ಬೆಂಗಳೂರು: ಒಡಿಶಾದಿಂದ ರೈಲಿನ ಮೂಲಕ ಗಾಂಜಾ ಆಮದು ಮಾಡಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ಕೆಂಪೇಗೌಡ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನವಾಜ್ ಪಾಷಾ, ನೂರ್ ಅಹಮ್ಮದ್, ಶ್ರೀಮತಿ ಮುಬಾರಕ್, ಇಮ್ರಾನ್ ಪಾಷಾ ಹಾಗೂ ಕಿರಣ್ ಬಂಧಿತ ಆರೋಪಿಗಳು.
ಒರಿಸ್ಸಾದ ಭುವನೇಶ್ವರದಲ್ಲಿ ಗಾಂಜಾ ಖರೀದಿಸುತ್ತಿದ್ದ ಆರೋಪಿಗಳಿಗೆ ರೈಲಿನ ಮೂಲಕ 10-15 ಬ್ಯಾಗ್ಗಳಲ್ಲಿ ಗಾಂಜಾ ಕಳುಹಿಸಲಾಗುತ್ತಿತ್ತು. ರೈಲಿನ ಸೀಟಿನಡಿ ಇರಿಸಿ ಕಳಿಸಲಾಗುತ್ತಿದ್ದ ಗಾಂಜಾವನ್ನ ಬೆಂಗಳೂರಿನ ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಇಳಿಸಿಕೊಳ್ಳುತ್ತಿದ್ದ ಆರೋಪಿಗಳು ಕೆಂಪೇಗೌಡ ನಗರ ಠಾಣಾ ವ್ಯಾಪ್ತಿಯ ಕೆಂಪಾಂಬುದಿ ಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು.
ಸೆಪ್ಟೆಂಬರ್ 12ರಂದು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನ 66 ಕೆ. ಜಿ ಗಾಂಜಾ ಸಹಿತ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ತನಿಖೆ ವೇಳೆ ಆರೋಪಿಗಳು ಕೆಂಗೇರಿಯ ಮನೆಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ 2 ಕೋಟಿ ಮೌಲ್ಯದ ಬರೋಬ್ಬರಿ 506 ಕೆ ಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದು, ಬಂಧಿತರ ವಿಚಾರಣೆ ಮುಂದುವರೆದಿದೆ.
ಓದಿ: ಬೆಂಗಳೂರು: ಹಾಡಹಗಲೇ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ