ETV Bharat / state

ಬಿಹಾರದಲ್ಲಿ ಕುಳಿತು ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ದಂಧೆ ನಿರ್ವಹಿಸುತ್ತಿದ್ದ ಆರೋಪಿ ಬಂಧನ - ಡಿಲವರಿ ಬಾಯ್ಸ್

ಬಿಹಾರದಿಂದ ಬೆಂಗಳೂರಿನಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ದಂಧೆ ನಿರ್ವಹಿಸುತ್ತಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ಪಿಟ್ ಎನ್​​ಡಿಪಿಎಸ್ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

Akhilesh Kumar Singh is the arrested accused
ಅಖಿಲೇಶ್ ಕುಮಾರ್ ಸಿಂಗ್ ಬಂಧಿತ ಆರೋಪಿ
author img

By ETV Bharat Karnataka Team

Published : Nov 24, 2023, 5:33 PM IST

ಬೆಂಗಳೂರು: ಬಿಹಾರದಲ್ಲಿ ಕುಳಿತು ಬೆಂಗಳೂರಿನಲ್ಲಿ ಮಾದಕ ಪದಾರ್ಥ, ಅದರ ಉಪ ಉತ್ಪನ್ನಗಳ ಸಾಗಣೆ ದಂಧೆ ನಿಯಂತ್ರಿಸುತ್ತಿದ್ದ ಕುಖ್ಯಾತ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಅಖಿಲೇಶ್ ಕುಮಾರ್ ಸಿಂಗ್ ಬಂಧಿತ ಆರೋಪಿ. 2018ರಿಂದ ವ್ಯವಸ್ಥಿತವಾಗಿ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಪಿಟ್ ಎನ್ ಡಿಪಿಎಸ್ (ಮಾದಕ ಪದಾರ್ಥ ಮತ್ತದರ ಉಪ ಉತ್ಪನ್ನಗಳ ಅಕ್ರಮ ಸಾಗಣೆ ತಡೆ ಕಾಯ್ದೆ)ಯಡಿ ಬಂಧಿಸಲಾಗಿದೆ.

ಬೆಂಗಳೂರ ಸಮೀಪದ ಬಾಗಲೂರಿನಲ್ಲಿ ಬಾಡಿಗೆ ಮನೆಯೊಂದನ್ನು ಪಡೆದಿದ್ದ ಅರೋಪಿ, 8 ಜನ ಬಿಹಾರ ಮೂಲದ ಯುವಕರನ್ನು ಮಾದಕ ಸರಬರಾಜು ದಂಧೆಗೆ ನೇಮಕಗೊಳಿಸಿದ್ದ. ಅವರಿಗೆ ಬಿಹಾರದಿಂದ ವಿವಿಧ ಮಾದಕ ಪದಾರ್ಥಗಳನ್ನ ರವಾನಿಸುತ್ತಿದ್ದ. ಆರೋಪಿ ಅಖಿಲೇಶ್ ಸಿಂಗ್ ಸೂಚನೆಯಂತೆ ಬೆಂಗಳೂರಿನಲ್ಲಿದ್ದ ಆರೋಪಿಗಳು ಇಲ್ಲಿನ ಸ್ಥಳೀಯ ಮಾದಕ ಸರಬರಾಜುಗಾರರಿಗೆ ಡಿಲವರಿ ಬಾಯ್ಸ್ ಸೋಗಿನಲ್ಲಿ ತೆರಳಿ ಮಾದಕ ಪದಾರ್ಥ ಪೂರೈಕೆ ಮಾಡುತ್ತಿದ್ದರು. ಈ ಕೆಲಸಕ್ಕೆ ಪ್ರತಿಯಾಗಿ ಪ್ರತಿ ಆರೋಪಿಗಳಿಗೆ ತಿಂಗಳಿಗೆ ಮೂವತ್ತು ಸಾವಿರ ಸಂಬಳವನ್ನು ಅಖಿಲೇಶ್ ಸಿಂಗ್ ಪಾವತಿಸುತ್ತಿದ್ದ. ಈ ಮಾದಕ ವಸ್ತು ಅಕ್ರಮ ಸಾಗಣೆ ಮಾರಾಟ ದಂಧೆಯನ್ನು ಭೇದಿಸಲು ಬೆಂಗಳೂರಿನಲ್ಲಿ ವಿಶೇಷ ಪೊಲೀಸರು ತಂಡ ರಚಿಸಲಾಗಿತ್ತು.

ಅಕ್ರಮವಾಗಿ ಮಾದಕ ವಸ್ತು ಮಾರಾಟದ ಕಿಂಗ್​ಪಿನ್ ಆರೋಪಿ ಅಖಿಲೇಶ್ ಕುಮಾರ್ ಸಿಂಗ್ ವಿರುದ್ದ ನಗರದ ವಿವಿಧೆಡೆ ಆರು ಪ್ರಕರಣಗಳು ದಾಖಲಾಗಿವೆ. ಆರೋಪಿ ಅಖಿಲೇಶ್ ಸಿಂಗ್​ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಪಿಟ್ ಎನ್​​ಡಿಪಿಎಸ್ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ತಿಳಿಸಿದ್ದಾರೆ.

ಪಿಟ್ ಎನ್.ಡಿ.ಪಿ.ಎಸ್ ಕಾಯ್ದೆ ಎಂದರೇನು?: ಮಾದಕ ಪದಾರ್ಥ ಮತ್ತದರ ಉಪ ಉತ್ಪನ್ನಗಳ ಅಕ್ರಮ ಸಾಗಣೆ ತಡೆಗಟ್ಟುವಿಕೆಗೆ ಬಳಸಲಾಗುವ ಕಾಯ್ದೆಯನ್ನು ಪಿಟ್ ಎನ್.ಡಿ.ಪಿ.ಎಸ್ ಕಾಯ್ದೆ ಎನ್ನಲಾಗುತ್ತಿದೆ. ಈ ಕಾಯ್ದೆಯಡಿ ಬಂಧಿತ ಆರೋಪಿ ಕನಿಷ್ಠ ಒಂದು ವರ್ಷ ಸೆರೆವಾಸ ಅನುಭವಿಸಬೇಕಾಗುತ್ತದೆ.

ಪೊಲೀಸ್ ಇನ್​ಸ್ಪೆಕ್ಟರ್ ಖಾತೆಗೆ ಆನ್​ಲೈನ್ ವಂಚಕರು ಕನ್ನ: ಪೊಲೀಸ್ ಇನ್ಸ್​​ಪೆಕ್ಟರ್​ ಒಬ್ಬರ ಖಾತೆಗೆ ಆನ್​ಲೈನ್ ವಂಚಕರು ಕನ್ನ ಹಾಕಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ಉಪನಗರ ಠಾಣೆ ಇನ್​ಸ್ಪೆಕ್ಟರ್ ದಯಾನಂದ ಶೇಗುಣಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 8.25 ಲಕ್ಷ ಹಣವನ್ನು ಅಪರಿಚಿತರು ವರ್ಗಾವಣೆ ಮಾಡಿಕೊಂಡಿದ್ದು, ಈ ಕುರಿತಂತೆ ಅವರು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್​ ಸ್ವಿಚ್ಡ್ ಆಫ್ ಆಗಿರುವ ಸಂದರ್ಭದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 50 ಸಾವಿರ ಹಣವನ್ನು 12 ಬಾರಿ ಹಾಗೂ 45 ಸಾವಿರ ಮೂರು ಬಾರಿ, 25 ಸಾವಿರ ಎರಡು ಬಾರಿ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂಓದಿ:ಎಚ್ಚರ.. ಎಚ್ಚರ.. ಆನ್​ಲೈನ್​ನಲ್ಲಿ ಹಣಗಳಿಸಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.