ಬೆಂಗಳೂರು: ಡ್ರಗ್ಸ್ ನಂಟು ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ನಿಂದ ಜಾಮೀನು ಸಿಕ್ಕಿ ಎರಡು ದಿನಗಳು ಕಳೆದಿವೆ. ಆದರೆ, ಜಾಮೀನು ಆದೇಶ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ಬಂದು ತಲುಪುವ ಪ್ರಕ್ರಿಯೆ ಸಾಕಷ್ಟು ಇರುವುದರಿಂದ ಇಂದು ಸಂಜೆ ರಾಗಿಣಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಜಾಮೀನು ಸಿಕ್ಕರೂ ಯಾಕಿಷ್ಟು ತಡ ಎಂದು ನಿನ್ನೆ ಸಿಬ್ಬಂದಿ ಬಳಿ ನೋವು ತೋಡಿಕೊಂಡಿದ್ದ ರಾಗಿಣಿ, ವಕೀಲರೊಂದಿಗೂ ವಿಳಂಬದ ಕುರಿತು ಮಾತನಾಡಿದ್ದರು. ನಂತರ ಪೋಷಕರೊಂದಿಗೆ ಈ ಕುರಿತು ಬೇಸರ ವ್ಯಕ್ತಪಡಿಸಿದ್ದರು.
ಓದಿ: ಮುಜರಾಯಿ ದೇಗುಲಗಳಲ್ಲಿ ತಿಂಗಳಿಗೆ ಎರಡು ದಿನ ಸಪ್ತಪದಿ ಕಾರ್ಯಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಇಂದು ಜಾಮೀನು ಆದೇಶ ಪರಪ್ಪನ ಅಗ್ರಹಾರದ ಅಧಿಕಾರಿಗಳಿಗೆ ತಲುಪಿದ ನಂತರ ಮೂರ್ನಾಲ್ಕು ಗಂಟೆಗಳ ಕಾಲ ಪ್ರಕ್ರಿಯೆ ಮುಂದುವರೆಯುತ್ತದೆ. ಸಂಜೆ ನಂತರ ರಾಗಿಣಿ ಪರಪ್ಪನ ಅಗ್ರಹಾರದಿಂದ ಹೊರಬರುವ ಸಾಧ್ಯತೆಯಿದೆ. ರಾಗಿಣಿ ಗುರುವಾರವೇ ತನ್ನ ಬಟ್ಟೆ ಹಾಗು ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಜೈಲಾಚೆಗೆ ಬರಲು ಕಾತರದಿಂದ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.