ETV Bharat / state

ಪೊಲೀಸ್ ವಶದಲ್ಲಿರುವಾಗಲೇ ಠಾಣೆಯಲ್ಲಿ ಆರೋಪಿ ಸಾವು: ಮೃತನ ಕುಟುಂಬಸ್ಥರ ಆರೋಪಕ್ಕೆ ಪೊಲೀಸರು ಹೇಳಿದ್ದೇನು? - ಜಾಮೀನು ರಹಿತ ವಾರೆಂಟ್​ನಲ್ಲಿ ಬಂಧನಕ್ಕೊಳಗಾದ ಆರೋಪಿ

ಜಾಮೀನಿನಲ್ಲಿ ಜೈಲಿನಿಂದ ಹೊರಬಂದಿದ್ದ ಆರೋಪಿ- ವಿಚಾರಣೆಗೆ ಹಾಜರಾಗುವಂತೆ ವಿನೋದ್​ಗೆ ನ್ಯಾಯಾಲಯ ಸೂಚನೆ- ಜಾಮೀನು ರಹಿತ ವಾರೆಂಟ್​ನಲ್ಲಿ ಬಂಧನಕ್ಕೊಳಗಾದ ಆರೋಪಿ- ಕಾಟನ್​ ಪೇಟೆ ಪೊಲೀಸ್​ ಕಸ್ಟಡಿಯಲ್ಲಿ ಸಾವು

Died accused Vinod
ಮೃತ ಆರೋಪಿ ವಿನೋದ್​
author img

By

Published : Jan 5, 2023, 3:41 PM IST

ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ ಆರೋಪದಡಿ ಬಂಧಿಸಲ್ಪಟ್ಟಿದ್ದ ಆರೋಪಿಯೊಬ್ಬ ಪೊಲೀಸ್​ ವಶದಲ್ಲಿದ್ದಾಗಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಕಾಟನ್​ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಆರೋಪಿ ಸಾವು ಸಹಜ ಸಾವಲ್ಲ, ಇದು ಲಾಕಪ್​ ಡೆತ್​ ಆಗಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಾಟನ್ ಪೇಟೆಯ ಭಕ್ಷಿ ಗಾರ್ಡನ್ ನಿವಾಸಿಯಾಗಿದ್ದ 23 ವರ್ಷದ ಆರೋಪಿ ವಿನೋದ್ ಪೈಂಟಿಂಗ್​ ಸೇರಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ‌‌ನು. ಈತ 17 ವರ್ಷದವನಾಗಿದ್ದಾಗಲೇ ಕಾಟನ್ ಪೇಟೆ ಪೊಲೀಸರು, ಈತನನ್ನು ದರೋಡೆಗೆ ಸಂಚು ರೂಪಿಸಿದ ಆರೋಪದಡಿ ನಾಲ್ಕನೇ ಆರೋಪಿಯಾಗಿ ಬಂಧಿಸಿದ್ದರು. ವಿನೋದ್​ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದನು. ಜಾಮೀನಿನಲ್ಲಿ ಹೊರಗೆ ಇದ್ದ ಈತನಿಗೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಹಾಜರಾಗದೇ ತಲೆಮರೆಸಿಕೊಂಡಿದ್ದನಂತೆ.

ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದರೂ ವಿನೋದ್ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಆರೋಪಿಯನ್ನು ಬಂಧಿಸುವಂತೆ ಕೋರ್ಟ್ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. ಕೋರ್ಟ್ ಆದೇಶದಂತೆ ಬುಧವಾರದಂದರು ಸಂಜೆ ಕಾಟನ್​ ಪೇಟೆ ಪೊಲೀಸರು ವಿನೋದ್ ನನ್ನು ವಶಕ್ಕೆ‌ ಪಡೆದುಕೊಂಡಿದ್ದರು. ಆದರೆ ನಸುಕಿನ ಜಾವ 3.45 ರ ವೇಳೆ‌ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿನೋದ್ ನನ್ನು ಠಾಣಾ ಸಿಬ್ಬಂದಿ ನೋಡಿದ್ದಾರೆ. ಆ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಯನ್ನು ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಆದಾಗಲೇ ವಿನೋದ್​ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಆರೋಪಿ ವಿರುದ್ಧ 2017 ರಲ್ಲಿ ಕಾಟನ್ ಪೇಟೆ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿತ್ತು‌‌‌. ನ್ಯಾಯಾಲಯದಿಂದ (NBW) ಜಾಮೀನು ರಹಿತ ವಾರೆಂಟ್​ ಜಾರಿಯಾಗಿತ್ತು. ನಿನ್ನೆ ಸಂಜೆ ಆತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಾತ್ರಿ ವೇಳೆ ಠಾಣೆಯಲ್ಲಿ ಮಲಗಿದ್ದಾನೆ.‌ ಇಂದು ನಸುಕಿನ ಜಾವ 3‌.45 ವೇಳೆಗೆ ನಮ್ಮ ಸಿಬ್ಬಂದಿ ಹೋಗಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ವೇಳೆ ಆತ ಎದ್ದಿಲ್ಲ, ಕೂಡಲೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ‌ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಮಾರ್ಗ‌ಮಧ್ಯದಲ್ಲೇ ಆರೋಪಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸದ್ಯ ಈಗ CRPC 176 (ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಸ್ಟೋಡಿಯಲ್ ಪ್ರಕರಣದ ಎಲ್ಲಾ ಮಾರ್ಗಸೂಚಿಗಳನ್ನು ನಾವು ಪಾಲಿಸಿದ್ದೇವೆ. ಮುಂದಿನ ತನಿಖೆಗೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು‌ ಡಿಸಿಪಿ ಮಾಹಿತಿ ನೀಡಿದ್ದಾರೆ.

ಲಾಕಪ್​ನಲ್ಲೇ ವಿನೋದ್​ ಸಾವನ್ನಪ್ಪಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆತನ ಕುಟುಂಬಸ್ಥರು, ವಿನೋದ್ ಸಾವು ಸಹಜ ಸಾವಲ್ಲ. ಇದು ಅಸಹಜ ಸಾವಾಗಿದೆ. ವಿನೋದ್​ನ ತಲೆಗೆ ಪೆಟ್ಟಾಗಿದೆ. ಲಾಕಪ್​ನಲ್ಲಿ ಆತನಿಗೆ ದೈಹಿಕ ಹಿಂಸೆ ನೀಡಲಾಗಿದೆ. ಪೊಲೀಸರು ಆತನಿಗೆ ಏನೋ‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಲಾಕಪ್ ಡೆತ್ ಊಹಾಪೋಹಕ್ಕೆ ತೆರೆ.. ವ್ಯಕ್ತಿ ಸಾವಿಗೆ ಕಾರಣ ಬಹಿರಂಗ, ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.