ETV Bharat / state

ವಿಷ ಕುಡಿಸಿ ನವವಿವಾಹಿತೆಯನ್ನ ಕೊಲೆ ಮಾಡಲು ಯತ್ನಿಸಿದ ಆರೋಪ : ಗಂಡನಿಗಾಗಿ ಖಾಕಿ ಶೋಧ

ಪತಿಯ ಕರೆಯಂತೆ ನಿನ್ನೆ ಸಂಜೆ ಮರಿಯಮ್ಮನಪಾಳ್ಯದ ಪತಿ ಮನೆಗೆ ಪಾವನ ತೆರಳಿದ್ದು, ಈ ವೇಳೆ ಪಾವನರಿಗೆ ಹಲ್ಲೆ ಮಾಡಿ ವಿಷ ಕುಡಿಸಿದ್ದಾರೆ ಎಂದು ಪಾವನ ಕುಟುಂಬಸ್ಥರು ಆರೋಪ ಮಾಡಿದ್ದಾರೆ..

Accused of attempted murder of wife by husband
ವಿಷ ಕುಡಿಸಿ ನವವಿವಾಹಿತೆಯನ್ನ ಕೊಲೆ ಮಾಡಲು ಯತ್ನ ಆರೋಪ
author img

By

Published : Dec 28, 2020, 9:01 AM IST

ಬೆಂಗಳೂರು : ವಿಷ ಕುಡಿಸಿ ನವವಿವಾಹಿತೆಯನ್ನ ಕುಟುಂಬಸ್ಥರು ಕೊಲೆ ಮಾಡಲು ಯತ್ನ ಮಾಡಿರುವ ಆರೋಪ ಕೇಳಿ ಬಂದಿದೆ.

ಗಂಡ ಪ್ರದೀಪ್ ಹಾಗೂ ಅವರ ತಂದೆ, ತಾಯಿ ನಾದಿನಿ ಮೇಲೆ ಈ ಆರೋಪ ಮಾಡಲಾಗಿದೆ. ನಗರದ ಕೆಂಪೇಗೌಡ ಕಾಲೇಜಿನಲ್ಲಿ‌ ನರ್ಸಿಂಗ್ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಪಾವನಗೆ, ಕಳೆದ ಆರು ತಿಂಗಳ ಹಿಂದೆ ಪ್ರದೀಪ್ ಜೊತೆ ವಿವಾಹವಾಗಿತ್ತು.

ಪ್ರದೀಪ್ ಫ್ಯಾಮಿಲಿ ಕೋರ್ಟ್‌ನಲ್ಲಿ ಶಿರಸ್ತೇದಾರ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ, ಮದುವೆಯಾದಾಗಿನಿಂದ ಹಲವು ಬಾರಿ ಗಂಡ-ಹೆಂಡತಿ ಮಧ್ಯೆ ಜಗಳವಾಗಿತ್ತು. ಇದರಿಂದ ಬೇಸತ್ತ ಪಾವನಾ ತವರು ಮನೆಯಲ್ಲಿ ವಾಸವಾಗಿದ್ದರು. ಆದರೆ, ಗಂಡ 15 ದಿನಗಳೊಳಗಾಗಿ ಮನೆಗೆ ವಾಪಸ್ ಬರಬೇಕು ಅಂತಾ ಪತ್ನಿಗೆ ನೋಟಿಸ್ ಕಳಿಸಿದ್ದ.

ಹಾಗೆ ನಿನ್ನೆ ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾರೆ. ಪತಿಯ ಕರೆಯಂತೆ ನಿನ್ನೆ ಸಂಜೆ ಮರಿಯಮ್ಮನಪಾಳ್ಯದ ಪತಿ ಮನೆಗೆ ಪಾವನ ತೆರಳಿದ್ದು, ಈ ವೇಳೆ ಪಾವನರಿಗೆ ಹಲ್ಲೆ ಮಾಡಿ ವಿಷ ಕುಡಿಸಿದ್ದಾರೆ ಎಂದು ಪಾವನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಸದ್ಯ ಪಾವನರ ಸ್ಥಿತಿ ಗಂಭೀರಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ, ಹಣ ಪಡೆದು ಆರೋಪಿಯನ್ನ ಪೊಲೀಸರು ಬಿಟ್ಟು ಕಳಿಸಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಗಂಡ ಪ್ರದೀಪ್​​ಗಾಗಿ ಕುಟುಂಬಸ್ಥರ ಒತ್ತಡದ ಮೇರೆಗೆ ಶೋಧ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.