ಬೆಂಗಳೂರು: ಪ್ರಭಾವಿ ರಾಜಕಾರಣಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನದಿಂದ ನೊಂದಿರುವ ಅವರ ಪತ್ನಿ ಹಾಗು ಮಕ್ಕಳನ್ನು ಆದಿಚುಂಚನಗಿರಿಯ ಶ್ರೀಗಳು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ತೆರಳಿದ ನಿರ್ಮಲಾನಂದ ಸ್ವಾಮೀಜಿಯವರು ಶಿವಕುಮಾರ್ ಅವರ ಕುಟುಂಬದವರಿಗೆ ಧೈರ್ಯ ತುಂಬಿ ಮುಂದೆ ಒಳ್ಳೆಯದು ಆಗುತ್ತದೆ ಎಂದಿದ್ದಾರೆ.
![D.K. Shivakumar wife](https://etvbharatimages.akamaized.net/etvbharat/prod-images/dk-adichunchanagiri_09092019212212_0909f_1568044332_224.jpg)
ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರು ಇಡಿ ಬಂಧನದಿಂದ ತಮಗಾಗುತ್ತಿರುವ ವೇದನೆಯನ್ನ ಸ್ವಾಮೀಜಿ ಬಳಿ ನಿವೇದಿಸಿಕೊಂಡರು.
ಡಿ.ಕೆ.ಶಿವಕುಮಾರ್ ಪತ್ನಿ ಮತ್ತು ಮಕ್ಕಳಿಗೆ ಧೈರ್ಯ ಹೇಳುವ ಸಂದರ್ಭದಲ್ಲಿ ಡಿಕೆಶಿ ಅವರ ಪುತ್ರಿ ಐಶ್ವರ್ಯ, ಪುತ್ರ ಆಕಾಶ್, ಆದಿಚುಂಚನಗಿರಿ ಕಿರಿಯ ಸ್ವಾಮೀಜಿ ಸೌಮ್ಯನಾಥ ಶ್ರೀಗಳು ಹಾಗೂ ರಾಮನಗರ ಶಾಖಾಮಠದ ಅನ್ನದಾನೇಶ್ವರನಾಥ ಶ್ರೀಗಳು ಈ ಸಂದರ್ಭದಲ್ಲಿ ಹಾಜರಿದ್ದರು.