ಬೆಂಗಳೂರು: ನಿನ್ನೆ ಗಲಭೆ ನಡೆದ ಪ್ರದೇಶಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ.
ಡಿ.ಜಿ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳಿಗೆ ಹೋಗಿ ಕೆಎಸ್ಆರ್ಪಿ ಸಿಬ್ಬಂದಿ ಬಳಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು. ನಿಮ್ಮ ಬಳಿ ಮದ್ದುಗುಂಡುಗಳು ಎಷ್ಟಿವೆ..?, ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಸರಿಯಾಗಿ ಹಾಕಿಕೊಳ್ಳಿ. ಯಾವುದೇ ಕ್ಷಣದಲ್ಲಾದ್ರೂ ಏನೇ ಘಟಿಸಿದ್ರೂ ಎದುರಿಸಲು ಸಿದ್ಧರಾಗಿ ಎಂದು ಸೂಚನೆ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈಗ ತಾನೇ ಬೆಳಗಾವಿಯಿಂದ ಮರಳಿದ್ದೇನೆ. ಘಟನೆಯಲ್ಲಿ ಹಾನಿಯಾದ ವಾಹನ, ಸಿಬ್ಬಂದಿ ಕುರಿತು ಮಾಹಿತಿ ಪಡೆಯಲು ಬಂದಿದ್ದೇನೆ. ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಕೆಎಸ್ಆರ್ಪಿ ನಾಲ್ಕು ವಾಹನಗಳಿಗೆ ಹಾನಿಯಾಗಿದೆ, 15 ರಿಂದ 20 ಪೊಲೀಸ್ ಸಿಬ್ಬಂದಿ ಗಾಯಾಳುವಾಗಿದ್ದಾರೆ ಎಂದು ಮಾಹಿತಿ ನೀಡಿದರು.