ETV Bharat / state

ಪೊಲೀಸರ ಮೇಲೆ ಹಲ್ಲೆ ಆರೋಪ : ಎಂಎಲ್​ಸಿ ಪುತ್ರ ಸೇರಿ ಮೂವರು ಪೊಲೀಸರ ವಶಕ್ಕೆ - ನಾಸಿರ್ ಅಹಮದ್ ಪುತ್ರ ಫಯಾಜ್ ಅಹಮದ್

ತಕ್ಷಣ ಸ್ಥಳಕ್ಕೆ ಹೊಯ್ಸಳ ಕರೆಸಿ ಹಲ್ಲೆ ನಡೆಸಿದ ಮೂವರನ್ನೂ ವಶಕ್ಕೆ ಪಡೆದಿರುವ ಅಮೃತಹಳ್ಳಿ‌ ಪೊಲೀಸರು ಸದ್ಯ ತನಿಖೆ ಮುಂದುವರೆಸಿದ್ದಾರೆ..

Accused of assaulting police All three accused were taken into police custody
ಪೊಲೀಸರ ಮೇಲೆ ಹಲ್ಲೆ ಆರೋಪ
author img

By

Published : Dec 7, 2020, 10:07 AM IST

ಬೆಂಗಳೂರು : ಎಂಎಲ್​​ಸಿ ಮಗ ಮತ್ತವನ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷದ ಎಂಎಲ್​​ಸಿ ನಾಸೀರ್ ಅಹ್ಮದ್ ಪುತ್ರ ಪಯಾಜ್ ಹಾಗೂ ಆತನ ಸ್ನೇಹಿತರು ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು.

ಈ ಹಿನ್ನೆಲೆ ಹೆಬ್ಬಾಳದ ಬಿಎಂಟಿಸಿ ಡಿಪೋ ಬಳಿ ಬರುತ್ತಿದ್ದ ವೇಳೆ ಕಾರು ತಡೆದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಇಬ್ಬರು ಪೊಲೀಸರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯಪಾನ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ನಾಸಿರ್ ಅಹಮದ್ ಅವರ ಪುತ್ರ ಫಯಾಜ್ ಅಹಮದ್ ಸೇರಿದಂತೆ ಮೂವರು ಪೊಲೀಸರ ಮೇಲೆ ಏಕಾಏಕಿ ಹಲ್ಲೆ ‌ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತಕ್ಷಣ ಸ್ಥಳಕ್ಕೆ ಹೊಯ್ಸಳ ಕರೆಸಿ ಹಲ್ಲೆ ನಡೆಸಿದ ಮೂವರನ್ನೂ ವಶಕ್ಕೆ ಪಡೆದಿರುವ ಅಮೃತಹಳ್ಳಿ‌ ಪೊಲೀಸರು ಸದ್ಯ ತನಿಖೆ ಮುಂದುವರೆಸಿದ್ದಾರೆ.

ಓದಿ :ಹಣದ ವಿಚಾರಕ್ಕೆ ಗಲಾಟೆ : ಇಬ್ಬರು ಅತಿಥಿ ಕಾರ್ಮಿಕರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.