ETV Bharat / state

60 ಬಾರಿ ಚಾಕುವಿನಿಂದ ಚುಚ್ಚಿ ವೃದ್ಧೆ ಕೊಲೆ.. ಆರೋಪಿ ಸಿಕ್ಕಿಬೀಳಲು ಸಾಕಾಯ್ತು ಅದೊಂದು ಸುಳಿವು

ಬೆಂಗಳೂರು ವೃದ್ಧೆ ಕೊಲೆ ಪ್ರಕರಣ- ಸಾಲಗಾರರ ಕಾಟಕ್ಕೆ ಬೇಸತ್ತು ಹಣಕ್ಕಾಗಿ ಮನೆಯ ಮಾಲಕಿಯನ್ನು ಕೊಂದ ಯುವಕ- ಕದ್ದಿದ್ದ ಚಿನ್ನಾಭರಣ ಗಿರವಿ ಇಟ್ಟು ಸಿಕ್ಕಿಬಿದ್ದ ಚಾಲಾಕಿ

ಮಾಲಕಿ ಯಶೋಧಮ್ಮ
ಮಾಲಕಿ ಯಶೋಧಮ್ಮ
author img

By

Published : Jul 24, 2022, 4:26 PM IST

ಬೆಂಗಳೂರು: ಸಾಲಗಾರರ ಕಾಟ ತಾಳಲಾರದೆ ಮನೆಯ ಮಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಮೈಮೇಲಿನ ಒಡವೆ ಕದ್ದು ಬಳಿಕ ಮನೆಯವರಿಗೆ ಹಾಗೂ ಪೊಲೀಸರೊಂದಿಗೆ ಕರೆ ಮಾಡಿ ಆರೋಪಿಯೊಬ್ಬ ಚಾಣಾಕ್ಷ್ಯತನ ಮೆರೆದಿದ್ದ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ತಮಗೆ ಸಿಕ್ಕ ಒಂದೇ ಒಂದು ಸುಳಿವಿನಿಂದ ಆರೋಪಿಯನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ‌.

ಡಿಸಿಪಿ‌ ಕೃಷ್ಣಕಾಂತ್ ಅವರು ಮಾತನಾಡಿದರು

ವಿನಾಯಕ್ ನಗರದ ನಿವಾಸಿ ಕಿಶಾನ್ ಬಂಧಿತ ಆರೋಪಿ.‌ ಅವಿವಾಹಿತನಾಗಿದ್ದ ಕಿಶಾನ್ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಆನ್​ಲೈನ್​ ಟ್ರೇಡಿಂಗ್ ಉದ್ಯಮದಲ್ಲಿ ಕೈ ಸುಟ್ಟುಕೊಂಡು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಹೀಗಾಗಿ ಇತ್ತೀಚೆಗೆ ಸಾಲಗಾರರು ಈತನ ಬೆನ್ನು ಬಿದ್ದಿದ್ದರು.

ಇದರಿಂದ ಬೇಸತ್ತಿದ್ದ ಆರೋಪಿ ಮನೆ ಮಾಲಕಿ ಯಶೋಧಮ್ಮ ಬಳಿ ಈ ಹಿಂದೆ 40 ಸಾವಿರ ರೂಪಾಯಿ ಸಾಲ ಸಹ ಪಡೆದು ತೀರಿಸಲಿರಲಿಲ್ಲ. ಆಗಾಗ ಇಬ್ಬರ ನಡುವೆ ಮಾತಿನ ಚಕಮಕಿ‌ ನಡೆಯುತ್ತಿತ್ತು. ಮನೆಯ ನೆಲ‌ಮಹಡಿಯ ಪ್ರತ್ಯೇಕ ಕೋಣೆಯಲ್ಲಿ ಆರು ವರ್ಷಗಳಿಂದ ಯಶೋಧಮ್ಮ ವಾಸವಿದ್ದರೆ, ಈಕೆಯ ಮಗ ಹಾಗೂ ಸೊಸೆ ಮೇಲಿನ ಮಹಡಿಯಲ್ಲಿ ವಾಸವಿದ್ದರು.

ಅದೇ ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿ ವಾಸವಿದ್ದ ಕಿಶಾನ್ ಜುಲೈ 1ರಂದು ಮನೆಗೆ‌ ನುಗ್ಗಿ ಚಾಕುವಿನಿಂದ ಸುಮಾರು 60 ಬಾರಿ ಚುಚ್ಚಿ ಬರ್ಬರವಾಗಿ ವೃದ್ಧೆಯನ್ನು ಹತ್ಯೆ ಮಾಡಿದ್ದ‌. ಮಾರನೇ ದಿನ ಆರೋಪಿಯೇ ಮನೆಯವರಿಗೆ ಫೋನ್ ಮಾಡಿ ಕೊಲೆಯಾಗಿರುವ ವಿಷಯ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ‌. ತಪಾಸಣೆ ನಡೆಸಿದ ವೈದ್ಯರು ಯಶೋಧಮ್ಮ ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾರೆ. ಈ ಸಂಬಂಧ ವೃದ್ಧೆಯ ಮಗ ರಾಜು ಸಿ. ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿ ಕಣ್ಣಮುಂದಿದ್ದರೂ ಗುರುತಿಸದ ಪೊಲೀಸರು: ಪ್ರಕರಣ ದಾಖಲಿಸಿಕೊಂಡ‌ ಪೊಲೀಸರಿಗೆ ಆರಂಭದಲ್ಲಿ ಆರೋಪಿ ಪತ್ತೆ ಮಾಡುವುದೇ ಸವಾಲಾಗಿತ್ತು. ಕೊಲೆಯಾದ ಸ್ಥಳದಲ್ಲಿ ಯಾವುದೇ ಸುಳಿವು ಇರಲಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿ ಸೆರೆಯಾಗಿರಲಿಲ್ಲ. ಯಾವ ಉದ್ದೇಶಕ್ಕಾಗಿ ಹಂತಕ ಕೊಲೆ ಮಾಡಿದ್ದಾನೆ ಎಂಬುದರ ಬಗ್ಗೆಯೂ ಮಾಹಿತಿ ಇರಲಿಲ್ಲ.‌ ಸಂಬಂಧಿಕರು ಹಾಗೂ ಸ್ಥಳೀಯರನ್ನು ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊಲೆಯಾಗಿ 20 ದಿನ ಕಳೆದರೂ ಆರೋಪಿ ಯಾರೆಂಬುದೇ ಪೊಲೀಸರಿಗೆ ಪತ್ತೆ ಮಾಡುವುದು ತಲೆನೋವಾಗಿ ಪರಿಣಮಿಸಿತ್ತು.

ಪೊಲೀಸರಿಗೆ ವರದಾನವಾಯ್ತು ಅದೊಂದು ಸುಳಿವು : ಯಶೋಧಮ್ಮ ಅವರನ್ನು ಕೊಲೆ ಮಾಡಿದ್ದ ಆರೋಪಿ ಮೈಮೇಲಿದ್ದ ಚಿನ್ನದ ಸರ ಹಾಗೂ ಎರಡು ಚಿನ್ನದ ಬಳೆಯನ್ನು ಕಳ್ಳತನ ಮಾಡಿದ್ದ. ಮತ್ತೊಂದೆಡೆ ಆರೋಪಿ‌‌ ಕಿಶಾನ್ ಯಾರಿಗೂ ತನ್ನ ಮೇಲೆ ಅನುಮಾನ ಬರದಂತೆ‌ ನಟಿಸಿದ್ದ. ಮನೆಯವರೊಂದಿಗೆ ಇದ್ದು, ಕೊಲೆಯಾದ ವೃದ್ಧೆಯ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ. ಅಲ್ಲದೇ ಪೊಲೀಸರ ತನಿಖೆಗೂ ಸಹಕರಿಸಿದ್ದ.

ಹೀಗಾಗಿ, ಆರಕ್ಷಕರಿಗೆ ಈತನ‌ ಮೇಲೆ‌ ಸಂಶಯ ಬಂದಿರಲಿಲ್ಲ. ತನಿಖೆ ವೇಳೆ ಕದ್ದ ಚಿನ್ನಾಭರಣವನ್ನ ಗಿರವಿ ಅಂಗಡಿಯೊಂದರಲ್ಲಿ ಅಡ ಇಟ್ಟಿದ್ದರ ಬಗ್ಗೆ ಕಂಡುಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಕಿಶಾನ್ ಎಂಬಾತನೇ ಕೊಲೆಗಡುಕ ಎಂಬ ಸಂಗತಿ ಗೊತ್ತಾಗಿದೆ. ಅನುಮಾನದ ಮೇರೆಗೆ ವಶಕ್ಕೆ ಪಡೆದುಕೊಂಡು‌ ಪೊಲೀಸ್ ಶೈಲಿಯಲ್ಲಿ ಪ್ರಶ್ನಿಸಿದಾಗ ಬಾಯ್ಬಿಟ್ಟಿದ್ದಾನೆ. ಸಾಲ ತೀರಿಸಲು ವೃದ್ಧೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ‌ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

ಓದಿ: ದರೋಡೆ ಮಾಡಿ‌ ಪ್ರಾಯಶ್ಚಿತ್ತಕ್ಕೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿದ್ದ ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.