ETV Bharat / state

ಹಾಡಹಗಲೇ ಬಿಎಂಟಿಸಿ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ: ಬೆಚ್ಚಿಬಿದ್ದ ಬೆಂಗಳೂರು - Acid attack on BMTC conductor Indira

ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬಿಎಂಟಿಸಿ ಮಹಿಳಾ ಕಂಡಕ್ಟರ್​ ಮೇಲೆ ದುಷ್ಕರ್ಮಿಗಳು ಆ್ಯಸಿಡ್​ ದಾಳಿ ನಡೆಸಿದ್ದಾರೆ.

ಹಾಡಹಗಲೇ ಬಿಎಂಟಿಸಿ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ,acid-attack-on-bmtc-conductor
ಹಾಡಹಗಲೇ ಬಿಎಂಟಿಸಿ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ
author img

By

Published : Dec 19, 2019, 6:27 PM IST

Updated : Dec 19, 2019, 7:39 PM IST

ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ಬಾಗಲಗುಂಟೆ ಸರ್ಕಲ್ ಬಳಿ ನಡೆದಿದೆ.

ಬಿಎಂಟಿಸಿ ಕಂಡಕ್ಟರ್ ಆಗಿರುವ ‌ಇಂದಿರಾ ಬಾಯಿ ಎಂಬುವರ ಮೇಲೆ ಆ್ಯಸಿಡ್ ಎರಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಾಳುವನ್ನು ಸಪ್ತಗಿರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಸೌಂದರ್ಯ ಕಾಲೇಜು ಬಳಿ ಇರುವ ಇಂದಿರಾ ಬಾಯಿ ಮನೆಯ ಸಮೀಪದಲ್ಲಿ ಕೆಲಸಕ್ಕೆಂದು ಹೋಗುವಾಗ ಬೈಕಿನಲ್ಲಿ ಬಂದ ಆರೋಪಿಗಳು ಮಹಿಳೆಯ ಮುಖ ಹಾಗೂ ಎದೆ ಭಾಗಕ್ಕೆ ಆ್ಯಸಿಡ್ ಎರಚಿದ್ದಾರೆ.

ಕಂಡಕ್ಟರ್ ಮುಖಕ್ಕೆ ಆ್ಯಸಿಡ್ ದಾಳಿ,  Acid attack on BMTC conductor ಸಿಡ್ ದಾಳಿ,
ಕಂಡಕ್ಟರ್ ಮುಖಕ್ಕೆ ಆ್ಯಸಿಡ್ ದಾಳಿ

ಇನ್ನು, ಆರು ತಿಂಗಳ ಹಿಂದೆಯಷ್ಟೇ ಇವರ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ ಕೂಡ ಮಾಡಲಾಗಿತ್ತು. ಅದರೆ ಅದು ಅಕಸ್ಮಿಕ ಅಪಘಾತ ಎಂದು ತಿಳಿದುಕೊಂಡಿದ್ದ ಇಂದಿರಾ ಬಾಯಿ ಯಾವುದೇ ದೂರು ನೀಡಿರಲಿಲ್ಲವಂತೆ.

ಯಾರು ಯಾವ ಕಾರಣಕ್ಕೆ ಆ್ಯಸಿಡ್ ದಾಳಿ ಮಾಡಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಸ್ಥಳಕ್ಕೆ ನಗರ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:Body:ಹಾಡಹಾಗಲೇ ಮಹಿಳಾ ಬಿಎಂಟಿಸಿ ಕಂಡಕ್ಟರ್ ಮುಖಕ್ಕೆ ಆ್ಯಸಿಡ್ ಎರಚಿದ ಕಿರಾತಕರು

ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ಬಾಗಲಗುಂಟೆ ಸರ್ಕಲ್ ಬಳಿ ನಡೆದಿದೆ ಬಿಎಂಟಿಸಿ ಕಂಡಕ್ಟರ್ ಆಗಿರುವ ‌ಇಂದಿರಾ ಬಾಯಿ ಮೇಲೆ ಆಸಿಡ್ ಎರಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಾಳುವನ್ನು ಸಪ್ತಗಿರಿ ಅಸ್ಪತ್ರೆಗೆ ರವಾನಿಸಲಾಗಿದೆ‌
ಸೌಂದರ್ಯ ಕಾಲೇಜು ಬಳಿ ಇರುವ ಇಂದಿರಾ ಬಾಯಿ ಮನೆಯ ಸಮೀಪದಲ್ಲಿ ಕೆಲಸಕ್ಕಾಗಿ ಹೋಗುವಾಗ ಬೈಕಿನಲ್ಲಿ ಬಂದ ಆರೋಪಿಗಳು ಮಹಿಳೆಯ ಮುಖ ಹಾಗೂ ಎದೆಗೆ ಆ್ಯಸಿಡ್ ಎರಚಿದ್ದಾರೆ. ಯಾರು ಯಾವ ಕಾರಣಕ್ಕೆ ಆಸಿಡ್ ದಾಳಿ ಮಾಡಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಸ್ಥಳಕ್ಕೆ ನಗರ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಆರು ತಿಂಗಳ ಹಿಂದೆ ಕಾರು ಹತ್ತಿಸಿ ಇಂದಿರಾ ಬಾಯಿ ಕೊಲೆ ಯತ್ನ ಮಾಡಲಾಗಿತ್ತು. ಅದರೆ ಅದು ಅಕಸ್ಮಿಕ ಅಪಘಾತ ಎಂದು ದೂರು ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ‌ ಕೈಗೊಂಡಿದ್ದಾರೆ.Conclusion:
Last Updated : Dec 19, 2019, 7:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.