ETV Bharat / state

ಖಾಸಗಿ‌ ಆಸ್ಪತ್ರೆಗೆ ಎಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ

ಹೆಚ್ಚುವರಿ ಹಣ ವಸೂಲಿ ಮಾಡ್ತಿರುವ ಆರೋಪದ ಮೇರೆಗೆ ಮಣಿಪಾಲ್ ಸಿಎಂಹೆಚ್ ಆಸ್ಪತ್ರೆಗೆ ಎಡಿಜಿಪಿ ಅಲೋಕ್ ಕುಮಾರ್ ದಿಢೀರ್​ ಭೇಟಿ ನೀಡಿದ್ದಾರೆ.

ADGP Alok Kumar visits private hospital
ಖಾಸಗಿ‌ ಆಸ್ಪತ್ರೆಗೆ ಎಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ
author img

By

Published : Jul 27, 2020, 1:01 PM IST

ಬೆಂಗಳೂರು: ಕೊರೊನಾ ಸೋಂಕಿತರಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಕಾರಣ ಅದರ ವಿಚಾರಣೆಗೆ ಎಂದು ಸರ್ಕಾರ ಐಪಿಎಸ್ ಅಧಿಕಾರಿಗಳ ತಂಡವನ್ನ ರಚನೆ ಮಾಡಿದೆ. ಹೆಚ್ಚುವರಿ ಹಣ ವಸೂಲಿ ಮಾಡ್ತಿರುವ ಆರೋಪದ ಮೇರೆಗೆ ಮಣಿಪಾಲ್ ಸಿಎಂಹೆಚ್ ಆಸ್ಪತ್ರೆಗೆ ಎಡಿಜಿಪಿ ಅಲೋಕ್ ಕುಮಾರ್ ದಿಢೀರ್​ ಭೇಟಿ ನೀಡಿದ್ದಾರೆ.

ಖಾಸಗಿ‌ ಆಸ್ಪತ್ರೆಗೆ ಎಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ

ಆಸ್ಪತ್ರೆಗೆ ಭೇಟಿ ಮಾಡಿದ ಅವರು, ಆಸ್ಪತ್ರೆಯಲ್ಲಿ ಸೋಂಕಿತರಿಗೆ ಎಷ್ಟು ಹಾಸಿಗೆಗಳನ್ನು ನೀಡಲಾಗಿದೆ. ಎಷ್ಟು ಮಂದಿ ಕೋವಿಡ್ ರೋಗಿಗಳಿದ್ದಾರೆ. ಈವರೆಗೂ ಗುಣಮುಖರಾದ ಸೋಂಕಿತರಿಂದ ಎಷ್ಟು ಹಣ ಪಡೆಯಲಾಗಿದೆ ಎಂಬುದರ ಬಿಲ್ ಪರಿಶೀಲನೆ ನಡೆಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಐಪಿಎಸ್ ಅಧಿಕಾರಿ ಡಿ. ರೂಪಾ ಭೇಟಿ ನೀಡಿದಾಗಲೂ ಕೊರೊನಾ ರೋಗಿಗಳಿಂದ ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಹಾಗೂ ದಾಖಲೆ ಲಭ್ಯವಾಗಿತ್ತು. ಸದ್ಯ ಸರ್ಕಾರ ರಚನೆ ಮಾಡಿರುವ ತಂಡದಲ್ಲಿ ಅಲೋಕ್ ಕುಮಾರ್ ಕೂಡ ಇದ್ದು, ಖಾಸಗಿ ಆಸ್ಪತ್ರೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಸರ್ಕಾರಿ ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚುವರಿ ಬಿಲ್ ವಸೂಲಿ ಮಾಡಿದ್ದರೆ ಕ್ರಿಮಿನಲ್ ಕೇಸ್ ದಾಖಲಾಗುವುದು ಪಕ್ಕಾ ಆಗಲಿದೆ. ಸದ್ಯ ಆಸ್ಪತ್ರೆಯಲ್ಲಿ ಮೊಕ್ಕಾಂ ಇದ್ದು ವೈದ್ಯರ ಬಳಿ ‌ಹಾಗೂ ಆಡಳಿತ‌ ಮಂಡಳಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.