ETV Bharat / state

ನಟ ಅನಿರುದ್ದ್ ಬ್ಯಾನ್ ಮಾಡೋ ವಿಚಾರ ನಾಳೆ ಫಿಲ್ಮ್ ಚೇಂಬರ್​ನಲ್ಲಿ ನಿರ್ಧಾರ - ನಿರ್ದೇಶಕ ಆರೂರು ಜಗದೀಶ್

ನಟ ಅನಿರುದ್ದ್ ಅವರನ್ನು ಕಿರುತೆರೆಯಲ್ಲಿ ಬ್ಯಾನ್ ಮಾಡೋ ವಿಚಾರ ನಾಳೆ ಫಿಲ್ಮ್ ಚೇಂಬರ್​ನಲ್ಲಿ ನಿರ್ಧಾರವಾಗಲಿದೆ.

ಫಿಲ್ಮ್ ಚೇಂಬರ್
ಫಿಲ್ಮ್ ಚೇಂಬರ್
author img

By

Published : Dec 9, 2022, 8:49 PM IST

ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ರೀತಿಯ ಅಭಿನಯದಿಂದ ಬೇಡಿಕೆ ಹೊಂದಿದ್ದ ನಟ ಅನಿರುದ್ದ್. ಜೊತೆ ಜೊತೆಯಲಿ ಸೀರಿಯಲ್ ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಮನಸ್ತಾಪ ಉಂಟಾಗಿದ್ದರಿಂದ ಎರಡು ವರ್ಷಗಳವರೆಗೆ ಅನಿರುದ್ದ್ ಅವರನ್ನು ಯಾವುದೇ ಧಾರಾವಾಹಿ ಅಥವಾ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳದಂತೆ ಕಿರುತೆರೆ ನಿರ್ಮಾಪಕರ ಸಂಘ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿತ್ತು.

ಈ ನಡುವೆ ನಿರ್ದೇಶಕ ಎಸ್ ನಾರಾಯಣ್ ಜೊತೆ ಸೂರ್ಯವಂಶ ಎಂಬ ಹೊಸ ಸೀರಿಯಲ್​ನಲ್ಲಿ ಅವರು ಅಭಿನಯಿಸುತ್ತಿರೋದು ತಿಳಿದುಬಂದಿದ್ದರಿಂದ ಕಿರುತೆರೆಯ ನಿರ್ಮಾಪಕ ಮತ್ತು ಸದಸ್ಯರು ನಿರ್ದೇಶಕ ಎಸ್. ನಾರಾಯಣ್ ಅವರನ್ನು ಭೇಟಿ‌ ಮಾಡಿದ್ದಾರೆ. ಅಲ್ಲದೇ, ಅನಿರುದ್ಧ್ ಅವರನ್ನು ಬ್ಯಾನ್ ಮಾಡುವಂತೆ ಕೇಳಿಕೊಂಡಿದ್ದಾರೆ.

ಈ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ ಮಾ ಹರೀಶ್, ಗೌರವ ಕಾರ್ಯದರ್ಶಿ ಸುಂದರರಾಜ್, ಉಪಾಧ್ಯಕ್ಷ ಶ್ರೀನಿವಾಸ್, ಗೌರವ ಕಾರ್ಯದರ್ಶಿಗಳಾಗಿ ಸುಂದರ್ ರಾಜ್, ಎಂ. ಎನ್. ಕುಮಾರ್ ನಟ ಅನಿರುದ್ದ್ ಅವ್ರನ್ನು ಕರೆಯಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು.

ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಅವರು ಮಾತನಾಡಿದ್ದಾರೆ

ಚಿತ್ರರಂಗದಲ್ಲಿ ಬ್ಯಾನ್ ಅನ್ನೋ ಪದವೇ ಇಲ್ಲ: ಬಳಿಕ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್, ನಿರ್ಮಾಪಕ ಸಂಘದ ಪದಾಧಿಕಾರಿಗಳ ಜೊತೆ ಫೋನ್ ಕಾನ್ಫರೆನ್ಸ್‌ನಲ್ಲಿ ಮಾತುಕತೆ ಮಾಡಿದ್ದೇವೆ. ನಾಳೆ ಬೆಳಗ್ಗೆ ಫಿಲ್ಮ್ ಚೇಂಬರ್​ಗೆ ಬರ್ತೇವೆ ಎಂದಿದ್ದಾರೆ. ಅವರ ಜೊತೆಗೂ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಬ್ಯಾನ್ ಮಾಡೋದಕ್ಕೆ ಯಾರಿಗೂ ಅಧಿಕಾರ ಇಲ್ಲ. ಹಿರಿತೆರೆ ಹಾಗೂ ಕಿರುತೆರೆ ಎಲ್ಲಾ ಸಂಘಗಳು ಒಂದೇ. ಚಿತ್ರರಂಗದಲ್ಲಿ ಬ್ಯಾನ್ ಅನ್ನೋ ಪದವೇ ಇಲ್ಲ. ನಾವು ಬಳಸಲೂ ಬಾರದು ಎಂದು ಹೇಳಿದರು.

ಬ್ಯಾನ್ ನಿರ್ಧಾರ ತೆಗೆದುಕೊಳ್ಳಬಾರದು: ನಂತರ ಫಿಲ್ಮ್ ಚೇಂಬರ್ ಗೌರವಕಾರ್ಯದರ್ಶಿ ಸುಂದರ್ ರಾಜ್ ಮಾತನಾಡಿ, ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಕಿರುತೆರೆ ಸಿನಿಮಾ ಬಂದ ನಂತರ ಬಂದಿದ್ದು. ಇಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬರೋದು ಸಹಜ. ಕಿರುತೆರೆ ನಿರ್ಮಾಪಕರು ಏಕಪಕ್ಷೀಯವಾಗಿ ಅನಿರುದ್ಧ್ ಅವರನ್ನ ಬ್ಯಾನ್ ಮಾಡೋಕೆ ‌ನಿರ್ಧಾರ ಮಾಡಿದ್ದು ಸರಿ ಅಲ್ಲ. ಅನಿರುದ್​ ಅವರನ್ನ ಅವರು ಏನನ್ನೂ ಕೇಳಲಿಲ್ಲ ಅಂತ ಹೇಳಿದ್ದಾರೆ. ಕಿರುತೆರೆ ಕೂಡ ಒಂದು ಸಂಸ್ಥೆ. ಅವರು ಬ್ಯಾನ್ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.

ನಟ ಅನಿರುದ್ಧ್ ಮಾತನಾಡಿ, ನಾನು ಸಾಕಷ್ಟು ಲೇಖನ ಬರೀತೀನಿ, ನಿಮ್ಗೆಲ್ಲಾ ಗೊತ್ತಿದೆ. ಹಲವು ಲೇಖನದಲ್ಲಿ ವಸುಧೇವ ಕುಟುಂಬಕಂ ಅಂತ ಪದ ಬಳಸಿದ್ದೇನೆ. ಹಾಗೆಂದರೆ ನನ್ನ ಕುಟುಂಬ ಅಂತ ಅರ್ಥ. ಜೊತೆ ಜೊತೆಯಲಿ ಧಾರಾವಾಹಿ ಕೂಡ ನನ್ನ ಕುಟುಂಬ. ಮನೆಯಲ್ಲಿ ಸಮಸ್ಯೆ ಬರೋದು ಸಹಜ. ಅದನ್ನು ಕುಟುಂಬದ ಸದಸ್ಯರು‌ ಬಗೆಹರಿಸಿಕೊಳ್ಳೋದು ಒಳ್ಳೆಯದು. ಆದರೆ ಅವರು ನನ್ನನ್ನು ಕರೆದಿಲ್ಲ. ನಾನೇ ಹೋಗಿ ಮಾತಾಡೋಕೆ ಪ್ರಯತ್ನಪಟ್ಟೆ, ಫೋನ್ ಕಾಲ್ ಮಾಡಿದೆ. ಆದರೆ ಅದಕ್ಕೂ ಅವರು ರೆಸ್ಪಾನ್ಸ್ ಮಾಡಿಲ್ಲ.

ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್‌ಗೆ ಅವರಿಗೆ ಕರೆ ಮಾಡಿದ್ದೇನೆ. ಆದರೆ ಅವರು ಯಾವುದೇ ರಿಪ್ಲೈ ಮಾಡಿಲ್ಲ. ಕೊನೆಗೆ ಮೆಸೇಜ್ ಮಾಡಿ ನನಗೆ ಒತ್ತಡ ಇದೆ ಸರ್ ಅಂತ ವಾಯ್ಸ್ ಮೆಸೇಜ್ ಕಳಿಸಿದ್ರು. ಯಾರ ಒತ್ತಡ ಅಂತ ಕೇಳಿದ್ರೆ ಹೇಳಿಲ್ಲ. ಅದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. 3 ವರ್ಷ ಎರಡು‌ ತಿಂಗಳು ಅವರ ಜೊತೆ ಕೆಲಸ ಮಾಡಿದ್ದೇನೆ. ನನ್ನ ಕರೆದು ಮಾತಾಡಿಲ್ಲ. ಬರೀ ನನ್ನ ಮೇಲೆ ಆರೋಪ ಮಾಡಿದ್ರು. ಅದೆಲ್ಲಾ ಸುಳ್ಳು ಅಂತಾ ಹೇಳಿದರು. ನಾಳೆ ಈ ಸಮಸ್ಯೆಯನ್ನ ಬಗೆಹರಿಸುವುದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭರವಸೆ ಕೊಟ್ಟರು.

ಇದನ್ನೂ ಓದಿ: ನಟ ಅನಿರುದ್ಧ್ ಜತ್ಕರ್​​ಗೆ ಮತ್ತೆ ಶಾಕ್​: ಎಸ್​​ ನಾರಾಯಣ್ ಮುಂದಿನ ನಡೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.