ಬೆಂಗಳೂರು: ಗಲಭೆ ನಡೆದ ಸ್ಥಳದಲ್ಲಿದ್ದ ಪೂರ್ವ ವಿಭಾಗ ಹೆಚ್ಚುವರಿ ಆಯುಕ್ತ ಮುರುಗನ್ ಈಟಿವಿ ಭಾರತ ಜೊತೆ exclusive ಆಗಿ ಮಾಹಿತಿ ಹಂಚಿಕೊಂಡಿದ್ದಾರೆ. ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ಬಳಿ ನವೀನ್ ಕುಮಾರ್ ಎಂಬಾತ ಪ್ರವಾದಿ ಅವರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದ. ಈ ಪೋಸ್ಟ್ನಿಂದ ಕೆರಳಿದವರು ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ.
ಘಟನೆ ನಡೆಯುತ್ತಿರುವ ವಿಚಾರ ಗೊತ್ತಾಗಿ ನಾವು ಸ್ಥಳಕ್ಕೆ ಹೋದೆವು. ಆದರೆ ಘಟನಾ ಸ್ಥಳಕ್ಕೆ ನಾವು ಹೋಗದ ಹಾಗೆ ಬೆಂಕಿ ಹಚ್ಚಿದ್ದರು. ನನ್ನ ಪೊಲೀಸ್ ಕೆರಿಯರ್ನಲ್ಲಿ ಈ ರೀತಿಯಾದ ಘಟನೆಯನ್ನು ನಾನು ನೋಡಿಲ್ಲ ಎಂದಿದ್ದಾರೆ.
ಕಮಿಷನರ್ ನಿರ್ದೇಶನದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ನಾವು ಹಾಗೂ ಸಿಬ್ಬಂದಿ ಸತತ ಪ್ರಯತ್ನ ಮಾಡಿದಾಗ, ಗಲಭೆಕೋರರ ಮನವೊಲಿಕೆ ಆಗದೆ ಇರುವಾಗ ಪೈರಿಂಗ್ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಯಾಕಂದ್ರೆ ಗಲಭೆ ಕೋರರು ಠಾಣೆಗೆ ಬೆಂಕಿ ಇಟ್ಟರು. ಪೊಲೀಸ್ ವಾಹನಗಳನ್ನು ಸುಟ್ಟು, ನಮ್ಮ ಮೇಲೆ ಹಲ್ಲೆ ಕಲ್ಲು ತೂರಾಟ ಮಾಡಿದರು, ನಾವು ಪ್ರಾಣದ ಹಂಗು ಬಿಟ್ಟು ಕೆಲಸ ಮಾಡಿದ್ದೆವು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಲ್ಲದೆ ಪೊಲೀಸರು ಬೇರೆ ಯಾರು ಅಲ್ಲಾ ಸಮಾಜದಲ್ಲಿ ಜನರ ಅಣ್ಣಾ ತಮ್ಮರ ಹಾಗೆ ಜನರ ರಕ್ಷಣೆ, ಶಾಂತಿ ಕಾಪಾಡಲು ಇರುವವರು. ಈ ರೀತಿಯಾಗಬಾರದಿತ್ತು. ನಾನು ಪೂರ್ವ ವಲಯದ ಅಧಿಕಾರಿ ನನಗೆ ಬಹಳ ನೋವು ತಂದಿದೆ ಎಂದು ತಿಳಿಸಿದ್ದಾರೆ.