ಬೆಂಗಳೂರು: ಮಲ್ಲೇಶ್ವರಂ ಸಂಪಿಗೆ ರಸ್ತೆ ಬಳಿ ತೆರಳುತ್ತಿದ್ದಾಗ ನನ್ನ ಬೈಕ್ಗೆ ಕಾರ್ ಡಿಕ್ಕಿ ಹೊಡೆಯಿತು. ಈ ವಿಚಾರವಾಗಿ ನಟ ಕೋಮಲ್ ಹಾಗೂ ಬೈಕ್ ಸವಾರ ವಿಜಯ ಮಧ್ಯೆ ಜಗಳ ನಡೆದಿತ್ತು. ಪ್ರಶ್ನೆ ಮಾಡಿದ್ದಕ್ಕೆ ಕೋಮಲ್ ಏಕಾ ಏಕಿ ನನ್ನ ಮೇಲೆ ಹಲ್ಲೆಗೆ ಮುಂದಾದರು. ಆಗ, ನಾನು ಅವರ ಮೇಲೆ ಹಲ್ಲೆ ಮಾಡಿದ್ದೇನೆ. ಅವರ ಮೇಲೆ ವೈಯಕ್ತಿವಾಗಿ ನನಗೆ ಯಾವುದೇ ದ್ವೇಷವಿಲ್ಲ ಎಂದು ವಿಜಯ್ ಪೊಲೀಸರಿಗೆ ತಿಳಿಸಿದ್ದಾರೆ.
![Actor Komal collided with a car on my bike](https://etvbharatimages.akamaized.net/etvbharat/prod-images/4133852_thubgl.jpg)
ಘಟನೆ ನಡೆದ ದಿನದಂದೇ ವಿಜಯ್ ಅವರನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದರು. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತನಿಖೆ ನಡೆಸಿದಾಗ ವಿಜಯ್ ಘಟನೆಯ ವಿವರವನ್ನು ಪೊಲೀಸರ ಎದುರು ತಿಳಿಸಿದ್ದಾರೆ.
ನಟ ಕೋಮಲ್ ತಮ್ಮ ಪುತ್ರಿಯನ್ನು ಟ್ಯೂಷನ್ಗೆ ಬಿಡಲು ಕಾರಿನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.