲಯಗಳಲ್ಲಿ ಮತ್ತೆ ಜಾಹೀರಾತುಗಳಿಗೆ ಅವಕಾಶ: ಬಿಬಿಎಂಪಿ ಆಯುಕ್ತ - ಜಾಹಿರಾತಿಗೆ ಅವಕಾಶ ಮಾಡಿಕೊಡುವ ವಿಚಾರ

ಜಾಹೀರಾತಿಗೆ ಅವಕಾಶ ಮಾಡಿಕೊಡುವ ವಿಚಾರವಾಗಿ ಮೇಯರ್ ಎಂ. ಗೌತಮ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ.

ಬಿ.ಹೆಚ್ ಅನಿಲ್ ಕುಮಾರ್
ಬಿ.ಹೆಚ್ ಅನಿಲ್ ಕುಮಾರ್
author img

By

Published : Dec 31, 2019, 9:32 AM IST

ಬೆಂಗಳೂರು: ನಗರದಲ್ಲಿ ಮತ್ತೆ ಜಾಹೀರಾತು, ಹೋರ್ಡಿಂಗ್‌ಗಳಿಗೆ ಅವಕಾಶ ನೀಡುವ ಕಾನೂನು ಬೇಡವೇ ಬೇಡ ಎಂದು ಬಿಬಿಎಂಪಿ ಮೇಯರ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರೆ, ಇತ್ತ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಕಾನೂನುಗಳಲ್ಲಿ ಬದಲಾವಣೆ ತರಲಾಗುತ್ತಿದೆ ಎಂಬ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ಮೇಯರ್ ಎಂ. ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗ್ತಿದೆ.

ಬಿಬಿಎಂ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ಬಿಬಿಎಂಪಿ ಹಳೆಯ ನಿಯಮಕ್ಕೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈಗ ಸೈನೇಜ್ ಮತ್ತು ನಾಮಫಲಕಕ್ಕೆ ಸಂಬಂಧಿಸಿದಂತೆ ಮಾತ್ರ ಜಾಹೀರಾತು ನಿಯಮ ರೂಪಿಸಲಾಗಿದೆ. ಜಾಹೀರಾತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮ ರೂಪಿಸುವ ಅವಶ್ಯಕತೆ ಇದೆ. ಈಗಿರುವ ನಿಯಮಕ್ಕೆ ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ತಂದಿದ್ದು, ಸಾರ್ವಜನಿಕ ಆಕ್ಷೇಪಣೆಗೂ ಬಿಟ್ಟಿದೆ ಎಂದರು.

ನಗರದ ಹೊರವಲಯಗಳಲ್ಲಿ ಮತ್ತೆ ಜಾಹಿರಾತುಗಳಿಗೆ ಅವಕಾಶ

ನಗರದಲ್ಲಿ ಜಾಹೀರಾತು ಅಳವಡಿಕೆ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಎಲ್ಲಾ ವಲಯಗಳಲ್ಲೂ ಒಂದೇ ರೀತಿಯ ನಿಯಮ ಮಾಡಲು ಸಾಧ್ಯವಿಲ್ಲ. ನಗರದ ಎ ಝೋನ್, ಹಾಗೂ ಕೋರ್ ಏರಿಯಾಗಳನ್ನು ಬಿಟ್ಟು ಹೊರವಲಯಗಳಲ್ಲಿ ಹೋರ್ಡಿಂಗ್​ಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದರು.

ಕನ್ನಡ ನಾಮಫಲಕ ಹಾಕದ ಮಳಿಗೆಗಳ ಪರವಾನಗಿ ರದ್ದು ಮಾಡಲು ತಕ್ಷಣವೇ ಸಾಧ್ಯವಿಲ್ಲ. ವಾಣಿಜ್ಯ ಪರವಾನಗಿ ನೀಡುವ ನಿಯಮಗಳಲ್ಲಿ ಕನ್ನಡ ನಾಮಫಲಕದ ನಿಯಮವನ್ನೂ ಸೇರಿಸಿಕೊಳ್ಳಬೇಕಾಗಿದ್ದು, ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Intro:ನಗರದ ಹೊರವಲಯಗಳಲ್ಲಿ ಮತ್ತೆ ಹೋರ್ಡಿಂಗ್ , ಜಾಹಿರಾತುಗಳಿಗೆ ಅವಕಾಶ! - ಬಿ.ಹೆಚ್ ಅನಿಲ್ ಕುಮಾರ್
ಬೆಂಗಳೂರು: ನಗರದಲ್ಲಿ ಮತ್ತೆ ಜಾಹಿರಾತು, ಹೋರ್ಡಿಂಗ್ ಗಳಿಗೆ ಅವಕಾಶ ನೀಡುವ ಕಾನೂನು ಬೇಡವೇ ಬೇಡ ಎಂದು ಮೇಯರ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದ್ರೆ, ಇತ್ತ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಕಾನೂನುಗಳಲ್ಲಿ ಬದಲಾವಣೆ ತರಲಾಗುತ್ತಿದೆ ಎಂಬ ಸುಳಿವು ಕೊಟ್ಟಿದ್ದಾರೆ.
ಹೀಗಾಗಿ ಜಾಹಿರಾತಿಗೆ ಅವಕಾಶ ಮಾಡಿಕೊಡುವ ವಿಚಾರವಾಗಿ ಮೇಯರ್ ಎಂ. ಗೌತಮ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತರಾದ ಬಿ.ಎಚ್.ಅನಿಲ್ ಕುಮಾರ್ ನಡುವೆ ಭಿನ್ನಾಭಿಪ್ರಾಯದ ಲಕ್ಷಣಗಳು ಆರಂಭವಾಗಿವೆ.
ಈ ಬಗ್ಗೆ ಆಯುಕ್ತರು ಮಾತನಾಡಿ, ಬಿಬಿಎಂಪಿಯ ಹಳೆಯ ನಿಯಮಕ್ಕೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಬಿಬಿಎಂಪಿ ಈಗ ಸೈನೇಜ್ ಮತ್ತು ನಾಮಫಲಕಕ್ಕೆ ಸಂಬಂಧಿಸಿದಂತೆ ಮಾತ್ರ ಜಾಹೀರಾತು ನಿಯಮ ರೂಪಿಸಿದೆ. ಹೀಗಾಗಿ ಜಾಹೀರಾತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮ ರೂಪಿಸುವ ಅವಶ್ಯಕತೆ ಇದೆ. ಇದಕ್ಕೆ ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ತಂದಿದ್ದು, ಸಾರ್ವಜನಿಕ ಆಕ್ಷೇಪಣೆಗೂ ಬಿಟ್ಟಿದೆ. ಪಾಲಿಕೆಯೂ ಆಕ್ಷೇಪಣೆಗಳಿಗೆ ಸ್ಪಷ್ಟನೆ ನೀಡಿದೆ ಎಂದರು.
ನಗರಾಭಿವೃದ್ಧಿ ಇಲಾಖೆ ಸಧ್ಯದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದ್ದು, ನಿಯಮ ನೋಡಿಕೊಂಡು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗುವುದು. ಎಲ್ಲಾ ವಲಯಗಳಲ್ಲೂ ಒಂದೇ ರೀತಿಯ ನಿಯಮ ಮಾಡಲು ಸಾಧ್ಯವಿಲ್ಲ. ನಗರದ ಎ ಝೋನ್, ಹಾಗೂ ಕೋರ್ ಏರಿಯಾಗಳನ್ನು ಬಿಟ್ಟು ಹೊರವಲಯಗಳಲ್ಲಿ ಹೋರ್ಡಿಂಗ್ ಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದರು. ಹೈಕೋರ್ಟ್ ಕೂಡಾ ಎರಡೂ ರೀತಿಯಲ್ಲಿ ವ್ಯತಿರಿಕ್ತವಾದ ತೀರ್ಪು ನೀಡಿದೆ ಎಂದು ಹೇಳುವ ಮೂಲಕ ಮತ್ತೆ ಜಾಹಿರಾತು ಜಾರಿಗೆ ಆಯುಕ್ತರ ಒಲವಿರೋ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಕನ್ನಡ ನಾಮಫಲಕ ಹಾಕದ ಮಳಿಗೆಗಳ ಪರವಾನಗಿ ರದ್ದು ಮಾಡಲು ತಕ್ಷಣವೇ ಸಾಧ್ಯವಿಲ್ಲ. ವಾಣಿಜ್ಯ ಪರವಾನಗಿ ನೀಡುವ ನಿಯಮಗಳಲ್ಲಿ ಕನ್ನಡ ನಾಮಫಲಕದ ನಿಯಮವನ್ನು ಸೇರಿಸಿಕೊಳ್ಳಬೇಕಾಗಿದ್ದು, ಆದಷ್ಟು ಬೇಗ ಈ ಕ್ರಮಕೈಗೊಳ್ಳಲಾಗುವುದು ಎಂದರು.

ಸೌಮ್ಯಶ್ರೀ
Kn_Bng_07_advertising_policy_7202707
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.