ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮುಖ್ಯ ಆರೋಪಿ ನವೀನ್‌ಗೆ ಅನಾರೋಗ್ಯ ಎದುರಾಗಿದೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ನವೀನ್‌ನನ್ನ ಪೊಲೀಸರು ಬಂಧಿಸಿದ್ದರು. ಇದೀಗ ಜೈಲಿನಲ್ಲಿದ್ದ ಆರೋಪಿ ನವೀನ್‌ಗೆ ಕಿಡ್ನಿ ಫೇಲ್ಯೂರ್ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎನ್ನಲಾಗಿದೆ.
ನಗರ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ನವೀನ್‌ನ ದಾಖಲಿಸಿದ್ದಾರೆ. ಈತ ಕಳೆದ ಐದು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರ ತೀವ್ರ ಭದ್ರತೆಯಲ್ಲಿ ನವೀನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜಗೆ ಕಿಡ್ನಿ ಸಮಸ್ಯೆ ಎದುರಾಗಿದೆ. ನಿನ್ನಯಷ್ಟೇ ನವೀನ್‌ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 2018ರ ಫೆಬ್ರವರಿಯಲ್ಲಿ ಪ್ರಕರಣದ ಸಂಬಂಧ ಮೊದಲ ಆರೋಪಿಯಾಗಿ ನವೀನ್‌ನನ್ನ ಬಂಧಿಸಿಲಾಗಿತ್ತು.
ಮದ್ದೂರು ತಾಲೂಕಿನ ಹಿಂದೂ ಪರ ಸಂಘಟನೆಯ ಮುಖಂಡನಾಗಿ ಕೆ ಟಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಕೆಲಸ ಮಾಡುತ್ತಿದ್ದ. ತನಿಖೆ ವೇಳೆ ಎಸ್‌ಐಟಿ ಟೀಂ ನವೀನ್‌ನನ್ನ ಬಂಧಿಸಿದ್ದರು. ಬಳಿಕ ಆತನ ವಿರುದ್ಧ ಮೇ ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಗತಿಪರ ಚಿಂತಕ ಪ್ರೊ.ಕೆ ಎಸ್ ಭಗವಾನ್ ಕೊಲೆ ಯತ್ನ ಕೇಸ್‌ನಲ್ಲೂ ಆರೋಪಿ ಪಾತ್ರ ಕೇಳಿ ಬಂದಿತ್ತು. ಎಸ್‌ಐಟಿ ಒಟ್ಟು 4 ಸಾವಿರಕ್ಕೂ ಅಧಿಕ ಪುಟದ ಆರೋಪ ಪಟ್ಟಿ ಸಲ್ಲಿಸಿತ್ತು. ಸದ್ಯ ಈತನ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ, ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಯುವತಿಯರಿಗೆ ನಡುರಸ್ತೆಯಲ್ಲೇ ಕಿರುಕುಳ ನೀಡಿದ ಪುಂಡರು... ವಿಡಿಯೋ ವೈರಲ್