ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಬಂಧಿಯಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ನಿನ್ನೆ ಜಾಮೀನು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅದು ಈಡೇರಲಿಲ್ಲ. ಹೀಗಾಗಿ ಬೇಸರ ಕಳೆಯಲು ರಾಗಿಣಿ ಜೈಲಿನಲ್ಲಿರುವ ಖೈದಿಗಳ ಜೊತೆ ಮಾತಾನಾಡುತ್ತಾ ಸಮಯ ಕಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೈಕೋರ್ಟ್‌ಗೆ ಇಂದು ದಸರಾ ರಜೆ ಹಾಗು ನಾಳೆ ಅ.30ಕ್ಕೆ ಈದ್ ಮಿಲಾದ್ ರಜೆ ಇದೆ. ಹಾಗಾಗಿ ನವೆಂಬರ್ 2 ನೇ ತಾರೀಖು ಸೋಮವಾರ ಕೋರ್ಟ್ ತೆರೆಯಲಿದೆ. ಹೀಗಾಗಿ ರಾಗಿಣಿಗೆ ಜೈಲಲ್ಲಿರಬೇಕಾದ ಅನಿವಾರ್ಯತೆಯಿದೆ.
ಬೆಳಗ್ಗೆ ಎದ್ದ ಕೂಡಲೇ ರಾಗಿಣಿ ರಾಜಕಾರಣಿಯಂತೆ ಕೈಬೀಸಿ ಭಾಷಣ ಮಾಡೋಕೆ ನಿಂತು ಬಿಡ್ತಾರಂತೆ. ಇತರೆ ಖೈದಿಗಳು ರಾಗಿಣಿ ಜೊತೆ ಕಷ್ಟಸುಖ ಮಾತನಾಡುತ್ತಾ ಸಮಯ ಕಳೆಯುತ್ತಾರಂತೆ. ಜೈಲಾಧಿಕಾರಿಗಳು ಬ್ಯಾರಕ್ ಒಳಗಡೆ ಇರುವಂತೆ ಸೂಚಿಸಿದರೂ ಹೆಚ್ಚಾಗಿ ಬ್ಯಾರಕ್ ಹೊರಗಡೆಯ ಕಾರಿಡಾರ್ನಲ್ಲಿ ನಟಿ ಓಡಾಡುತ್ತಾರಂತೆ.
ಆದರೆ, ಸಂಜನಾ ಮಾತ್ರ ಸೈಲೆಂಟಾಗಿ ಇರ್ತಾರೆ ಎಂಬ ಮಾಹಿತಿ ಇದೆ. ತನ್ನ ಬ್ಯಾರಕ್ನಲ್ಲಿರುವವರ ಜೊತೆ ಮಾತ್ರ ಅವರು ಮಾತುಕತೆ ನಡೆಸುತ್ತಾರೆ. ಅದು ಬಿಟ್ಟು ಹೆಚ್ಚು ಸಮಯ ಹೊರಗಡೆ ಕಳೆಯೋದಿಲ್ಲಂತೆ.
ರಾಗಿಣಿ ಚಟುವಟಿಕೆಗಳು ಜೈಲಾಧಿಕಾರಿಗಳಿಗೆ ತಲೆನೋವಾಗಿದೆ ಎನ್ನಲಾಗಿದೆ.