ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಟೆಂಪೋ ಟ್ರಾವೆಲರ್ ಕದ್ದೊಯ್ದಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಬೋರೇಗೌಡ ಬಂಧಿತ ವ್ಯಕ್ತಿ. ಈ ಹಿಂದೆ ಅದೇ ಟೆಂಪೋ ಟ್ರಾವೆಲರ್ ಚಾಲಕನಾಗಿದ್ದ ಈತ, ಕೆಲಸ ಬಿಟ್ಟ ನಂತರ ನಿರುದ್ಯೋಗಿಯಾಗಿದ್ದ. ಹೀಗಾಗಿ ನಕಲಿ ಕೀ ಬಳಸಿ ವಾಹನ ಕದ್ದೊಯ್ದಿದ್ದ ಎಂದು ತಿಳಿದುಬಂದಿದೆ.
ಪೊಲೀಸರು ಬಂಧಿತನಿಂದ ಅಂದಾಜು 5 ಲಕ್ಷ ರೂ ಮೌಲ್ಯದ 1 ಟೆಂಪೋ ಟ್ರಾವೆಲರ್ ವಶಕ್ಕೆ ಪಡೆದಿದ್ದಾರೆ.