ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಡುಪಿ ಮೂಲದ ಆದಿತ್ಯರಾವ್ ಎಂಬಾತ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರಿನ ನೃಪತುಂಗ ರಸ್ತೆ ಬಳಿ ಇರುವ ಡಿಜಿಐಜಿಪಿ ಕಚೇರಿಗೆ ಬಂದು ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಹುಸಿ ಬಾಂಬ್ ಕರೆಯಿಂದ ಆದಿತ್ಯರಾವ್ ಅರೆಸ್ಟ್ ಆಗಿದ್ದ. ಇಂದು ಡಿಜಿ ಕಚೇರಿಗೆ ಬಂದು ಶರಣಾದ ಹಿನ್ನೆಲೆ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸ್ರು ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮುಂದುವರೆಸಲಿದ್ದಾರೆ. (ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ..)
ಎರಡು ದಿನಗಳ ಹಿಂದೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ನಂತ್ರ ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಈತನೇ ಇಟ್ಟಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದ ಪೊಲೀಸ್ರು ಹುಡುಕಾಟ ನಡೆಸಿದ್ರು. ಆದ್ರೆ ಆರೋಪಿ ಇಂದು ಬೆಳಗ್ಗೆ 7 ಗಂಟೆಗೆ ಡಿಜಿ-ಐಜಿಪಿ ಮುಂದೆ ಶರಣಾಗಿ, ನಾನೇ ಬಾಂಬ್ ಇಟ್ಟಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: (ಬಾಂಬ್ ನಿಷ್ಕ್ರಿಯ ತಂಡದಿಂದ ಸ್ಫೋಟಗೊಂಡ ಬಾಂಬ್: ನಿಟ್ಟುಸಿರು ಬಿಟ್ಟ ಜನತೆ)
ಜನವರಿ 20 ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುಧಾರಿತ ಸ್ಫೋಟಕಗಳಿದ್ದ(IED) ಬ್ಯಾಗ್ ಪತ್ತೆಯಾಗಿದ್ದು ದೇಶಾದ್ಯಂತ ಸುದ್ದಿಯಾಗಿತ್ತು.
ಇದನ್ನೂ ಓದಿ: (ಬಾಂಬ್ನಿಂದಾಗುತ್ತಿದ್ದ ದುರಂತ ತಪ್ಪಿಸಿ ಹೀರೋ ಆಯ್ತು ಈ ಜಾಕ್!)