ETV Bharat / state

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ: ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ 'ತಲೈವಾ'

ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹುಭಾಷಾ ನಟ ರಜನಿಕಾಂತ್​ ಬೆಂಗಳೂರಿಗೆ ಆಗಮಿಸಿದ್ದಾರೆ.

Actor Rajinikanth arrived  Rajinikanth arrived to Bangalore for Appu program  Karnataka Rajyotsava celebration  Kannada Rajyotsava award  Karnataka Ratna award to Puneeth Rajkumar  ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ  ಬೆಂಗಳೂರಿಗೆ ಬಂದಿಳಿದ ತಲೈವಾ  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್  ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ  ಸಮಾರಂಭಕ್ಕೆ ಬಹುಭಾಷಾ ನಟ ರಜನಿಕಾಂತ್  ಜೂನಿಯರ್ ಎನ್​ಟಿಆರ್ ಬೆಂಗಳೂರಿಗೆ  ಸೂಪರ್ ಸ್ಟಾರ್ ರಜನಿಕಾಂತ್  ವಿಧಾನಸೌಧದ ಮುಂಭಾಗ ಅದ್ದೂರಿ ಕಾರ್ಯಕ್ರಮ
ಅಪ್ಪು ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿಳಿದ ತಲೈವಾ
author img

By

Published : Nov 1, 2022, 2:26 PM IST

ಬೆಂಗಳೂರು: ಇಂದು ಸಂಜೆ ವಿಧಾನಸೌಧದ ಮುಂಭಾಗ ನಡೆಯುವ ಭವ್ಯ ಕಾರ್ಯಕ್ರಮದಲ್ಲಿ ದಿ.ಪುನೀತ್ ರಾಜ್‍ಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಗಣ್ಯರ ಸಮ್ಮುಖದಲ್ಲಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗು ಪುನೀತ್ ಅವರ ಆತ್ಮೀಯ ಗೆಳೆಯ ಟಾಲಿವುಡ್ ನಟ ಜೂನಿಯರ್ ಎನ್​ಟಿಆರ್​ ಪಾಲ್ಗೊಂಡು ಗಮನ ಸೆಳೆಯಲಿದ್ದಾರೆ.

ನಿನ್ನೆಯಷ್ಟೇ ಜೂ.ಎನ್​ಟಿಆರ್ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಮಧ್ಯಾಹ್ನ ಸೂಪರ್ ಸ್ಟಾರ್ ರಜನಿಕಾಂತ್ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ಬಂದಿಳಿದ ಅವರನ್ನು ಸಚಿವ ಮುನಿರತ್ನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಚಿವ ಡಾ ಕೆ ಸುಧಾಕರ್ ಇದ್ದರು. ಮತ್ತೊಂದೆಡೆ ಅಭಿಮಾನಿಗಳು ನೆಚ್ಚಿನ ನಟನ ನೋಡಲು ಮುಗಿಬಿದ್ದರು‌. ರಜನಿಕಾಂತ್​ ನೇರವಾಗಿ ಖಾಸಗಿ ಹೊಟೇಲ್​ಗೆ ತೆರಳಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 4 ಗಂಟೆಗೆ ಆರಂಭವಾಗಲಿದೆ.

ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಪುನೀತ್ ವಿಷಯ ಸೇರ್ಪಡೆಗೆ ಹಂತ ಹಂತವಾಗಿ ಕ್ರಮ: ಸಿಎಂ ಬೊಮ್ಮಾಯಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.