ETV Bharat / state

ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ : ದಚ್ಚು-ಇಜಿಲ ಜಟಾಪಟಿಗೆ ಜಗ್ಗೇಶ್ ಗರಂ

ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕೆ ನೋವಾದರೂ ನಮಗೆ ನಷ್ಟ. ದಯ ಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ. ಈಗಾಗಲೇ ಚಿತ್ರರಂಗ ಕೊರೊನಾ ಹೊಡೆತಕ್ಕೆ ನಲುಗಿದೆ. ಉದ್ಯಮದ ಹಿರಿಯರು ವಾಣಿಜ್ಯಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳನ್ನ ಸರಿ ಮಾಡಿ ಎಂದು ಪ್ರಾರ್ಥನೆ ಮಾಡಿ ಸರ್ವೇ ಜನಃಸುಖಿನೋಭವ..

author img

By

Published : Jul 19, 2021, 2:30 PM IST

ಜಗ್ಗೇಶ್
ಜಗ್ಗೇಶ್

ಬೆಂಗಳೂರು : ಕಳೆದೊಂದು ವಾರದಿಂದ ಕನ್ನಡ ಚಿತ್ರರಂಗದಲ್ಲಿ ದರ್ಶನ್ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳು ಹಲವು ರೂಪಗಳನ್ನು ಪಡೆದಿದೆ. ಅದರಲ್ಲಿ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ, ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ ಎಂದು ವಿನಂತಿ ಮಾಡಿದ್ದಾರೆ. ಈಗಾಗಲೇ ಚಿತ್ರರಂಗ ಕೊರೊನಾ ಹೊಡೆತಕ್ಕೆ ನಲುಗಿದೆ. ಇಂಥ ಸಮಯದಲ್ಲಿ ಉದ್ಯಮದ ಹಿರಿಯರು, ವಾಣಿಜ್ಯಮಂಡಳಿ ಮಧ್ಯಪ್ರವೇಶಿಸಿ ಒಡೆದ ಮನಸ್ಸುಗಳನ್ನು ಸರಿ ಮಾಡಿ ಅಂತಾ ಜಗ್ಗೇಶ್ ಸಲಹೆ ನೀಡಿದ್ದಾರೆ.

ಈ ಬಗ್ಗೆ ಫೇಸ್‍ಬುಕ್​​ನಲ್ಲಿ ವಿವರವಾದ ಪೋಸ್ಟ್ ಬರೆದುಕೊಂಡಿರುವ ನಟ ಜಗ್ಗೇಶ್, ತಮ್ಮ ಪ್ರಾರಂಭದ ದಿನಗಳ ಕಷ್ಟಗಳನ್ನು ನೆನೆದಿದ್ದು ಉದ್ಯಮದ ಬಂಧುಗಳಿಗೆ ತಮ್ಮ ಅನುಭವದ ಮಾತುಗಳನ್ನು ಹೇಳಿದ್ದಾರೆ.

ಜಗ್ಗೇಶ್ ಫೇಸ್‍ಬುಕ್ ಬರಹ ಹೀಗಿದೆ..

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಆನಡುಗು ಎಂಬ ಸಣ್ಣ ಗ್ರಾಮದ ಸಣ್ಣ ಕುಟುಂಬದ ಹಳ್ಳಿಹುಡುಗ ನಾನು ಈಶ್ವರ್ ಗೌಡ @ಜಗ್ಗೇಶ..!

ನನಗೆ ಇದ್ದ ಆಸೆ ರಾಜಕುಮಾರ್ ಕಂಡು ಮಾತಾಡಿಸಿ ಆಶೀರ್ವಾದ ಪಡೆದು ಸಿನಿಮಾ ನಟನಾಗಬೇಕು ಎಂಬುದಷ್ಟೇ.. 1980ಕ್ಕೆ ಆ ಕಾರ್ಯ ಶುರು, ಆಗ ಹೇಗಿದ್ದೆ ನಾನು ದಾಖಲಿಸಿರುವ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ! ಆ ಮುಖಕ್ಕೆ ಆ ಕಾಲಕ್ಕೆ ಸಿನಿಮಾ ನಟ ಆಗುವ ಕನಸ್ಸು. ಈಗಿನ ಜಗ್ಗೇಶ್‌ನ ಮರೆತು ಯೋಚಿಸಿ ಇದು ಸಾಧ್ಯವಾ?

ಆಗ ಅಪ್ಪ ಅಮ್ಮ, ಬಂಧು-ಮಿತ್ರರು ಹೇಳಿದ್ದು, ಉಗಿದದ್ದು ಹೀಗೆ ಮುಚ್ಕೊಂಡು ಅನ್ನ ಹುಡ್ಕೋ ಕ್ಯಾಮೆ ನೋಡು, ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗಮುಂಡೆದೆ ಎಂದು.

ಗುರುಹಿಂದೆ ಗುರಿಮುಂದೆ ಹಠ ಬಿಡಲಿಲ್ಲ. ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡಮುಟ್ಟಿದೆ ಎಂದು ಬಿಟ್ಟರೆ ಆತ್ಮದ್ರೋಹ ಆಗಿ ಬಿಡುತ್ತದೆ. ಕಾರಣ ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು ಮಾಧ್ಯಮಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು.

ಹೇಳಿ ಹೇಗಿದ್ದರಬೇಕು ಅಪಮಾನ, ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು. ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೇ ಬರಹ ಮಾಧ್ಯಮ ಮಾತ್ರ. ನೆನಪಿಡಿ ಇಂದು ನೂರಾರು ಮಾಧ್ಯಮ, ಅಂಗೈಯಲ್ಲೇ ಆಕಾಶ ತೋರಿಸಿ ಹತ್ತಾರು ವರ್ಷ ಸಾಧನೆ ಕ್ಷಣಮಾತ್ರದಲ್ಲೇ ಅನುಮಾನದಿಂದ ಸಾಧಕನ ನೋಡುವಂಥ ಮಾಯಾಜಾಲ #ಸಾಮಾಜಿಕ ಜಾಲತಾಣ.

ಸಿಕ್ಕ ಸಿಕ್ಕವರ ಕೈಲಿ ಈ ಜಾಲ ಸಿಲ್ಲಿ ವಯಸ್ಸು, ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆ, ಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವ ವಿಪರ್ಯಾಸ ದಿನಗಳು. ಇಂದಿನ ಸಾರ್ವಜನಿಕ ಜೀವನ public toilet ನಂತೆ ಆಗಿಬಿಟ್ಟಿದೆ. ಆದರೂ ವಿಧಿಯಿಲ್ಲ ಚರ್ಮ ದಪ್ಪ ಮಾಡಿ ಬದುಕಬೇಕು.

ಈಗ ವಿಷಯಕ್ಕೆ ಬರುವೆ ಈ ಅಕ್ಷರ ಠಂಕಿಸಿದ್ದಕ್ಕೆ. ಉದ್ಯಮದ ಕಲಾ ಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ. ಮಾನ್ಯರೇ, ಬಣ್ಣದ ಬದುಕು ನಶ್ವರ. ಕಲಾವಿದನ ಜೀವನ ನಡೆಯುವವರೆಗೆ ನಾಣ್ಯ, ಮಿಕ್ಕಂತೆ ಸವಕಲು. ಎಲ್ಲಿಯವರೆಗೆ ಕಲಾವಿದ ವರ್ಷಕ್ಕೆ ಮಾತ್ರ ಹೊರ ಬರುವ ಊರ ಮೆರವಣಿಗೆ ದೇವರಂತೆ ಹೊರ ಬರಬೇಕು. ಆಗ ದೇವರ ಪರ ಅದ್ಭುತ ಅನನ್ಯ.

ದಿನ ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲ. ರಾಜನಾಗಲಿ, ಸೇವಕನಾಗಲಿ ಜಗಳ ಘರ್ಷಣೆ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು. ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು. ಹಾಗೆ ಅನ್ಯತಾ ಭಾವಿಸದೆ ನನ್ನ ಮಾತು ಆಲಿಸಬೇಕು ಕಲಾಬಂಧುಗಳು. ಆತ್ಮೀಯ ಮಾಧ್ಯಮ ಮಿತ್ರರು ಕಲಾರಂಗದ ನಮ್ಮಕಾಯಕ ಜನರಿಗೆ ತಲುಪಿಸುವ ನಾವಿಕರು.

ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕೆ ನೋವಾದರೂ ನಮಗೆ ನಷ್ಟ. ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ ಎಂದು ವಿನಂತಿ.

ಇದನ್ನೂ ಓದಿ:ಅವ್ರೇ ಹೇಳಿದ್ದಾರೆ ಮೂರು ಬಿಟ್ಟೋನು ಅಂತಾ.. ಅಂಥವರ ಹತ್ರಾ ಏನು ಮಾತಾಡೋದು?: ದರ್ಶನ್​​ಗೆ ಇಂದ್ರಜಿತ್ ಟಾಂಗ್​

ಈಗಾಗಲೇ ಚಿತ್ರರಂಗ ಕೊರೊನಾ ಹೊಡೆತಕ್ಕೆ ನಲುಗಿದೆ. ಉದ್ಯಮದ ಹಿರಿಯರು ವಾಣಿಜ್ಯಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಪ್ರಾರ್ಥನೆ ಮಾಡಿ ಸರ್ವೇ ಜನಃಸುಖಿನೋಭವ ಅಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.