ETV Bharat / state

ಕರಾಮುವಿವಿಯಲ್ಲಿ ದಂಡ ಶುಲ್ಕವಿಲ್ಲದೆ ಪ್ರವೇಶಾತಿ - ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ

ಕೋವಿಡ್ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ಅಕ್ಟೋಬರ್ 29ರ ಅಂತಿಮ ದಿನದವರೆಗೆ ದಂಡ ಶುಲ್ಕವಿಲ್ಲದೇ ಪ್ರವೇಶಾತಿಯನ್ನು ಮಾಡಬಹುದಾಗಿದೆ..

Admission without a fine fee in mysore open university
ಕರಾಮುವಿವಿಯಲ್ಲಿ ದಂಡ ಶುಲ್ಕವಿಲ್ಲದೆ ಪ್ರವೇಶಾತಿ
author img

By

Published : Oct 20, 2020, 5:48 PM IST

ಬೆಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 2020-21ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್​​​ಗಳಾದ ಬಿಎ, ಬಿಕಾಂ, ಎಂಎ, ಎಂಸಿಜೆ, ಎಂಕಾಂ, ಬಿಎಲ್​​ಐಎಸ್ಸಿ ಸೇರಿದಂತೆ ಇತರೆ ಕೋರ್ಸ್​​​ಗಳಿಗೆ ಪ್ರವೇಶ ಆರಂಭವಾಗಿದೆ.

ಕೋವಿಡ್ ಹಿನ್ನೆಲೆ ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ಅಕ್ಟೋಬರ್ 29ರ ಅಂತಿಮ ದಿನದವರೆಗೆ ದಂಡ ಶುಲ್ಕವಿಲ್ಲದೇ ಪ್ರವೇಶಾತಿಯನ್ನು ಮಾಡಬಹುದಾಗಿದೆ. ವಿದ್ಯಾರ್ಥಿಗಳು ಮುಕ್ತ ವಿವಿಯ ಅಧಿಕೃತ ವೆಬ್ ಸೈಟ್ www.ksoumysuru.ac.in ನಲ್ಲಿ KSOU admission portal ಮೂಲಕ ಆನ್​​ಲೈನ್​​ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಡೌನ್​​ಲೋಡ್ ಮಾಡಿಕೊಂಡು ಪ್ರಾದೇಶಿಕ ಕೇಂದ್ರಗಳಲ್ಲಿ ಸಲ್ಲಿಸಿ ಪ್ರವೇಶ ಪಡೆಯಬಹುದು.

Admission without a fine fee in mysore open university
ಪತ್ರಿಕಾ ಪ್ರಕಟಣೆ

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ.25 ರಷ್ಟು‌ ವಿನಾಯಿತಿ ನೀಡಲಾಗಿದೆ. ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು. ‌ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಸರ್ಕಾರಿ ರಜೆ ದಿನಗಳಂದು ಮತ್ತು ಭಾನುವಾರದಂದು ಸಹ ಕಚೇರಿ ತೆರೆದಿರಲಿದ್ದು, ಪ್ರವೇಶಾತಿ ಮಾಡಿಕೊಳ್ಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.