ETV Bharat / state

ಮಂಗಳೂರು ಬ್ಲಾಸ್ಟ್ ಪ್ರಕರಣ.. ಬೇರೆಡೆ ಹೋಗಿ ಬಾಂಬ್​ ಸ್ಫೋಟಿಸುವ ಉದ್ದೇಶ ಅವರದ್ದಾಗಿತ್ತು: ಎಡಿಜಿಪಿ ಅಲೋಕ್ ಕುಮಾರ್

ಶನಿವಾರ ಸಂಜೆ 4:30 ರ ಸಂದರ್ಭದಲ್ಲಿ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಬೇರೆಡೆ ಹೋಗಿ ಬಾಂಬ್​ ಸ್ಫೋಟಿಸುವ ಉದ್ದೇಶ ಅವರದ್ದಾಗಿತ್ತು ಎಂದು ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್
ಎಡಿಜಿಪಿ ಅಲೋಕ್ ಕುಮಾರ್
author img

By

Published : Nov 20, 2022, 5:22 PM IST

Updated : Nov 20, 2022, 5:31 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ ಅಲೋಕ್ ಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್ ಅವರು ಮಾತನಾಡಿದರು

ಮಂಗಳೂರಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅಅವರು, ಶನಿವಾರ ಸಂಜೆ 4:30 ರಲ್ಲಿ ಸುಮಾರಿಗೆ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಬೇರೆಡೆ ಹೋಗಿ ಅದನ್ನು ಸ್ಫೋಟಿಸುವ ಉದ್ದೇಶ ಅವರದ್ದಾಗಿತ್ತು. ಆದ್ರೆ ಆಕಸ್ಮಿಕವಾಗಿ ಆಟೋದಲ್ಲೇ ಅದು ಬ್ಲಾಸ್ಟ್ ಆಗಿದೆ ಎಂದಿದ್ದಾರೆ.

ಈ ಪ್ರಕರಣದಲ್ಲಿ ಯಾರು ಇದ್ದಾರೆ ಅನ್ನುವ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಎಲ್ಲೆಲ್ಲಿ ಅವನ ಲಿಂಕ್ ಇತ್ತು, ಅಲ್ಲೆಲ್ಲ ನಮ್ಮ ತಂಡ ಹೋಗಿದೆ. ಅವನ ಗುರುತು 100% ಖಚಿತ ಪಡಿಸಲಿಕ್ಕೆ ಅವರ ಸಂಬಂದಿಕರನ್ನು ಕರೆದಿದ್ದೇವೆ ಎಂದು ಅಲೋಕ್​ ಕುಮಾರ್​ ಮಾಹಿತಿ ನೀಡಿದರು.

ನಾಳೆವರೆಗೂ ವಿಚಾರಣೆ ಮುಂದುವರೆಯಲಿದೆ: ಅವರು ಬಂದು ಗುರುತಿಸಿದ ನಂತರ ಯಾರು ಅಂತ ನಾವು ಖಚಿತಪಡಿಸುತ್ತೇವೆ. ಆರೋಪಿಯ ಮುಖಕ್ಕೆ ಸುಟ್ಟು ಗಾಯವಾಗಿದೆ. 45% ದೇಹಗಳಲ್ಲಿ ಗಾಯವಾಗಿದೆ. ಮಾತನಾಡುವ ಪರಿಸ್ಥಿತಿಯಲ್ಲಿ ಗಾಯಾಳು ಆರೋಪಿಯಿಲ್ಲ. ಇಂದು ರಾತ್ರಿ ಅಥವಾ ನಾಳೆವರೆಗೂ ಇನ್ನೂ ವಿಚಾರಣೆ ಮುಂದುವರೆಯುತ್ತದೆ ಎಂದು ತಿಳಿಸಿದರು.

ಕೇಂದ್ರದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಕೆಲಸ: ಜತೆಗೆ ತರಾತುರಿಯಲ್ಲಿ ಈ‌ ಬಗ್ಗೆ ನಾವು ಏನೂ ಹೇಳಲು ಆಗಲ್ಲ. 12 ರಿಂದ 15 ಗಂಟೆ ನಂತರ ಹೇಳ್ತೀವಿ. ಯಾವ ವಿಚಾರಕ್ಕೆ ಆಯ್ತು ಅನ್ನುವ ಬಗ್ಗೆ ನಾವು ಹೇಳಲು ಆಗಲ್ಲ. ನಮ್ಮ ಹಿರಿಯರ ತಂಡದೊಂದಿಗೆ ಕೇಂದ್ರ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡ್ತಿದ್ದೀವಿ ಎಂದು ಅಲೋಕ್​​ ಕುಮಾರ್ ಹೇಳಿದರು.

ಓದಿ: ಆಧಾರ್ ಕಳೆದುಕೊಂಡಿದ್ದ ಹುಬ್ಬಳ್ಳಿಯ ಯುವಕ.. ಶಂಕಿತನ ಕೈಗೆ ಸಿಕ್ಕು​ ದುರುಪಯೋಗ: ಪೋಷಕರ ಸ್ಪಷ್ಟನೆ

Last Updated : Nov 20, 2022, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.