ETV Bharat / state

ಬಿಜೆಪಿ ಸೇರಿದ ನಟ ಶಶಿಕುಮಾರ್, ಮಾಜಿ ಸಂಸದ ಮುದ್ದಹನುಮೇಗೌಡ - ಜೆಡಿಎಸ್​ ನಾಯಕರಾಗಿದ್ದ ನಟ ಶಶಿಕುಮಾರ್​

ಈ ಹಿಂದೆ ಜೆಡಿಎಸ್​ ನಾಯಕರಾಗಿದ್ದ ನಟ ಶಶಿಕುಮಾರ್​ ಅವರು ತಮ್ಮ ಪಕ್ಷವನ್ನು ತೊರೆದು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರೊಂದಿಗೆ ಕಾಂಗ್ರೆಸ್​ ನಾಯಕ ಮುದ್ದಹನುಮೇಗೌಡ ಅವರೂ ಬೀಜೆಪಿಯನ್ನು ಸೇರಿಕೊಂಡಿದ್ದಾರೆ.

actor shashikumar joined bjp today
ಬಿಜೆಪಿ ಸೇರಿದ ನಟ ಶಶಿಕುಮಾರ್
author img

By

Published : Nov 3, 2022, 11:26 AM IST

ಬೆಂಗಳೂರು: ಚಿತ್ರದುರ್ಗ ಮಾಜಿ ಸಂಸದ ಹಾಗು ಜೆಡಿಎಸ್ ನಾಯಕ ನಟ ಶಶಿಕುಮಾರ್ ಮತ್ತು ತುಮಕೂರು ಕಾಂಗ್ರೆಸ್ ನಾಯಕ, ಮಾಜಿ ಸಂಸದ ಮುದ್ದಹನುಮೇಗೌಡ ತಮ್ಮ ತಮ್ಮ ಪಕ್ಷ ತೊರೆದು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಶಶಿಕುಮಾರ್, ಮುದ್ದಹನುಮೇಗೌಡ ಹಾಗು ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಸೇವಾದಳ ಉಪಾಧ್ಯಕ್ಷ ಹನುಮಂತರಾವ್, ಕಾಂಗ್ರೆಸ್ ನ ವೆಂಕಟಾಚಲಯ್ಯ, ಎಸ್ಪಿ ಪ್ರಧಾನ ಕಾರ್ಯದರ್ಶಿ, ರವಿಕುಮಾರ್, ರೈತ ಸಂಘ, ದಲಿತ ಸಂಘಟನೆ ಮುಖಂಡರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ಶಾಲು ಹೊದಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ನಾಯಕರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ಮುದ್ದಹನುಮೇಗೌಡಗೆ ಕುಣಿಗಲ್ ಕ್ಷೇತ್ರ, ಜೆಡಿಎಸ್​ನಿಂದ ಬಂದ ಶಶಿಕುಮಾರ್ ಚಿತ್ರದುರ್ಗದ ಚಳ್ಳಕೆರೆ ಕ್ಷೇತ್ರ ಮತ್ತು ಬಿಬಿಎಂಪಿ ಮಾಜಿ ಆಯುಕ್ತ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ಇಂದು ಬಿಜೆಪಿ ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.