ಬೆಂಗಳೂರು: ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಮೇಲೆ ಕಿರಿಕ್ ಪಾರ್ಟಿ ಸಿನಿಮಾ ನಟಿ ಸಂಯುಕ್ತಾ ಹೆಗ್ಡೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ಸಲ್ಲಿಸಿದ್ದಾರೆ.
ಪಾರ್ಕ್‌ನಲ್ಲಿ ಬಟ್ಟೆ ಬಗ್ಗೆ ಆಕ್ಷೇಪಿಸಿದ್ದ ಜನರ ಜತೆ ನಟಿ ಸಂಯುಕ್ತ ಹೆಗ್ಡೆ ಕಿರಿಕ್.. ಇದು ಬೇಕಿತ್ತಾ!?
ತಮ್ಮ ಮೇಲೆ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನಟಿ ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆ ಅಗರ ಪಾರ್ಕ್‌ನಲ್ಲಿ ಹುಲಾ ಹೂಪ್ ಪ್ಟಾಕ್ಟೀಸ್ ವೇಳೆ ತುಂಡು ಬಟ್ಟೆ ಹಾಕಿರುವುದನ್ನು ಕವಿತಾ ರೆಡ್ಡಿ ವಿರೋಧಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಇದು ಅಸಭ್ಯ ವರ್ತನೆ ಎಂದು ಆರೋಪಿಸಿ ಕವಿತಾ ರೆಡ್ಡಿ ದೂರು ನೀಡಿದ್ದರು.
ಈ ದೂರಿನ ಅನ್ವಯ ಪೊಲೀಸ್ ಠಾಣೆಯಲ್ಲಿ (ಗಂಭೀರ ಸ್ವರೂಪವಲ್ಲದ ಪ್ರಕರಣ) ಎನ್ಸಿಆರ್ ದಾಖಲು ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ನಟಿ ಸಂಯುಕ್ತಾ ಹೆಗ್ಡೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಕವಿತಾ ವಿರುದ್ಧ ಪ್ರತಿದೂರು ನೀಡಿದ್ದಾರೆ.