ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆ ಮತದಾನ ಆರಂಭವಾಗಿದೆ. ಬಿಇಟಿ ಕಾನ್ವೆಂಟ್‌ನಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ನಟಿ ಅಮೂಲ್ಯ ಸಹ ಮತದಾನ ಮಾಡಿದರು.
ಕಾರುಣ್ಯ ರಾಮ್ ಸೇರಿದಂತೆ ಇನ್ನೂ ಅನೇಕ ಸ್ಟಾರ್ ನಟ-ನಟಿಯರು ಬಿಇಟಿ ಕಾನ್ವೆಂಟ್‌ನಲ್ಲಿ ಮತ ಚಲಾಯಿಸಲು ಆಗಮಿಸಲಿದ್ದಾರೆ. ಮತದಾನ ಮಾಡಲು ಹಿರಿಯ ಮತದಾರರು ಹುಮ್ಮಸ್ಸಿನಿಂದಲೇ ಮತಗಟ್ಟೆಗೆ ಆಗಮಿಸುತ್ತಿದ್ದಾರೆ.
ಬಿಇಟಿ ಕಾನ್ವೆಂಟ್‌ನಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅಲ್ಲದೆ ಮತ ಚಲಾಯಿಸಲು ಬರುವವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಎಲ್ಲ ರೀತಿಯ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊರೊನಾ ಹಿನ್ನೆಲೆ ಎಲ್ಲ ಸುರಕ್ಷಿತ ಕ್ರಮ ಕೈಗೊಂಡಿದ್ದಾರೆ. ಕೊರೊನಾ ಇರುವುದರಿಂದ ವೋಟಿಂಗ್ ಕಷ್ಟ ಅನ್ಕೊಂಡಿದ್ದೆವು. ಆದರೆ ಆರಾಮಾಗಿದೆ. ನಾವು ಮಾಸ್ಕ್ ತಂದಿದ್ದೇವೆ, ಸ್ಯಾನಿಟೈಸರ್ ಇದೆ. ಅವರು ಗ್ಲೌಸ್ ಇಟ್ಟಿದ್ದಾರೆ. ಎಲ್ಲರೂ ಭಯಬಿಟ್ಟು ಬಂದು ಮತದಾನ ಮಾಡಿ ಎಂದು ನಟಿ ಅಮೂಲ್ಯ ಹೇಳಿದರು.