ETV Bharat / state

ಹುಟ್ಟುಹಬ್ಬದಂದು ತಾಯಿ ನೆನೆದು ಕಣ್ಣೀರಿಟ್ಟ ಸಂಜನಾ ಗಲ್ರಾನಿ - Actress Sanjana's Birthday

ಇಂದು ನಟಿ ಸಂಜನಾ ಗಲ್ರಾನಿ ಅವರ ಹುಟ್ಟುಹಬ್ಬ. ಈ ದಿನವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯುವ ಪರಿಸ್ಥಿತಿ ಅವರದ್ದು. ಈ ವೇಳೆ ಕುಟುಂಬಸ್ಥರು ನೀಡಿರುವ ಬಟ್ಟೆ ಕಂಡು ಅವರು ಕಣ್ಣೀರು ಹಾಕಿದ್ದಾರೆ.

actress-sanjana-galrani
ನಟಿ ಸಂಜನಾ ಗಲ್ರಾನಿ
author img

By

Published : Oct 10, 2020, 10:57 AM IST

ಬೆಂಗಳೂರು: ಕೊರೊನಾ ಇರುವ ಕಾರಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಅವಕಾಶವಿಲ್ಲ. ಹೀಗಾಗಿ ಸಂಜನಾ ಗಲ್ರಾನಿ ತನ್ನ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ ಮೂರು ನಾಲ್ಕು ಬಾರಿ ಜೋರಾಗಿ ಕಿರುಚುತ್ತಾ ಸಂಜನಾ ಗೋಳಾಟ ಮಾಡಿದ್ದಾರೆ. ಎಂಬ ಮಾಹಿತಿ ದೊರೆತಿದೆ. ಇಂದು ‌ನಟಿ ಸಂಜನಾಗೆ 31ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಪ್ರತಿವರ್ಷ ಐಷಾರಾಮಿ ಹೋಟೆಲ್​​​​ನಲ್ಲಿ ಬರ್ತ್​ ಡೇ ಆಚರಿಸಿಕೊಳ್ತಿದ್ದು, ಈ ಬಾರಿ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.

ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಗೆ ಪೋಷಕರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ತಾಯಿ ರೇಷ್ಮಾ, ಗಲ್ರಾನಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾರೆ.

ವಿಚಾರಣಾಧೀನ ಕೈದಿಯಾಗಿರುವ ಸಂಜನಾಗೆ ಕುಟುಂಬಸ್ಥರು ಜೊತೆ ಮಾತನಾಡಲು ಒಂದು ವಾರಗಳ ಅವಕಾಶ ನೀಡಲಾಗಿದೆ. ವಾರದಲ್ಲಿ 2 ಬಾರಿ ಮಾತ್ರ ಮನೆಗೆ ಕರೆ ಮಾಡಲು ಸಿಬ್ಬಂದಿ ಅವಕಾಶ ನೀಡಿದ್ದಾರೆ. ಇನ್ನು ಹುಟ್ಟುಹಬ್ಬದ ದಿನವೂ ಪೋಷಕರ ಭೇಟಿಗೆ ಅವಕಾಶ ಇಲ್ಲದಿರುವುದರಿಂದ, ಅವರು ಕೊಟ್ಟು ಹೋಗಿರುವ ಬಟ್ಟೆಯನ್ನು ಕಂಡು ಸಂಜನಾ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಸಂಜನಾ ಗಲ್ರಾನಿ ಹುಟ್ಟುಹಬ್ಬ... ಜೈಲಲ್ಲಿ ಸಿಬ್ಬಂದಿ ಜೊತೆ ಅಳಲು ತೋಡಿಕೊಂಡ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.